Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುದೀಪ್ ಹೇಳಿದ್ದೇ ಒಂದು.. ಚಂದನ್ ತಲೆಯಲ್ಲಿ ಓಡಿದ್ದು ಮತ್ತೊಂದು.!
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಅಡುಗೆ, ಊಟದ ವಿಷಯಕ್ಕೆ ಗಲಾಟೆ ನಡೆದಿದ್ದೇ ಹೆಚ್ಚು. ಒಂದು ಆಪಲ್ ಕದ್ದು ತಿಂದಿದ್ದು ಯಾಕೆ.? ನನಗೆ ಬೇಳೆ ಸಿಗಲಿಲ್ಲ, ಅವರಿಗೆ ತರಕಾರಿ ಹಾಕಲಿಲ್ಲ.. ಎಂಬ ಸಿಲ್ಲಿ ಸಿಲ್ಲಿ ವಿಚಾರಕ್ಕೆ ದೊಡ್ಡ ದೊಡ್ಡ ಗಲಾಟೆಗಳಾಗಿವೆ.
ಅಡುಗೆ ಮನೆಯ ಕಿಚ್ಚಿನ ಕೇಂದ್ರ ಬಿಂದು ಆಗಿದ್ದ ಸುಜಾತ ಸದ್ಯ ರೆಸ್ಟ್ ನಲ್ಲಿದ್ದಾರೆ. ಚಟುವಟಿಕೆಯಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡು ಕಿಚನ್ ನಿಂದ ಸುಜಾತ ದೂರ ಸರಿದಿದ್ದಾರೆ. ಹೀಗಿದ್ದರೂ, ಸುಜಾತ ಕಡೆ ಬೆಟ್ಟು ಮಾಡಿ ತೋರಿಸುವುದು ಮಾತ್ರ ನಿಂತಿಲ್ಲ.
ಸುಜಾತ ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಾಗ ಊಟ ಬಡಿಸುವ ವಿಚಾರದಲ್ಲಿ ಭೇದಭಾವ ಮಾಡುತ್ತಿದ್ದರು ಎಂದು ಚಂದನ್ ಆಚಾರ್ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಈ ಟಾಪಿಕ್ ಆಚೆ ಬಂದಿದ್ದೇ ಬೈ ಮಿಸ್ ಆಗಿ.
'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಏನೋ ಹೇಳಿದ್ರೆ, ಬೇರೇನೋ ಅರ್ಥೈಸಿಕೊಂಡ ಚಂದನ್ ಆಚಾರ್.. ಸುಜಾತ ಬಗ್ಗೆ ಆರೋಪಿಸಿದರು. ಅಷ್ಟಕ್ಕೂ, ಏನಿದು ಕನ್ಫ್ಯೂಶನ್ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸುದೀಪ್ ಕೇಳಿದ್ದೇನು.?
''ಹನ್ನೆರಡು ಜನರಲ್ಲಿ ಒಬ್ಬರು ಒಬ್ಬರಿಗೆ ಊಟ ಬಡಿಸುವಷ್ಟರಲ್ಲಿ ಇನ್ನೊಬ್ಬರು ಎಲ್ಲಾ ಹನ್ನೆರಡು ಜನರಿಗೂ ಊಟ ಬಡಿಸಿರುತ್ತಾರೆ. ಏನಿದು.?'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಚಂದನ್ ಆಚಾರ್ ಗೆ ಸುದೀಪ್ ಪ್ರಶ್ನಿಸಿದರು. ಆಗ ಚಂದನ್ ಆಚಾರ್ ತಲೆಯಲ್ಲಿ ಮೊದಲು ಬಂದಿದ್ದು ಊಟ ಬಡಿಸುವ ವಿಚಾರ. ಹೀಗಾಗಿ, ನೇರವಾಗಿ ಸುಜಾತ ಬಗ್ಗೆ ಚಂದನ್ ಆಚಾರ್ ಆರೋಪಿಸಿದರು.
'ಬಿಗ್
ಬಾಸ್':
ಇಡೀ
ಸಂಚಿಕೆಯನ್ನು
ಕೊಂದ
ಒಂದು
ಆಪಲ್.!

ಚಂದನ್ ಆಚಾರ್ ಕೊಟ್ಟ ಉತ್ತರ ಏನು.?
''ಈ ಮನೆಯಲ್ಲಿ ಊಟದ ವಿಚಾರಕ್ಕೆ ಸ್ವಲ್ಪ ಭೇದಭಾವ ಮಾಡುತ್ತಾರೆ. ಎರಡು ಮೂರು ದಿನಗಳಿಂದ (ಅಡುಗೆ ಮನೆಯಿಂದ ಸುಜಾತ ಹೊರಗೆ ಬಂದ ಮೇಲೆ) ಎಲ್ಲರಿಗೂ ಸಾಕಾಗುವಷ್ಟು ಸಿಗುತ್ತಿದೆ. ಅದಕ್ಕೂ ಮುನ್ನ ಕೆಲವರಿಗೆ ಕಮ್ಮಿ, ಹಲವರಿಗೆ ಜಾಸ್ತಿ ತುತ್ತು ಹೋಗುತ್ತಿತ್ತು'' ಎಂದು ಚಂದನ್ ಆಚಾರ್ ಹೇಳುತ್ತಿದ್ದಂತೆಯೇ ''ಟಾಪಿಕ್ ಇದಲ್ಲ'' ಅಂತ ಸುದೀಪ್ ಸ್ಪಷ್ಟ ಪಡಿಸಿದರು. ಆದರೂ, ಚಂದನ್ ಆಚಾರ್ ಆಡಿದ ಮಾತಿಗೆ ಸ್ಪಷ್ಟನೆ ಕೊಡಿಸುವ ಕೆಲಸವನ್ನು ಸುದೀಪ್ ಮಾಡಿದರು. ''ಊಟ ಬಡಿಸುವುದರಲ್ಲಿ ಭೇದಭಾವ ಇದೆ ಅಂತ ಯಾರಿಗೆ ಅನಿಸುತ್ತದೆ.? ಕೈ ಎತ್ತಿ'' ಎಂದು ಸುದೀಪ್ ಕೇಳಿದಾಗ ಯಾರೂ ಕೈ ಎತ್ತಲಿಲ್ಲ.
ತಪ್ಪಿನ
ಅರಿವಾದ
ಮೇಲೆ
ಸುದೀಪ್
ಮುಂದೆ
ಚೈತ್ರಗೆ
ಕ್ಷಮೆ
ಕೇಳಿದ
ಸುಜಾತ.!

ಸುಮ್ಮನೆ ಬೆಟ್ಟು ಮಾಡುವುದು ಯಾಕೆ.?
ಚಂದನ್ ಗೆ ಮಾತ್ರ ಯಾಕೆ ಹಾಗನಿಸುತ್ತಿದೆ ಎಂದು ಸುದೀಪ್ ಕೇಳಿದಾಗ, ''ಹಲವು ಸಾರಿ ನನಗೆ ಎರಡನೇ ಬಾರಿ ಬಡಿಸಲಿಲ್ಲ'' ಅಂತ ಚಂದನ್ ಹೇಳಿದರು. ''ಎರಡನೇ ಸಾರಿ ಬಡಿಸುವ ಹೊತ್ತಿಗೆ ಮೊದಲ ಬಾರಿ ನೀವು ಬಡಿಸಿಕೊಳ್ಳುತ್ತಿದ್ದರೆ ಹೇಗೆ ಸಿಗುತ್ತದೆ.?'' ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ ''ಅದೂ ಇರಬಹುದು'' ಎಂದು ಚಂದನ್ ಒಪ್ಪಿಕೊಂಡರು.
ಚಂದನ್
ಆಚಾರ್
ಗೆ
ಡೀಸೆನ್ಸಿ
ಪಾಠ
ಮಾಡಿದ
'ಪೈಲ್ವಾನ್'
ಸುದೀಪ್

ಬೇಸರ ಮಾಡಿಕೊಂಡ ಸುಜಾತ
''ಭೇದಭಾವ ಇರಲಿಲ್ಲ. ಸುಜಾತ ಸಣ್ಣ ಸಣ್ಣ ವಿಷಯಕ್ಕೆ ಕೂಗಾಡುತ್ತಿದ್ದರು ಅಷ್ಟೇ. ಎಲ್ಲರಿಗೂ ಸಮನಾಗಿ ಬಡಿಸುತ್ತಿದ್ದರು'' ಅಂತ ಹರೀಶ್ ರಾಜ್ ಹೇಳಿದರೆ, ''ಭೇದಭಾವ ಮಾಡಿಲ್ಲ'' ಎಂದು ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ಕೂಡ ಸ್ಪಷ್ಟ ಪಡಿಸಿದರು. ''ಸೆಕೆಂಡ್ ಸರ್ವಿಂಗ್ ತೆಗೆದುಕೊಂಡಿಲ್ಲ ಎಂಬ ವಿಚಾರ ಸುಳ್ಳು. ಸೆಕೆಂಡ್ ಸರ್ವಿಂಗ್ ಇದ್ಯಾ ಅಂತ ಬಂದು ಕೇಳಿ ಬಡಿಸಿಕೊಂಡಿದ್ದಾರೆ ಚಂದನ್ ಆಚಾರ್. ಈಗ ಹೀಗ್ಯಾಕೆ ಹೇಳಿದ್ದಾರೆ ಅಂತ ಅರ್ಥ ಆಗುತ್ತಿಲ್ಲ'' ಅಂತ ಬೇಸರ ವ್ಯಕ್ತಪಡಿಸಿದರು ಸುಜಾತ.
ಶೈನ್
ಶೆಟ್ಟಿ
ಜೊತೆ
ಚಂದನ್
ಆಚಾರ್
ಬೇಳೆ
'ಕಿರಿಕ್'.!

ಸುದೀಪ್ ಕೇಳಿದ್ದು ಒಗಟು
''ಹನ್ನೆರಡು ಜನರಲ್ಲಿ ಒಬ್ಬರು ಒಬ್ಬರಿಗೆ ಊಟ ಬಡಿಸುವಷ್ಟರಲ್ಲಿ ಇನ್ನೊಬ್ಬರು ಎಲ್ಲಾ ಹನ್ನೆರಡು ಜನರಿಗೂ ಊಟ ಬಡಿಸಿರುತ್ತಾರೆ'' ಎಂಬುದು ಒಗಟು. ಇದರ ಉತ್ತರ ಗಡಿಯಾರ. ಸಮಯ ಎನ್ನುವುದು ತುಂಬಾ ಮುಖ್ಯ. ಈಗಾಗಲೇ 21 ದಿನಗಳು ಕಳೆದಿವೆ. ಕಾಲು ಭಾಗದ ಬಿಗ್ ಬಾಸ್ ಪಯಣ ಮುಗಿದಿದೆ. ಇನ್ನಾದರೂ ಚೆನ್ನಾಗಿ ಆಡಿ ಎಂಬುದನ್ನ ಎಲ್ಲರಿಗೂ ಎಚ್ಚರಿಸಲು ಸುದೀಪ್ ಗಡಿಯಾರದ ಒಗಟ್ಟನ್ನು ಹೇಳಬೇಕಾಯಿತು. ಆದರೆ ಅದು ಎಲ್ಲಿಂದ ಎಲ್ಲಿಗೋ ಹೋಯಿತು.