For Quick Alerts
  ALLOW NOTIFICATIONS  
  For Daily Alerts

  ಎಷ್ಟೇ ಸರ್ಕಸ್ ಮಾಡಿದರೂ ಮುರಳಿ, ಜೀವಿತಾ ಸಕ್ಸಸ್ ಆಗಲಿಲ್ಲ.!

  |

  'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ಒಂಥರಾ ಒದ್ದಾಡುತ್ತಲೇ ಇದ್ದರು. ಮೊದಲ ಕೆಲವು ವಾರಗಳು ಮುರಳಿ ಸೈಲೆಂಟ್ ಆಗಿ ಸೈಡ್ ನಲ್ಲಿದ್ದರು. ಯಾವುದೇ ವಾಕ್ಸಮರ-ಜಗಳಗಳಿಗೆ ಮುರಳಿ ಸಾಕ್ಷಿ ಆಗುತ್ತಿರಲಿಲ್ಲ.

  ಅಡುಗೆ ಮನೆಯ ಉಸ್ತುವಾರಿ ವಹಿಸಿದ್ದ ಕಾರಣ, ಮುರಳಿ ಅನೇಕ ಬಾರಿ ನಾಮಿನೇಷನ್ ನಿಂದ ಬಚಾವ್ ಆಗಿದ್ದರು. ಆದ್ರೆ, ಕಳೆದ ವಾರ ಸಿಕ್ಕ ಒಂದು ಟ್ವಿಸ್ಟ್ ನಿಂದ ಕ್ಯಾಪ್ಟನ್ ಆಂಡಿಯನ್ನ ಹೊರತು ಪಡಿಸಿ ಎಲ್ಲರೂ ಡೇಂಜರ್ ಝೋನ್ ಗೆ ಬರಬೇಕಾಯಿತು. ಪರಿಣಾಮ ಮುರಳಿ ಈ ವಾರ ಔಟ್ ಆದರು.

  ಇನ್ನೂ ವೈಲ್ಡ್ ಕಾರ್ಡ್ ಮೂಲಕ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಜೀವಿತಾ, ಕಾರ್ಯಕ್ರಮದಲ್ಲಿ ಉಳಿದುಕೊಳ್ಳಲು ಏನೇನೋ ಸರ್ಕಸ್ ಮಾಡಿದರು. ಆದ್ರೆ, ಅದು ಸಫಲ ಆಗಲಿಲ್ಲ. ಮುಂದೆ ಓದಿರಿ...

  ಡಬಲ್ ಎವಿಕ್ಷನ್ ಶಾಕ್

  ಡಬಲ್ ಎವಿಕ್ಷನ್ ಶಾಕ್

  'ಬಿಗ್ ಬಾಸ್' ಸ್ಪರ್ಧಿಗಳಿಗೆಲ್ಲಾ ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಸಿಕ್ತು. ಡಬಲ್ ಎವಿಕ್ಷನ್ ಇದ್ದ ಪರಿಣಾಮ, 'ಬಿಗ್ ಬಾಸ್' ಮನೆಯಿಂದ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ಮತ್ತು ಜೀವಿತಾ ಔಟ್ ಆಗಿದ್ದಾರೆ.

  ಬಚಾವ್ ಆದ ಆಂಡಿ: ಬಾಕಿ ಎಲ್ಲರೂ ಡೇಂಜರ್ ಝೋನ್ ನಲ್ಲಿ.!

  ಎಷ್ಟೇ ಸರ್ಕಸ್ ಮಾಡಿದರೂ ಸಕ್ಸಸ್ ಆಗಲಿಲ್ಲ.!

  ಎಷ್ಟೇ ಸರ್ಕಸ್ ಮಾಡಿದರೂ ಸಕ್ಸಸ್ ಆಗಲಿಲ್ಲ.!

  'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಮುರಳಿ ಮತ್ತು ಜೀವಿತಾ ಎಷ್ಟೇ ಪ್ರಯತ್ನ ಪಟ್ಟರೂ, ಸಫಲ ಆಗಲಿಲ್ಲ. ಜೀವಿತಾ ಸ್ಟ್ರಾಟೆಜಿ ವರ್ಕ್ ಆಗಲಿಲ್ಲ. ಒಂದೊಂದು ಗುಂಪಿಗೆ ಮಾತ್ರ ಸೀಮಿತರಾಗಿದ್ದ ಮುರಳಿ ಮತ್ತು ಜೀವಿತಾ ಈ ವಾರ ಹೊರಗೆ ಬಂದಿದ್ದಾರೆ.

  'ಬಿಗ್ ಬಾಸ್' ಶೋಗೆ ತಟ್ಟಲಿದ್ಯಾ 'ಐಟಿ' ದಾಳಿಯ ಬಿಸಿ.?

  ವೈಲ್ಡ್ ಕಾರ್ಡ್ ಮೂಲಕ ಬಂದವರೆಲ್ಲಾ ಹೊರಕ್ಕೆ

  ವೈಲ್ಡ್ ಕಾರ್ಡ್ ಮೂಲಕ ಬಂದವರೆಲ್ಲಾ ಹೊರಕ್ಕೆ

  ವೈಲ್ಡ್ ಕಾರ್ಡ್ ಮೂಲಕ ಮೇಘಶ್ರೀ ಮತ್ತು ಜೀವಿತಾ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟಿದ್ದರು. ಎರಡೇ ವಾರಕ್ಕೆ ಮೇಘಶ್ರೀ ಮತ್ತು ಜೀವಿತಾ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸದ್ಯ ಎಂಟು ಮಂದಿ ಉಳಿದುಕೊಂಡಿದ್ದಾರೆ.

  ವೀಕ್ಷಕರ ಬೆಂಬಲ ಇಲ್ಲ

  ವೀಕ್ಷಕರ ಬೆಂಬಲ ಇಲ್ಲ

  ನವೀನ್, ರಶ್ಮಿ, ಮುರಳಿ, ಅಕ್ಷತಾ, ಶಶಿ, ಕವಿತಾ, ಧನರಾಜ್, ಜೀವಿತಾ ಮತ್ತು ರಾಕೇಶ್ ಡೇಂಜರ್ ಝೋನ್ ನಲ್ಲಿದ್ದರು. ಈ ಪೈಕಿ ವೀಕ್ಷಕರಿಂದ ಕಮ್ಮಿ ಬೆಂಬಲ ವ್ಯಕ್ತವಾಗಿರುವುದು ಮುರಳಿ ಮತ್ತು ಜೀವಿತಾಗೆ. ಕಮ್ಮಿ ವೋಟ್ಸ್ ಬಂದ ಪರಿಣಾಮ ಜೀವಿತಾ ಮತ್ತು ಮುರಳಿ ನಿರ್ಗಮಿಸಿದ್ದಾರೆ.

  English summary
  Bigg Boss Kannada 6: Week 11: Jeevitha and Murali eliminated.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X