»   » ಫ್ಯಾಷನ್ ಶೋನಲ್ಲಿ ಬ್ರಹ್ಮಾಂಡ ಶರ್ಮಾ ಕ್ಯಾಟ್ ವಾಕ್

ಫ್ಯಾಷನ್ ಶೋನಲ್ಲಿ ಬ್ರಹ್ಮಾಂಡ ಶರ್ಮಾ ಕ್ಯಾಟ್ ವಾಕ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮದ 63 ಹಾಗೂ 64ನೇ ದಿನದ ಹೈಲೈಟ್ಸ್ ಇಲ್ಲಿವೆ. ಮನೆಯಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಚಂದ್ರಿಕಾ ಹಾಗೂ ನಿಕಿತಾ ಇಬ್ಬರೂ ನಿಧಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.

ಇಬ್ಬರ ಕೈಗಳಿಗೆ ಹಗ್ಗ ಕಟ್ಟಿ ಸದಾ ಜೊತೆಯಲ್ಲಿರುವಂತೆ ರಿಷಿಕಾ ಸಿಂಗ್ ಸೂಚಿಸಿದ ಕಾರಣ ಇಬ್ಬರೂ ಜೊತೆ ಜೊತೆಯಲ್ಲೇ ಓಡಾಡುವಂತಾಗಿದೆ. ಸದ್ಯಕ್ಕೆ ಇಬ್ಬರ ನಡುವೆ ಯುದ್ಧ ವಿರಾಮ ಘೋಷಣೆಯಾಗಿದೆ. ಇನ್ನು ಈ ಬಾರಿ ಒಟ್ಟು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ.

ವಿಜಯ್ ರಾಘವೇಂದ್ರ, ನರೇಂದ್ರ ಬಾಬು ಶರ್ಮಾ, ಚಂದ್ರಿಕಾ ಹಾಗೂ ನಿಕಿತಾ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು. ಆದರೆ ಈ ಬಾರಿ ಮನೆಯಿಂದ ಯಾರೂ ಹೊರಗೆ ಹೋಗುತ್ತಿಲ್ಲ ಎಂಬುದು ಮನೆಯ ಸದಸ್ಯರಿಗೆ ಗೊತ್ತಿಲ್ಲ.

ರಾಘುಗೆ ಮನೆಯಲ್ಲಿ ಮಿಶ್ರ ಸಂಭ್ರಮ

ಮನೆಯಲ್ಲಿ ವಿಜಯ್ ರಾಘವೇಂದ್ರ ಅವರ ಹುಟ್ಟುಹಬ್ಬ ಸಂಭ್ರಮವೂ ಅದ್ಧೂರಿಯಾಗಿ ನಡೆಯಿತು. ಒಂದು ಕಡೆ ಹುಟ್ಟುಹಬ್ಬ ಸಂಭ್ರಮ ಇನ್ನೊಂದು ಕಡೆ ನಾಮಿನೇಟ್ ಆದ ಭಯ ವಿಜಯ್ ರಾಘವೇಂದ್ರ ಅವರನ್ನು ಕಾಡುತ್ತಿದೆ.

ವಿಜಯ್ ಅವರನ್ನು ಅಪ್ಪಿ ಮುದ್ದಾಡಿದ ನಿಕಿತಾ

ಅಂದರಿಕಿ ಮಂಚಿವಾಡು ಅನಂತರಾಮಯ್ಯ ಟೈಮ್ ಆಯ್ತು ಟೈಮ್ ಆಯ್ತು ಆಚೆ ಹೋಗಯ್ಯಾ ಎಂದು ರಾಘು ತಮ್ಮ ಪಾಡಿಗೆ ತಾವು ಗುನುಗಿಕೊಂಡರು ರಾಘು. ನಿಕಿತಾ ಅವರಂತೂ ಪದೇ ಪದೇ ಅಪ್ಪಿ ತಬ್ಬಿ ವಿಜಯ್ ರಾಘವೇಂದ್ರ ಅವರಿಗೆ ಶುಭಾಶಯ ಹೇಳಿದ್ದು ವಿಶೇಷವಾಗಿತ್ತು.

ತೇರೆ ಮೇರೆ ಬೀಚ್ ಮೇ...ಹಾಡಿದ ಬ್ರಹ್ಮಾಂಡ

ಇನ್ನೊಂದು ಕಡೆ ಬ್ರಹ್ಮಾಂಡ ಶರ್ಮಾ ಅವರು ನೆನಪಿನ ದೋಣಿಯಲ್ಲಿ ವಿಹರಿಸಿದರು. ತಮ್ಮಷ್ಟಕ್ಕೆ ತಾವು "ತೇರೆ ಮೇರೆ ಬೀಚ್ ಮೇ .. ಕೈಸಾ ಹೈ ಯೆಹ್ ಬಂಧನ್..." ಎಂದು ಹಾಡಿಕೊಂಡರು. ಪಾಪ ಅವರಿಗೆ ಏನು ನೆನಪಾಯಿತೋ ಏನೋ ಗೊತ್ತಾಗಲಿಲ್ಲ. ಆದರೆ ಮನೆಯ ಇತರೆ ಸದಸ್ಯರು ಮಾತ್ರ ಮುಸಿಮುಸಿ ನಗುತ್ತಿದ್ದರು.

ಬಿಗ್ ಬಾಸ್ ಮನೆಯಲ್ಲಿ ಫ್ಯಾಷನ್ ಶೋ

ಮನೆಯಲ್ಲಿ ಫ್ಯಾಷನ್ ಶೋ ಆಚರಿಸುವಂತೆ ಬಿಗ್ ಬಾಸ್ ಆಜ್ಞೆ ಮಾಡಿದರು. ಅದರ ಪ್ರಕಾರ ಚಂದ್ರಿಕಾ, ಅನುಶ್ರೀ ಹಾಗೂ ನಿಕಿತಾ ರೂಪದರ್ಶಿಗಳಾಗಿ ಕ್ಯಾಟ್ ವಾಕ್ ಮಾಡಬೇಕಾಗಿತ್ತು. ಇದರ ನಿರೂಪಣೆಯನ್ನು ಅರುಣ್ ಸಾಗರ್ ಅವರಿಗೆ ಒಪ್ಪಿಸಲಾಗಿತ್ತು. ತೀರ್ಪುಗಾರರಾಗಿ ವಿಜಯ್ ರಾಘವೇಂದ್ರ ಇದ್ದರು.

ಅನುಶ್ರೀಗೆ ಬ್ರಹ್ಮಾಂಡ ಶರ್ಮಾ ಟಿಪ್ಸ್

ಅನುಶ್ರೀ ಅವರು ರ್‍ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಬ್ರಹ್ಮಾಂಡ ಶರ್ಮಾ ಅವರು ತಲೆಕೂದಲು ಈ ರೀತಿ ಹಾಕಿಕೋ, ಈ ರೀತಿ ಲುಕ್ ಕೊಡಬೇಕು ಎಂದು ಟಿಪ್ಸ್ ಕೊಟ್ಟರು. ಇನ್ನು ಲೂಸ್ ಮಾದ ಯೋಗೀಶ್ ಮಾತ್ರ ಲೂಸ್ ಲೂಸ್ ಆಗಿ ಆಡುತ್ತಿದ್ದ. ಒಂಚೂರು ಘನತೆ, ಗಾಂಭೀರ್ಯ ಅವರಲ್ಲಿ ಕಂಡುಬರುತ್ತಿರಲಿಲ್ಲ.

ರ್‍ಯಾಂಪ್ ಮೇಲೂ ಬ್ರಹ್ಮಾಂಡ ಶರ್ಮಾ ಕ್ಯಾಟ್ ವಾಕ್

ಇದೇ ಸಂದರ್ಭದಲ್ಲಿ ಬ್ರಹ್ಮಾಂಡ ಶರ್ಮಾ ಅವರು ರ್‍ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕಿದರು. ಅವರು ನಡೆದು ಹೋಗುತ್ತಿದ್ದರೆ ಹಿಂದುಗಡೆಯಿಂದ ಅರುಣ್ ಸಾಗರ್ ಆನೆಯಂತೆ ಸದ್ದು ಮಾಡಿ ರಂಜಿಸಿದರು. ಅದು ಬೆಕ್ಕಿನ ನಡಿಗೆಯೋ ಆನೆಯ ನಡಿಗೆಯೋ ಗೊತ್ತಾಗಲಿಲ್ಲ.

ಚಿತ್ರಾನ್ನ ಚಿತ್ರಾನ್ನ ಹಾಡಿಗೆ ಹೆಜ್ಜೆ ಹಾಕಿದ ಶರ್ಮಾ

ಚಿತ್ರಾನ್ನ ಚಿತ್ರಾನ್ನ ಹಾಡಿಗೂ ಬ್ರಹ್ಮಾಂಡ ಗುರುಗಳು ಮದವೇರಿದ ಮದ್ದಾನೆಯಂತೆ ಕುಣಿದರು. ಕುಣಿದು ಕುಣಿದು ಸುಸ್ತಾಗಿ ಕಡೆಗೆ ಒಂದೆಡೆ ಕೂತು ತಾಳ ಹಾಕುತ್ತಿದ್ದರು. ಒಟ್ಟಾರೆಯಾಗಿ ಈಟಿವಿ ವಾಹಿನಿ ವೀಕ್ಷಕರಿಗೆ ಬ್ರಹ್ಮಾಂಡ ಶರ್ಮಾ ಅವರು ಒಳ್ಳೆ ಕಾಮಿಡಿ ಹೀರೋ ತರಹ ಮನರಂಜನೆ ಕೊಡುತ್ತಿದ್ದಾರೆ.

ಈ ಬಾರಿ ಮನೆಯಿಂದ ಯಾರೂ ಔಟ್ ಇಲ್ಲ

ಈ ಬಾರಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದರೂ ವೀಕ್ಷಕರಿಗೆ ಓಟಿಂಗ್ ಲೈನ್ಸ್ ಕ್ಲೋಸ್ ಆಗಿವೆ. ಈ ಬಾರಿ ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ ಎಂಬ ಸಂಗತಿ ಸದಸ್ಯರಿಗೆ ಗೊತ್ತಿಲ್ಲ. ಆದರೆ ಸುಮ್ಮನೆ ನಾಲ್ಕು ಮಂದಿಯನ್ನು ನಾಮಿನೇಟ್ ಮಾಡಿ ಬಿಗ್ ಬಾಸ್ ಹೊಸ ಪರೀಕ್ಷೆಗೆ ಒಡ್ಡಿದ್ದಾರೆ.

English summary
Bigg Boss Kannada day 63rd and 64th highlights. Vijay Raghavendra's birthday celebrated in BB house. This time BB gives fashion show task to inmates. Even Brahmanda Narendra Babu Sharma also participated in cat walk.
Please Wait while comments are loading...