For Quick Alerts
  ALLOW NOTIFICATIONS  
  For Daily Alerts

  ಕವಿತಾ-ಆಂಡ್ರ್ಯೂ ಜಗಳಕ್ಕೆ ಶಶಿ ಸೀಮೆಎಣ್ಣೆಯಾದ್ರೆ, ಜಯಶ್ರೀ ಬೆಂಕಿಪಟ್ಟಣ.!

  |

  ಕವಿತಾ ಮತ್ತು ಆಂಡ್ರ್ಯೂ ನಡುವೆ ಯಾವುದೇ ಮನಸ್ತಾಪ, ಭಿನ್ನಾಭಿಪ್ರಾಯ, ಕಿತ್ತಾಟ ಇರಲಿಲ್ಲ. ನಾಮಿನೇಷನ್ ಟಾಸ್ಕ್ ನಲ್ಲಿ ಆಂಡ್ರ್ಯೂ ಜೊತೆಗೆ ಒಪ್ಪಂದ ಮಾಡಿಕೊಂಡು ಕವಿತಾ ಗೌಡ ಸೇಫ್ ಆದರು.

  ಆಮೇಲೆ ಇದ್ದಕ್ಕಿದ್ದಂತೆ ಆಂಡ್ರ್ಯೂ ಮೇಲೆ ಕವಿತಾ ಆರೋಪ ಮಾಡಿದರು. ಇನ್ನೂ ಅಕ್ಷತಾ ನಡೆಸಿಕೊಟ್ಟ ಚಾಟ್ ಶೋನಲ್ಲಿ ಕವಿತಾ ಬಗ್ಗೆ ಕೆಲ ಕಾಮೆಂಟ್ ಗಳು ಬಂದ್ವು. ಇದನ್ನೆಲ್ಲ ಗಮನಿಸಿದ ಮೇಲೆ ಕವಿತಾ ಅಪ್ಸೆಟ್ ಆಗಿ ಕಣ್ಣೀರಿಟ್ಟರು.

  ಕವಿತಾಗಿಂತ ಜಾಸ್ತಿ ಸಿಟ್ಟು-ಸಿಡುಕು ತೋರಿಸಿದ್ದು ಜಯಶ್ರೀ ಮತ್ತು ಶಶಿ. ಆಂಡ್ರ್ಯೂ ಜೊತೆಗೆ ವಾಗ್ವಾದಕ್ಕಿಳಿದ ಶಶಿ, ಕೋಪದಲ್ಲಿ ಗೋಡೆಗೆ ಗುದ್ದುಕೊಂಡು ಕೈಬೆರಳಿಗೆ ಪೆಟ್ಟು ಮಾಡಿಕೊಂಡರು.

  ''ಅವಕಾಶವನ್ನು ಬಳಸಿಕೊಂಡು ವಿಷಯವನ್ನ ಅನವಶ್ಯಕವಾಗಿ ಶಶಿ ಮತ್ತು ಜಯಶ್ರೀ ದೊಡ್ಡದು ಮಾಡುತ್ತಿದ್ದಾರೆ'' ಅಂತ ಆಂಡ್ರ್ಯೂ ನೇರವಾಗಿ ಬಾಣ ಬಿಟ್ಟರು. ಆಂಡ್ರ್ಯೂ ಆಡಿದ ಮಾತು ಸತ್ಯ ಅಂತ ಕೆಲ ವೀಕ್ಷಕರಿಗೆ ಅನಿಸಿದೆ.

  ಕವಿತಾ-ಆಂಡ್ರ್ಯೂ ನಡುವಿನ ಕಿತ್ತಾಟಕ್ಕೆ ಸೀಮೆಎಣ್ಣೆ ಸುರಿದಿದ್ದು ಶಶಿ, ಬೆಂಕಿಪಟ್ಟಣ ಆಗಿದ್ದು ಜಯಶ್ರೀ ಅಂತ ವೀಕ್ಷಕರು ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡಿರಿ...

  ಮುಖವಾಡ ತೆಗೆದ ಹೀರೋ ಆಂಡ್ರ್ಯೂ

  ಮುಖವಾಡ ತೆಗೆದ ಹೀರೋ ಆಂಡ್ರ್ಯೂ

  ''ಕವಿತಾ-ಆಂಡ್ರ್ಯೂ ಜಗಳದಲ್ಲಿ ಸೀಮೆಎಣ್ಣೆ ಸುರಿದಿದ್ದು ಶಶಿ, ಬೆಂಕಿಪಟ್ಟಣ ಆಗಿದ್ದು ಜಯಶ್ರೀ. ಇವರಿಬ್ಬರ ಮುಖವಾಡವನ್ನು ಆಂಡಿ ಕಳಚಿದರು'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

  ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.

  ಕ್ಯಾಮರಾ ಮುಂದೆ ಅಳು ಯಾಕೆ.?

  ಕ್ಯಾಮರಾ ಮುಂದೆ ಅಳು ಯಾಕೆ.?

  ''ಕ್ಯಾಮರಾ ಮುಂದೆ ಬಂದು ಅಳುವ ಕವಿತಾ ಡ್ರಾಮಾ ಮಾಡ್ತಿದ್ದಾರಾ.? ಇದು ಸೀರಿಯಲ್ ಅಂತ ಭ್ರಮೆಯಲ್ಲಿ ಇದ್ದಾರಾ.? ಜಯಶ್ರೀ ಮತ್ತು ಶಶಿಗೆ ಇದೆಲ್ಲಾ ಬೇಕಿತ್ತಾ.?'' ಅನ್ನೋದು ವೀಕ್ಷಕರ ಪ್ರಶ್ನೆ.

  ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!

  ಆಂಡಿಗೆ ವೀಕ್ಷಕರ ಬೆಂಬಲ.!

  ಆಂಡಿಗೆ ವೀಕ್ಷಕರ ಬೆಂಬಲ.!

  ''ಟಾಸ್ಕ್ ನಲ್ಲಿ 'ಬಿಗ್ ಬಾಸ್' ಕೊಟ್ಟ ಪ್ರಶ್ನೆಗಳಿಗೆ ಆಂಡ್ರ್ಯೂ ನೇರವಾಗಿ ಉತ್ತರ ನೀಡಿದ್ದಾರೆ. ಯಾರು ಏನೇ ಹೇಳಿದರೂ ನಮ್ಮ ಬೆಂಬಲ ಆಂಡಿಗೆ'' ಅಂತಿದ್ದಾರೆ ವೀಕ್ಷಕರು. ಇನ್ನೂ ಕವಿತಾ ರವರ ಇವತ್ತಿನ ಸ್ಥಿತಿಗೆ ಜಯಶ್ರೀ ಮತ್ತು ಶಶಿ ಕಾರಣ ಅಂತಲೂ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

  'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ

  ಶಶಿ ಮಾಡಿದ್ದು ಸರಿನಾ.?

  ಶಶಿ ಮಾಡಿದ್ದು ಸರಿನಾ.?

  ಸೋಷಿಯಲ್ ಮೀಡಿಯಾದಲ್ಲಿ 'ಮಾರ್ಡನ್ ರೈತ' ಶಶಿ ಬಗ್ಗೆ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಆಂಡ್ರ್ಯೂ ಮೇಲೆ ಬೆಟ್ಟು ಮಾಡಿ ತೋರಿಸುವ ಕವಿತಾಗೆ ಶಶಿ ಮಾಡಿದ್ದು ಸರಿಯೇ ಅಂತ ಪ್ರಶ್ನಿಸುತ್ತಿದ್ದಾರೆ.

  'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!

  ಇದೆಲ್ಲ ಬೇಕಿತ್ತಾ.?

  ಇದೆಲ್ಲ ಬೇಕಿತ್ತಾ.?

  ''ಈ ಜಗಳವನ್ನು ಇಷ್ಟೊಂದು ಹೈಲೈಟ್ ಮಾಡುವ ಅವಶ್ಯಕತೆ ಇರಲೇ ಇಲ್ಲ. ಶಶಿ ಮತ್ತು ಜಯಶ್ರೀ ಮಾಡಿದ್ದು ತಪ್ಪು'' ಅಂತಾವ್ರೆ ವೀಕ್ಷಕರು.

  ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?

  ಬಿಗ್ ಬಾಸ್ ತಪ್ಪು.!

  ಬಿಗ್ ಬಾಸ್ ತಪ್ಪು.!

  ''ಬಿಗ್ ಬಾಸ್' ಕೊಟ್ಟ ಪ್ರಶ್ನೆಗಳಿಗೆ ಆಂಡ್ರ್ಯೂ ಪ್ರಾಮಾಣಿಕವಾಗಿ ಉತ್ತರ ಕೊಟ್ಟಿದ್ದಾರೆ. ಆಂಡ್ರ್ಯೂ ಮಾಡಿದ್ದು ತಪ್ಪು ಅನ್ನೋದಾದ್ರೆ, ಅಂತಹ ಪ್ರಶ್ನೆಗಳನ್ನು ಕೇಳಿದ 'ಬಿಗ್ ಬಾಸ್'ದು ತಪ್ಪು'' ಎಂಬುದು ಕೆಲವರ ವಾದ.

  ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?

  ದೊಡ್ಡ ಸೀನ್ ಕ್ರಿಯೇಟ್

  ದೊಡ್ಡ ಸೀನ್ ಕ್ರಿಯೇಟ್

  ''ಶಶಿ ಮತ್ತು ಜಯಶ್ರೀ ಸುಮ್ನೆ ದೊಡ್ಡ ಸೀನ್ ಕ್ರಿಯೇಟ್ ಮಾಡಿ ಡ್ರಾಮಾ ಮಾಡಿದರು. ಕವಿತಾ ಜನರ ಸಿಂಪತಿಗೋಸ್ಕರ ಅತ್ತಿದ್ದು. ಆಂಡಿ ರಿಯಲ್ ಎಂಟರ್ ಟೇನರ್'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

  ಕವಿತಾ ಗೊಳೋ ಎನ್ನಲು ಕಾರಣವಾದ ಆ ಚಾಟ್ ಶೋನಲ್ಲಿ ನಡೆದಿದ್ದೇನು.?

  ಮಾನವೀಯ ದೃಷ್ಟಿ

  ಮಾನವೀಯ ದೃಷ್ಟಿ

  ''ಒಂದು ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡುವವರನ್ನು ಸಪೋರ್ಟ್ ಮಾಡಲೇಬಾರದು. ಶಶಿ, ಜಯಶ್ರೀ ಮಾನವೀಯ ದೃಷ್ಟಿಯಿಂದ ನಡೆದುಕೊಂಡಿದ್ದಾರೆ'' ಅಂತ ಕೆಲವರು ಅವರ ಪರ ಬ್ಯಾಟಿಂಗ್ ಕೂಡ ಮಾಡಿದ್ದಾರೆ.

  English summary
  Bigg Boss Kannada 6: Viewers have taken Colors Super official Facebook account to express their opinion on Jayashree and Shashi over Kavitha-Andrew fight.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X