Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರವಿಂದ್ ಹೂಗುಚ್ಛ ನೀಡಿದ್ದು ಯಾರಿಗೆ? ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆ ಸುದೀಪ್ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ 8 ಮೊದಲ ವಾರ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೊದಲ ವಾರದ ಪಂಚಾಯಿತಿ ಕೂಡ ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗಲಿದ್ದಾರೆ ಎನ್ನುವ ಪ್ರೇಕ್ಷಕರ ಕುತೂಹಲವನ್ನು ಇವತ್ತಿನ ಸಂಚಿಕೆ ವರೆಗೂ ಕಾಯ್ದಿರಿಸಲಾಗಿದೆ.
ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದವರಲ್ಲಿ ವಿಶ್ವ ಮತ್ತು ಶುಭಾ ಪೂಂಜಾ ಇಬ್ಬರು ಸೇಫ್ ಆಗಿದ್ದಾರೆ. ಇವತ್ತು ಮನೆಯಿಂದ ಹೋಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇವತ್ತಿನ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಬಿಗ್ ಮನೆಯ ಟ್ರಯಾಂಗಲ್ ಲವ್ ಸ್ಟೋರಿ ರಿವೀಲ್ ಆಗಿದೆ. ಮುಂದೆ ಓದಿ..
ಬಿಗ್ಬಾಸ್:
ಸುದೀಪ್
ಕೇಳಿದ
ಪ್ರಶ್ನೆಯಿಂದ
ಕಣ್ಣೀರು
ಹಾಕಿದ
ರಘು
ಗೌಡ

ದಿವ್ಯಾ ಮೇಲೆ ಶಮಂತ್ ಗೆ ಲವ್
ಬಿಗ್ ಬಾಸ್ ಮನೆಯಲ್ಲಿ ಶಮಂತ್ ಗೆ ದಿವ್ಯಾ ಸುರೇಶ್ ಮೇಲೆ ಲವ್ ಆಗಿದೆ ಎನ್ನುವ ವಿಚಾರವನ್ನು ಅವರೇ ಬಹಿರಂಗ ಪಡಿಸಿದ್ದರು. ಆದರೆ ದಿವ್ಯಾ ಮೇಲೆ ಮತ್ತೊಬ್ಬರಿಗೆ ಲವ್ ಆದ ವಿಚಾರ ರಿವೀಲ್ ಆಗಿದೆ. ಅದು ಮತ್ಯಾರು ಅಲ್ಲ ಅರವಿಂದ್.

ದಿವ್ಯಾ ಎಂದರೆ ಅರವಿಂದ್ ಅವರಿಗೂ ಇಷ್ಟ
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವ ಮೊದಲು ಹೂ ಗುಚ್ಚವನ್ನು ನೀಡಿ ಇಷ್ಟವಾದವರಿಗೆ ಈ ಹೂ ಗುಚ್ಚ ನೀಡುವಂತೆ ಹೇಳಲಾಗಿತ್ತು. ಅರವಿಂದ್ ತನ್ನ ಕ್ರಶ್ ದಿವ್ಯಾ ಅವರಿಗೆ ಹೂಗುಚ್ಛ ನೀಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್, ಹೂಗುಚ್ಛ ನೀಡಿದ ಬಳಿಕ ಏನಾಯಿತು ಎಂದು ಅರವಿಂದ್ ಅವರನ್ನು ಕೇಳುತ್ತಾರೆ. ಅರವಿಂದ್, ಮಂಜು ಹಾರಿಸಿಕೊಂಡು ಹೋದರು ಎಂದಿದ್ದಾರೆ.
ಬಿಗ್ಬಾಸ್:
ಸೇಫ್
ಆದ್ರು
ಶುಭಾ
ಪೂಂಜಾ,
ಹೊರ
ಹೋಗುವುದು
ಯಾರು?

ಶಮಂತ್ ಲವ್ ಸ್ಟೋರಿ ಬಿಚ್ಚಿಟ್ಟ ಸುದೀಪ್
ಬಳಿಕ ಸುದೀಪ್, ಶಮಂತ್ ಲವ್ ಸ್ಟೋರಿಯನ್ನು ಬಿಚ್ಚಿಡುತ್ತಾರೆ. ಅಂದಹಾಗೆ ಶಮಂತ್ ಗೆ ಲವ್ ಆಗಿರುವ ವಿಚಾರ ಬಿಗ್ ಮನೆಯಲ್ಲಿ ಕೆಲವು ಸ್ಪರ್ಧಿಗಳಿಗೆ ಬಿಟ್ಟರೆ ಎಲ್ಲರಿಗೂ ಗೊತ್ತಿರಲಿಲ್ಲ. ಆದರೆ ಸುದೀಪ್ ಎಲ್ಲಾ ಸ್ಪರ್ಧಿಗಳಿಗೂ ಹೇಳಿ, ಶಮಂತ್ ಪ್ರೀತಿಗೆ ಮಂಜು ಬಂಡೆಯಂತೆ ಅಡ್ಡ ಬಂದಿರುವುದನ್ನು ಬಹಿರಂಗ ಪಡಿಸಿದ್ದಾರೆ.
ಬಿಗ್
ಬಾಸ್:
ಚಂದ್ರಕಲಾ
ಮಾಡಿದ
ತಪ್ಪಿಗೆ
ಮನೆ
ಮಂದಿಗೆಲ್ಲಾ
ಶಿಕ್ಷೆ

ದಿವ್ಯಾ ಒಲವು ಯಾರ ಕಡೆ?
ಇದೀಗ ದಿವ್ಯಾ ಒಲವು ಯಾರ ಕಡೆ ಎನ್ನುವುದು ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ದಿವ್ಯಾ ಸದ್ಯ ಮಂಜು ಪಾವಗಡ ಜೊತೆ ತುಂಬಾ ಕ್ಲೋಸ್ ಆಗಿದ್ದಾರೆ. ಇಬ್ಬರು ಪ್ರೀತಿ, ಮದುವೆ ಎಂದು ನಾಟಕ ಆಡುತ್ತಿದ್ದಾರೆ. ಇದೀಗ ಅರವಿಂದ್ ಮತ್ತು ಶಮಂತ್ ಇಬ್ಬರಿಗೂ ಅಡ್ಡವಾಗಿ ನಿಂತಿರುವುದು ಮಂಜು. ಎರಡನೇ ವಾರ ಪ್ರೀತಿ ವಿಚಾರ ಎಲ್ಲಿವರೆಗೂ ಮುಂದುವರೆಯಲಿದೆ. ದಿವ್ಯಾ ಯಾರ ಜೊತೆ ಕ್ಲೋಸ್ ಆಗುತ್ತಾರೆ ಎನ್ನುವುದನ್ನು ಸದ್ಯದ ಕುತೂಹಲ.