For Quick Alerts
  ALLOW NOTIFICATIONS  
  For Daily Alerts

  ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!

  |

  'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಪಾಂಡವಪುರ ಅತಿ ಹೆಚ್ಚು ಕಾಲ ಕಳೆದಿರುವುದು ಎಂ.ಜೆ.ರಾಕೇಶ್ ಜೊತೆಗೆ. ಇಬ್ಬರ ನಡುವೆ ಮೊದಮೊದಲು ಆತ್ಮೀಯ ಗೆಳೆತನ ಇತ್ತು. ಕುಟುಂಬದ ಕಡೆಯಿಂದ 'ದೂರ ಇರು' ಎಂಬ ಸಂದೇಶ ಬಂದ್ಮೇಲೆ, ಎಂ.ಜೆ.ರಾಕೇಶ್ ರಿಂದ ಅಕ್ಷತಾ ದೂರ ಇದ್ದಾರೆ ನಿಜ. ಆದ್ರೆ, ರಾಕೇಶ್ ಮೇಲಿರುವ ಸಾಫ್ಟ್ ಕಾರ್ನರ್ ಮಾತ್ರ ಬದಲಾಗಿಲ್ಲ. ಅದನ್ನ ಹಲವು ಬಾರಿ ಅಕ್ಷತಾ ಸಾಬೀತು ಪಡಿಸಿದ್ದಾರೆ.

  ಅಕ್ಷತಾ ದೂರ ಸರಿದ ಮೇಲೆ ರಾಕೇಶ್ ಗೇಮ್ ಪ್ಲಾನ್ ಬದಲಾಗಿದೆ. ತಮ್ಮ ಇಮೇಜ್ ಡ್ಯಾಮೇಜ್ ಆಗಬಾರದು ಎಂಬ ಕಾರಣಕ್ಕೆ ಒಂದಲ್ಲಾ ಒಂದು ಕಾರಣ ಇಟ್ಟುಕೊಂಡು ಅಕ್ಷತಾನ ರಾಕೇಶ್ ಟಾರ್ಗೆಟ್ ಮಾಡುತ್ತಿದ್ದಾರೆ.

  ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!

  ''ನಾನು ಬೇರೆ ಹುಡುಗಿಯರ ಜೊತೆ ಮಾತನಾಡಿದರೆ, ಅಕ್ಷತಾಗೆ ಕಿರಿಕಿರಿ ಆಗುತ್ತೆ'' ಎಂದು ಹುಡುಗಿಯರ ಜೊತೆ ಕೂತು ಸ್ವತಃ ರಾಕೇಶ್ ಗಾಸಿಪ್ ಕೂಡ ಮಾಡಿದ್ದಾರೆ. ನವೀನ್ ಜೊತೆ ಪದೇ ಪದೇ ಅಕ್ಷತಾ ಬಗ್ಗೆ ರಾಕೇಶ್ ಬೆಟ್ಟು ಮಾಡಿ ತೋರಿಸುತ್ತಲೇ ಇರುತ್ತಾರೆ.

  ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ಅಕ್ಷತಾಗೆ ರಾಕೇಶ್ ಬಗ್ಗೆ ಡೌಟ್ ಬಂದಿದೆ. ''ರಾಕೇಶ್ ಬೇರೆ ಏನೋ ಸ್ಟ್ರಾಟೆಜಿ ಮಾಡುತ್ತಿದ್ದಾನೆ. ಕಣ್ಣೀರು ಹಾಕಿ... ನನ್ನನ್ನ ಕೆಟ್ಟವಳನ್ನಾಗಿ ಮಾಡಿ, ಅವನು ಒಳ್ಳೆಯವನಾಗುತ್ತಿದ್ದಾನೆ'' ಎಂಬ ಅನುಮಾನ ಅಕ್ಷತಾಗೆ ಕಾಡುತ್ತಿದೆ.

  ಇಷ್ಟು ದಿನ ಕಳೆದ ಮೇಲೆ ರಾಕೇಶ್ ಗೆ ಸಡನ್ನಾಗಿ ಭಯ ಕಾಡುತ್ತಿದೆ.!

  ಇನ್ನೂ ''ಗೆಳೆತನ ಮತ್ತು ಜನರನ್ನ ರಾಕೇಶ್ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ'' ಅಂತ ಆಂಡಿ ಕೂಡ ಹೇಳಿದ್ದರಿಂದ, ಆಂಡಿ ಆಡಿದ ಮಾತು ಸತ್ಯ ಎಂಬ ಅರಿವು ಅಕ್ಷತಾಗಾಗಿದೆ. ಹೀಗಾಗಿ ಇನ್ಮೇಲಾದರೂ, ರಾಕೇಶ್ ವಿಷಯದಲ್ಲಿ ಹುಷಾರಾಗಿದ್ದರೆ, ಅಕ್ಷತಾಗೆ ಒಳಿತು. ಇಲ್ಲಾಂದ್ರೆ, ಅಕ್ಷತಾ ಹೆಸರಲ್ಲಿ ಬೇಳೆ ಬೇಯಿಸಿಕೊಂಡು ರಾಕೇಶ್ ಫಿನಾಲೆ ತಲುಪಿರುತ್ತಾರೆ ಅಷ್ಟೇ.!

  English summary
  Bigg Boss Kannada 6: Day 76: Akshata doubts on Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X