For Quick Alerts
  ALLOW NOTIFICATIONS  
  For Daily Alerts

  ಮೇಘಶ್ರೀ ಮೂತಿಗೆ ಬೆರಣಿ ತಟ್ಟಿದ 'ಬಿಗ್ ಬಾಸ್' ಸ್ಪರ್ಧಿಗಳು.!

  |
  Bigg Boss Kannada Season 6: ಮೇಘಶ್ರೀ ಮೂತಿಗೆ ಬೆರಣಿ ತಟ್ಟಿದ 'ಬಿಗ್ ಬಾಸ್' ಸ್ಪರ್ಧಿಗಳು.! | FILMIBEAT KANNADA

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಮುಗಿದ್ಮೇಲೆ, 'ಬಿಗ್' ಮನೆಗೆ ಎಂಟ್ರಿಕೊಟ್ಟ ಸುಂದರಿಯರ ಪೈಕಿ ಮೇಘಶ್ರೀ ಕೂಡ ಒಬ್ಬರು. ದೊಡ್ಮನೆಗೆ ಕಾಲಿಡುತ್ತಿದ್ದಂತೆಯೇ ಎಲ್ಲರ ಗಮನ ಸೆಳೆದ ಮೇಘಶ್ರೀ ಈ ವಾರ ಬಹುತೇಕರಿಂದ ಟಾರ್ಗೆಟ್ ಆಗಿದ್ದಾರೆ.

  ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರನ್ನ ಮೊದಲು ಹೊರಗೆ ಹಾಕಬೇಕೆಂಬ ಗೇಮ್ ಪ್ಲಾನ್ ಬಹುತೇಕರಲ್ಲಿ ಇತ್ತೇನೋ.. ಅದು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಕಾಣ್ತು.

  ಮೇಘಶ್ರೀ ರನ್ನ ಮಾತ್ರ ಅಲ್ಲ.. ಯಾರ ತಂಟೆಗೂ ಹೋಗದ, ಜಗಳ ಮಾಡದ ನಿವೇದಿತಾ ಗೌಡ ರನ್ನೂ ಹೊರಗೆ ತಳ್ಳಲು 'ಬಿಗ್ ಬಾಸ್' ಸ್ಪರ್ಧಿಗಳು ಮುಂದಾಗಿದ್ದಾರೆ.

  ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಹತ್ತನೇ ವಾರ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ, ಫೋಟೋ ಸ್ಲೈಡ್ ಗಳಲ್ಲಿ...

  ವಿಶಿಷ್ಟವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆ

  ವಿಶಿಷ್ಟವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆ

  ಈ ಬಾರಿಯ ನಾಮಿನೇಷನ್ ಪ್ರಕ್ರಿಯೆ ಕೊಂಚ ವಿಶಿಷ್ಟವಾಗಿತ್ತು. ಎಲ್ಲರ ಮುಂದೆ ಪ್ರತಿ ಸ್ಪರ್ಧಿಯೂ, ತಾವು ನಾಮಿನೇಟ್ ಮಾಡುವ ಇಬ್ಬರು ಸ್ಪರ್ಧಿಗಳ ಭಾವಚಿತ್ರಕ್ಕೆ ಬೆರಣಿ ತಟ್ಟಬೇಕಿತ್ತು.

  ರಾಕೇಶ್ 'ಗುಡ್ನೆಸ್' ಬಗ್ಗೆ ಪ್ರಶ್ನೆ ಮಾಡಿದ ಸುದೀಪ್.!

  ಮೇಘಶ್ರೀಗೆ ಅತಿ ಹೆಚ್ಚು ವೋಟ್ಸ್

  ಮೇಘಶ್ರೀಗೆ ಅತಿ ಹೆಚ್ಚು ವೋಟ್ಸ್

  ಒಂದಲ್ಲಾ ಒಂದು ಕಾರಣ ನೀಡಿ ಕವಿತಾ, ಮುರಳಿ, ಧನರಾಜ್ ಸೇರಿದಂತೆ ಒಟ್ಟು ಏಳು ಮಂದಿ ಮೇಘಶ್ರೀ ರನ್ನ ನಾಮಿನೇಟ್ ಮಾಡಿದರು. ಅತಿ ಹೆಚ್ಚು ಮತಗಳನ್ನು ಪಡೆದ ಮೇಘಶ್ರೀ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ.

  ರಿಮೋಟ್ ಗ್ಯಾಂಗ್ ನಲ್ಲಿ ಬಿರುಕು: ಭಿನ್ನಮತ ಯಾವಾಗ ಸ್ಫೋಟಗೊಳ್ಳುತ್ತೋ.?

  ಮಿಸ್ ಆಗದ ನಿವೇದಿತಾ ಗೌಡ

  ಮಿಸ್ ಆಗದ ನಿವೇದಿತಾ ಗೌಡ

  'ಬಿಗ್ ಬಾಸ್' ಮನೆಗೆ ನಿವೇದಿತಾ ಗೌಡ ಅತಿಥಿಯಾಗಿ ಬಂದಿದ್ದಾರೆ. ಈ ಸತ್ಯ ತಿಳಿಯದ ಸ್ಪರ್ಧಿಗಳು ನಿವೇದಿತಾ ಗೌಡರನ್ನ ನಾಮಿನೇಟ್ ಮಾಡಿದ್ದಾರೆ.

  ಟಾರ್ಗೆಟ್ ರಿಮೋಟ್ ಗ್ಯಾಂಗ್

  ಟಾರ್ಗೆಟ್ ರಿಮೋಟ್ ಗ್ಯಾಂಗ್

  ರಿಮೋಟ್ ಗ್ಯಾಂಗ್ ನ ಸದಸ್ಯರಾಗಿರುವ ಶಶಿ, ಧನರಾಜ್ ಮತ್ತು ಕವಿತಾ ಈ ವಾರ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಇದೇ ರಿಮೋಟ್ ಗ್ಯಾಂಗ್ ನಿಂದ ಜಯಶ್ರೀ ಔಟ್ ಆದರು. ಈ ವಾರ ಏನಾಗುತ್ತೋ.?

  ಕಡೆಗೂ ಕವಿತಾ ನಾಟಕ ಜಯಶ್ರೀ ಮುಂದೆ ಬಯಲಾಯಿತು.!

  ಮಾತಿನ ಮಲ್ಲ ಆಂಡಿ

  ಮಾತಿನ ಮಲ್ಲ ಆಂಡಿ

  ಪದೇ ಪದೇ ರಿಮೋಟ್ ಗ್ಯಾಂಗ್ ನ ಟಾರ್ಗೆಟ್ ಮಾಡಿದ ಆಂಡಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಿಸ್ ಆಗಲಿಲ್ಲ. ರಿಮೋಟ್ ಗ್ಯಾಂಗ್ ನವರೇ ಆಂಡಿಯನ್ನ ಡೇಂಜರ್ ಝೋನ್ ಗೆ ತಳ್ಳಿದರು.

  ಕ್ಯಾಪ್ಟನ್ ಗೆ ಅಧಿಕಾರ

  ಕ್ಯಾಪ್ಟನ್ ಗೆ ಅಧಿಕಾರ

  'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಜೀವಿತಾಗೆ ಸಿಕ್ಕ ವಿಶೇಷ ಅಧಿಕಾರದ ಅನ್ವಯ, ರಾಕೇಶ್ ಮತ್ತು ರಶ್ಮಿ ನಾಮಿನೇಟ್ ಆದರು. ಹಾಗ್ನೋಡಿದ್ರೆ, ರಾಕೇಶ್ ಹೆಚ್ಚು ಕ್ಲೋಸ್ ಆಗಿದ್ದದ್ದು ಜೀವಿತಾ ಜೊತೆ. ಆದರೆ, ಅದೇ ಜೀವಿತಾ ಇದೀಗ ರಾಕೇಶ್ ಗೆ ಬಿಸಿ ಮುಟ್ಟಿಸಿದ್ದಾರೆ.

  ಜೀವಿತಾ ಆಟಕ್ಕೆ ಬೆರಗಾಗಿ ಚಪ್ಪಾಳೆ ತಟ್ಟಿದ ಕಿಚ್ಚ ಸುದೀಪ್.!

  ಒಂದು ವೋಟ್ ನಲ್ಲಿ ಮಿಸ್ ಆದವರು..

  ಒಂದು ವೋಟ್ ನಲ್ಲಿ ಮಿಸ್ ಆದವರು..

  ಮುರಳಿ ಮತ್ತು ನವೀನ್ ಮೂತಿಗೆ ನಿವೇದಿತಾ ಗೌಡ ಮಾತ್ರ ಬೆರಣಿ ತಟ್ಟಿದರು. ಬೇರೆ ಯಾರೂ ಇವರಿಬ್ಬರನ್ನು ನಾಮಿನೇಟ್ ಮಾಡಲಿಲ್ಲ. ಹೀಗಾಗಿ ಮುರಳಿ ಮತ್ತು ನವೀನ್ ಜಸ್ಟ್ ಮಿಸ್ ಆದರು.

  ಏಳು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

  ಏಳು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

  ಮೇಘಶ್ರೀ, ಕವಿತಾ ಗೌಡ, ಆಂಡಿ, ಧನರಾಜ್, ಶಶಿ, ರಾಕೇಶ್ ಮತ್ತು ರಶ್ಮಿ... ಈ ಏಳು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ನಿವೇದಿತಾ ಗೌಡ ಅತಿಥಿಯಾಗಿ ಬಂದಿರುವ ಕಾರಣ, ಅವರಿಗೆ ನೀವು ವೋಟ್ ಮಾಡುವ ಅವಶ್ಯಕತೆ ಇಲ್ಲ. ಉಳಿದವರಲ್ಲಿ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Week 10: 7 Contestants are nominated for this week's elimination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X