For Quick Alerts
  ALLOW NOTIFICATIONS  
  For Daily Alerts

  ರೀಲ್ ಅಲ್ಲ ರಿಯಲ್: ಮೈಸೂರಲ್ಲಿ 2 ತಿಂಗಳು ಆಟೋ ಓಡಿಸಿದ್ದ ನವೀನ್ ಸಜ್ಜು.!

  |

  ಕನ್ನಡ ಚಿತ್ರರಂಗದಲ್ಲಿ ಸದ್ಯ ಜನಪ್ರಿಯ ಗಾಯಕರಾಗಿ ಗುರುತಿಸಿಕೊಂಡಿರುವವರು ನವೀನ್ ಸಜ್ಜು. ವಿಭಿನ್ನ ಶೈಲಿಯ ಗಾಯನದ ಮೂಲಕ ಸದ್ಯ ಮನೆ ಮಾತಾಗಿರುವ ನವೀನ್ ಸಜ್ಜು ಒಂದ್ಕಾಲದಲ್ಲಿ ಆಟೋ ಓಡಿಸಿದ್ದರು ಅನ್ನೋದು ನಿಮಗೆ ಗೊತ್ತಾ.?

  ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆ ಎಂಬ ಊರಿನಲ್ಲಿ ಹುಟ್ಟಿದ ನವೀನ್ ಸಜ್ಜು ಕಷ್ಟದಲ್ಲೇ ಬೆಳೆದು ಬಂದವರು. ಚಿಕ್ಕ ವಯಸ್ಸಿನಲ್ಲಿ ಊರಿನ ಸಾವಿನ ಮನೆಗಳಲ್ಲಿ ಹರಿಕಥೆ ನೋಡಿ, ಅವರ ಜೊತೆಗೆ ಹಾಡುತ್ತಿದ್ದ ನವೀನ್ ಸಜ್ಜು, ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.

  ಊರೂರು ಸುತ್ತಿ ಆರ್ಕೇಸ್ಟ್ರಾದಲ್ಲಿ ಹಾಡುತ್ತಿದ್ದ ನವೀನ್ ಸಜ್ಜು ಹೊಟ್ಟೆಪಾಡಿಗಾಗಿ ಮೈಸೂರಿನಲ್ಲಿ ಎರಡು ತಿಂಗಳು ಆಟೋ ಓಡಿಸಿದ್ದರಂತೆ. ಹಾಗಂತ ಸ್ವತಃ ನವೀನ್ ಸಜ್ಜು 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

  'ಬಿಗ್ ಬಾಸ್' ಮನೆಯಲ್ಲೂ 'ಆಟೋ ರಾಜ' ಆಗಿದ್ದ ನವೀನ್

  'ಬಿಗ್ ಬಾಸ್' ಮನೆಯಲ್ಲೂ 'ಆಟೋ ರಾಜ' ಆಗಿದ್ದ ನವೀನ್

  'ಬಿಗ್ ಬಾಸ್ ಸಿಟಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ ಕಳೆದ ವಾರ ನೀಡಲಾಗಿತ್ತು. ಇದರಲ್ಲಿ ಆಟೋ ಚಾಲಕನ ಪಾತ್ರವನ್ನ ನವೀನ್ ಸಜ್ಜು ನಿಭಾಯಿಸಿದ್ದರು. ಆಗಲೇ ತಮ್ಮ ಹಳೇ ನೆನಪುಗಳಿಗೆ ನವೀನ್ ಜಾರಿದರು.

  ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ

  ಎರಡು ತಿಂಗಳು ಆಟೋ ಓಡಿಸಿದ್ದ ನವೀನ್

  ಎರಡು ತಿಂಗಳು ಆಟೋ ಓಡಿಸಿದ್ದ ನವೀನ್

  ''ದಿನ ಬಾಡಿಗೆ ಓಡಿಸಿದರೆ, ಗಾಡಿ ಓನರ್ ಗೆ 90 ರೂಪಾಯಿ ಕೊಡುತ್ತಿದ್ದೆ. ನೂರು ರೂಪಾಯಿಗೆ ಗ್ಯಾಸ್ ಹಾಕಿ ಓಡಿಸುತ್ತಿದ್ದೆ. ಇನ್ನೂರು ರೂಪಾಯಿ ದುಡಿಯಬಹುದಿತ್ತು. ವರ್ಕೌಟ್ ಆಗ್ತಿರಲಿಲ್ಲ. ಆಮೇಲೆ, ಸಾಕಾಗಿ ಎಕ್ಸ್ ಟ್ರಾ ಡ್ಯೂಟಿ ಮಾಡಲು ಶುರು ಮಾಡಿದೆ'' ಎಂದು ನವೀನ್ ಸಜ್ಜು ಹೇಳಿಕೊಂಡಿದ್ದಾರೆ.

  'ತಪ್ಪು ಮಾಡಿದ್ದೇನೆ ನಿಜ'' ಎಂದು ಒಪ್ಪಿಕೊಂಡ ನವೀನ್ ಸಜ್ಜು.! ಯಾಕೆ.?'ತಪ್ಪು ಮಾಡಿದ್ದೇನೆ ನಿಜ'' ಎಂದು ಒಪ್ಪಿಕೊಂಡ ನವೀನ್ ಸಜ್ಜು.! ಯಾಕೆ.?

  ಸುದೀಪ್ ಮುಂದೆ ನವೀನ್ ಹೇಳಿದ್ದು ಹೀಗೆ..

  ಸುದೀಪ್ ಮುಂದೆ ನವೀನ್ ಹೇಳಿದ್ದು ಹೀಗೆ..

  ''ಮೈಸೂರಿನಲ್ಲಿ ಎರಡು ತಿಂಗಳು ಆಟೋ ಓಡಿಸಿದ್ದೆ. ಜೇಬಿನಲ್ಲಿ ದುಡ್ಡು ಇದ್ದರೂ, ಹತ್ತು ರೂಪಾಯಿ ಕೊಡುವುದಕ್ಕೂ ಜನ ಹಿಂದು-ಮುಂದು ನೋಡುತ್ತಾರೆ. ದೊಡ್ಡ ದೊಡ್ಡ ಅಂಗಡಿಗಳಿಗೆ ಹೋದರೆ, ಕೇಳಿದಷ್ಟು ದುಡ್ಡು ಕೊಡುತ್ತಾರೆ. ಆದ್ರೆ, ಆಟೋ ಓಡಿಸುವವರಿಗೆ ಕೊಡಲ್ಲ'' ಅಂತ ಬೇಸರ ಮಾಡಿಕೊಂಡರು ನವೀನ್ ಸಜ್ಜು.

  ನವೀನ್ ಗೆ ಸೋನು ಕಂಡ್ರೆ ಇಷ್ಟ.! ಯಾಕೆ ಅಂತ ಗೊತ್ತೇನು.? ನವೀನ್ ಗೆ ಸೋನು ಕಂಡ್ರೆ ಇಷ್ಟ.! ಯಾಕೆ ಅಂತ ಗೊತ್ತೇನು.?

  ಜನ'ಪ್ರಿಯ' ಸ್ಪರ್ಧಿ

  ಜನ'ಪ್ರಿಯ' ಸ್ಪರ್ಧಿ

  ಕಷ್ಟದಿಂದ ಬೆಳೆದು ಬಂದಿರುವ ನವೀನ್ ಸಜ್ಜು 'ಬಿಗ್ ಬಾಸ್' ಮನೆಯಲ್ಲಿ ಯಾವುದೇ ಜಗಳ, ವಿವಾದಕ್ಕೆ ಸಿಲುಕದೆ ಸೇಫ್ ಆಗಿ ಆಟ ಆಡುತ್ತಿದ್ದಾರೆ. ನವೀನ್ ಸಜ್ಜು ಮುಖದಲ್ಲಿ ಗೆಲುವಿನ ನಗೆ ತರಿಸುವುದು, ಬಿಡುವುದು ವೀಕ್ಷಕರ ಕೈಯಲ್ಲಿದೆ.

  English summary
  Bigg Boss Kannada 6: Naveen Sajju remembers his struggling days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X