For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಎರಡನೇ ವಾರಕ್ಕೆ ಎಂಟು ಮಂದಿ ಮೇಲೆ ನಾಮಿನೇಷನ್ ಕತ್ತಿ

  |

  ಬಿಗ್‌ಬಾಸ್ ಸೀಸನ್ ಎಂಟರ ಎರಡನೇ ವಾರದ ಮನೆಯಿಂದ ಹೊರಗೆ ಹೋಗಲು ಹೊಸ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.

  ಮೊದಲ ವಾರದ ಟಿಕ್‌ಟಾಕ್ ಸ್ಟಾರ್ ಈಗಾಗಲೇ ಹೊರಗೆ ಹೋಗಿದ್ದು. ಎರಡನೇ ವಾರ ಮತ್ತೊಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಇದಕ್ಕಾಗಿ ಎಂಟು ಮಂದಿಯನ್ನು ನಾಮಿನೇಟ್ ಮಾಡಲಾಗಿದೆ.

  ಬಿಗ್‌ಬಾಸ್ ಅವರು ಎಲ್ಲ ಸ್ಪರ್ಧಿಗಳನ್ನು ಸೀಕ್ರೆಟ್ ರೂಂ ಗೆ ಕರೆದು ಒಬ್ಬೊಬ್ಬರು ಮೂವರ ಹೆಸರನ್ನು ನಾಮಿನೇಟ್ ಮಾಡಲು ಹೇಳಿ, ಸೂಕ್ತ ಕಾರಣವನ್ನು ತಿಳಿಸುವಂತೆ ಹೇಳಿದರು.

  ಎಲ್ಲ ಸ್ಪರ್ಧಿಗಳು ಮೂವರು ಸ್ಪರ್ಧಿಗಳ ಹೆಸರನ್ನು ಹೇಳಿದರು. ಹಾಗೂ ಅವರ ಹೆಸರನ್ನು ಹೇಳುತ್ತಿರುವುದಕ್ಕೆ ಕಾರಣವನ್ನೂ ಸಹ ಹೇಳಿದರು. ಹೆಚ್ಚು ಮಂದಿ ಯಾರ ಹೆಸರನ್ನು ಹೇಳಿದ್ದಾರೆಯೋ ಅವರನ್ನು ಎರಡನೇ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಮಾಡಿದರು ಬಿಗ್‌ಬಾಸ್.

  ಅಂತೆಯೇ ಎರಡನೇ ವಾರದಲ್ಲಿ, ನಿರ್ಮಲಾ, ಪ್ರಶಾಂತ್ ಸಂಬರ್ಗಿ, ದಿವ್ಯಾ ಸುರೇಶ್, ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ಚಂದ್ರಕಲಾ ಅವರುಗಳನ್ನು ಈ ವಾರ ನಾಮಿನೇಟ್ ಮಾಡಲಾಯಿತು.

  ಆ ನಂತರ ಮನೆಯ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ಅವರಿಗೆ ಈ 7 ಮಂದಿಯನ್ನು ಹೊರತುಪಡಿಸಿ ಒಬ್ಬ ಸ್ಪರ್ಧಿಯ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಲು ಹೇಳಲಾಯಿತು. ಅದರಂತೆ ಬ್ರೋ ಗೌಡ ಅವರು ನಟಿ ಶುಭಾ ಪೂಂಜಾ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಿದರು.

  ನಿರ್ಮಲಾ, ಪ್ರಶಾಂತ್, ದಿವ್ಯಾ ಸುರೇಶ್, ಗೀತಾ ಭಟ್, ಗಾಯಕ ವಿಶ್ವನಾಥ್, ಚಂದ್ರಕಲಾ ಹಾಗೂ ಶುಭಾ ಪೂಂಜಾ ಅವರುಗಳಲ್ಲಿ ಯಾರೊ ಒಬ್ಬರು ಎರಡನೇ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ.

  ಬಿಗ್‌ಬಾಸ್ ಮನೆಯಿದ ಹೊರಗೆ ಹೋಗುವ ಮುನ್ನಾ ಧನುಶ್ರಿ ಅವರು ರಘು ಗೌಡ ಅವರನ್ನು ಉಳಿಸಿದ್ದರು. ಹಾಗೂ ಬ್ರೋ ಗೌಡ ಮನೆಯ ಕ್ಯಾಪ್ಟನ್ ಆಗಿರುವ ಕಾರಣ ಅವರನ್ನು ಯಾವ ಸ್ಪರ್ಧಿಗಳು ಸಹ ನಾಮಿನೇಟ್ ಮಾಡುವಂತೆ ಇರಲಿಲ್ಲ ಹಾಗಾಗಿ ಅವರಿಬ್ಬರು ಬಚಾವಾದರು.

  English summary
  Bigg Boss Kannada 8: contestants nominated 8 people for nominations and one contestant nominated directly.
  Tuesday, March 9, 2021, 0:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X