For Quick Alerts
  ALLOW NOTIFICATIONS  
  For Daily Alerts

  ಸ್ವಾಮೀಜಿಗಳ ನಡುವೆ ಡಬಲ್ ಮೀನಿಂಗ್ ಡೈಲಾಗ್ಸ್

  By Rajendra
  |

  ಇದು ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ 24ನೇ ದಿನದ ವಿಶೇಷ. ಆರಂಭದಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಹಾಗೂ ಕಾಳಿ ಮಠದ ಋಷಿಕುಮಾರ ಸ್ವಾಮಿ ಒಂದೇ ವಾರದಲ್ಲಿ ತುಂಬ ಹತ್ತಿರವಾಗಿದ್ದಾರೆ.

  ಎಷ್ಟೇ ಆಗಲಿ ಇಬ್ಬರೂ ಕಾವಿಧಾರಿಗಳಲ್ಲವೇ. ಆಕರ್ಷಣೆ ಇದ್ದೇ ಇರುತ್ತದೆ ಬಿಡಿ. ಇವರಿಬ್ಬರೂ ಒಂದಾಗಿರುವುದು ಬಿಗ್ ಬಾಸ್ ಮನೆಯಲ್ಲಿ ಪ್ರಳಯದ ಸೂಚನೆಯೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಳಯ ಫಿಕ್ಸ್ ಆಗಿದೆ.

  ಇಬ್ಬರೂ ಸ್ವಾಮಿಗಳು ಕ್ಷಣಕಾಲ ಒಟ್ಟಿಗೆ ಕೂತು ಲೋಕಾಭಿರಾಮವಾಗಿ ಮಾತನಾಡಿಕೊಂಡರು. ಋಷಿಕುಮಾರನಂತೂ ಬಿಗ್ ಬಾಸ್ ಮನೆಯನ್ನು ಮಠ ಮಾಡಿಬಿಟ್ಟರೆ ಚೆನ್ನಾಗಿರುತ್ತದೆ. ಮನೆಯ ಮೆಟ್ಟಿಲನ್ನು ಜಾರೆಬಂಡೆ ಮಾಡಿಕೊಂಡುಬಿಡ್ತೀನಿ ಎಂದ. [ಇದನ್ನೂ ಓದಿ : ಗುಟ್ಟಾಗಿ ಒಂದಾದ ಸ್ವಾಮೀಜಿಗಳು]

  ಬಿಗ್ ಬಾಸ್ ಮನೆಯನ್ನು ಮಠ ಮಾಡುವ ಪ್ಲಾನ್

  ಬಿಗ್ ಬಾಸ್ ಮನೆಯನ್ನು ಮಠ ಮಾಡುವ ಪ್ಲಾನ್

  ಇದಕ್ಕೆ ಧ್ವನಿಗೂಡಿಸಿದ ಬ್ರಹ್ಮಾಂಡ ಸ್ವಾಮಿಗಳು, ಅಯ್ಯೋ ಮಠಕ್ಕೆ ಭಕ್ತಾದಿಗಳು ಕೊಡುವ ದವಸ ಧಾನ್ಯಗಳನ್ನು ಅಡುಗೆಮನೆಯಲ್ಲೇ ಸ್ಟೋರ್ ಮಾಡಿಕೊಳ್ಳಬಹುದು. ನಾನಂತೂ ಮಠದ ಮುಂದೆ ಉಯ್ಯಾಲೆ ಹಾಕಿಸಿಕೊಂಡು ಬಿಡ್ತೀನಪ್ಪಾ ಎಂದರು.

  ಸ್ವಾಮೀಜಿಗಳ ನಡುವೆ ಡಬಲ್ ಮೀನಿಂಗ್ ಡೈಲಾಗ್

  ಸ್ವಾಮೀಜಿಗಳ ನಡುವೆ ಡಬಲ್ ಮೀನಿಂಗ್ ಡೈಲಾಗ್

  ಕಡೆಗೆ ಋಷಿಕುಮಾರ ಮಾತನಾಡುತ್ತಾ, ಅಯ್ಯೋ ಲಿಂಗಧಾರಿಗಳಾದ ನಮಗ್ಯಾಕೆ ಬೇಕು ಇವೆಲ್ಲಾ. ಆದ್ರೂ ನಮ್ಮಂತಹ ಲಿಂಗವಂತರ ಜೊತೆ ಈ ಸ್ತ್ರೀಲಿಂಗಗಳನ್ನು ಯಾಕೆ ಬಿಟ್ಟರೋ ಗೊತ್ತಿಲ್ಲಪ್ಪಾ ಎಂದು ನಕ್ಕರು. ನಮಗ್ಯಾಕೆ ಬಿಡಪ್ಪ ಸ್ತ್ರೀಲಿಂಗದ ಸಹವಾಸ ಎಂದರು. ಅವರ ಡಬಲ್ ಮೀನಿಂಗ್ ಅರ್ಥ ಮಾಡಿಕೊಂಡಂತೆ ಬ್ರಹ್ಮಾಂಡ ಸ್ವಾಮಿಗಳು ಗಹಗಹಿಸಿ ನಕ್ಕರು.

  ಪೌರಾಣಿಕ ಆಪ್ತಮಿತ್ರ ಮಾಡಿದ ಸ್ಪರ್ಧಿಗಳು

  ಪೌರಾಣಿಕ ಆಪ್ತಮಿತ್ರ ಮಾಡಿದ ಸ್ಪರ್ಧಿಗಳು

  ಬಳಿಕ ಬಿಗ್ ಬಾಸ್ ನಿಂದ ಎಲ್ಲರಿಗೂ ಕರೆಬಂತು. ಈ ಬಾರಿ ಬಿಗ್ ಬಾಸ್ ಮತ್ತೊಂದು ವಿಭಿನ್ನ ಟಾಸ್ಕ್ ಕೊಟ್ಟ. ಆಪ್ತಮಿತ್ರ ಚಿತ್ರವನ್ನು ಪೌರಾಣಿಕವಾಗಿ ಮಾಡಿತೋರಿಸಬೇಕು. ಇದರ ನಿರ್ದೇಶನದ ಜವಾಬ್ದಾರಿಯನ್ನು ನರೇಂದ್ರ ಬಾಬು ಶರ್ಮಾ ಅವರಿಗೆ ಒಪ್ಪಿಸಿರುವುದಾಗಿ ಆಜ್ಞೆ ಮಾಡಲಾಯಿತು.

  ಪೌರಾಣಿಕ ಆಪ್ತಮಿತ್ರನಿಗೆ ಬ್ರಹ್ಮಾಂಡ ಆಕ್ಷನ್ ಕಟ್

  ಪೌರಾಣಿಕ ಆಪ್ತಮಿತ್ರನಿಗೆ ಬ್ರಹ್ಮಾಂಡ ಆಕ್ಷನ್ ಕಟ್

  ಬ್ರಹ್ಮಾಂಡ ಗುರೂಜಿಗಳು ಪೌರಾಣಿಕ ಆಪ್ತಮಿತ್ರನಿಗೆ ಆಕ್ಷನ್ ಕಟ್ ಹೇಳಲು ಅಣಿಯಾದರು. ಆಪ್ತಮಿತ್ರ ಚಿತ್ರದಲ್ಲಿನ ವಿಷ್ಣುವರ್ಧನ ಪಾತ್ರವನ್ನು ವಿನಾಯಕ ಜೋಷಿ, ರಮೇಶ್ ಅರವಿಂದ್ ಅವರ ಪಾತ್ರವನ್ನು ತಿಲಕ್, ಸೌಂದರ್ಯಳಾಗಿ ನಿಖಿತಾ ಹಾಗೂ ಪ್ರೇಮಾ ಪಾತ್ರದಲ್ಲಿ ಅನುಶ್ರೀ, ಮಾಂತ್ರಿಕನಾಗಿ ನರೇಂದ್ರ ಬಾಬು ಶರ್ಮಾ ಮೇಕಪ್ ಮಾಡಿಕೊಂಡರು.

  ನಾಗವಲ್ಲಿ ಪಾತ್ರದಲ್ಲಿ ಮಿಂಚಿದ ನಿಖಿತಾ

  ನಾಗವಲ್ಲಿ ಪಾತ್ರದಲ್ಲಿ ಮಿಂಚಿದ ನಿಖಿತಾ

  ಎಲ್ಲರೂ ಸೇರಿ ಪೌರಾಣಿಕ ಆಪ್ತಮಿತ್ರ ಚಿತ್ರವನ್ನು ಚೆನ್ನಾಗಿಯೇ ಮಾಡಿದರು. ಆದರೆ ಅನುಶ್ರೀ ನಿರೀಕ್ಷಿಸಿದ್ದು ನಾಗವಲ್ಲಿ ಪಾತ್ರವನ್ನು. ಆದರೆ ಬ್ರಹ್ಮಾಂಡ ಶರ್ಮಾ ಕೊಟ್ಟಿದ್ದು ಪ್ರೇಮಾ ಪಾತ್ರ. ಈ ಬಗ್ಗೆ ಅನುಶ್ರೀ ಕೊಂಚ ಅಸಮಾಧಾನಕ್ಕೆ ಒಳಗಾಗಿದ್ದರು.

  ಮನೆಯಲ್ಲಿ ಅಸಮಾಧಾನದ ಹೊಗೆ

  ಮನೆಯಲ್ಲಿ ಅಸಮಾಧಾನದ ಹೊಗೆ

  ನಾಗವಲ್ಲಿ ಪಾತ್ರವನ್ನು ನಿಖಿತಾ ಚೆನ್ನಾಗಿಯೇ ನಿಭಾಯಿಸಿದರು. ಪಾತ್ರ ತೆಲುಗಿನಲ್ಲಿ ಇದ್ದದ್ದು ಆಕೆಗೆ ಸುಲಭವಾಯಿತು. ಮಾಂತ್ರಿಕನಂತೆಯೇ ಬ್ರಹ್ಮಾಂಡ ಸ್ವಾಮೀಜಿಗಳು ಅಭಿನಯಿಸಿ ತೋರಿಸಿದರು. ಎಲ್ಲಾ ಮುಗಿದರೂ ಮನೆಯಲ್ಲಿ ಅಸಮಾಧಾನದ ಹೊಗೆ ಮಾತ್ರ ತುಂಬಿಕೊಳ್ಳುತ್ತಲೇ ಇದೆ.

  English summary
  Etv Kannada's big reality show Bigg Boss day 24th highlights. This time Brahmanda and Kali seer close to each other. They used double meaning dialogues while talking each other. This time Bigg Boss gives mythological Apthamitra task to participants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X