»   » ಬಿಗ್ ಬಾಸ್ ಮನೆಯ ರಂಧ್ರ ಮುಚ್ಚುವರು ಯಾರು?

ಬಿಗ್ ಬಾಸ್ ಮನೆಯ ರಂಧ್ರ ಮುಚ್ಚುವರು ಯಾರು?

Posted By:
Subscribe to Filmibeat Kannada
<ul id="pagination-digg"><li class="next"><a href="/tv/chandrika-suggests-correct-word-to-arun-bigg-boss-074423.html">Next »</a></li></ul>

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮ ಬರುಬರುತ್ತಾ ಸ್ವಲ್ಪ ಸಪ್ಪೆಯಾಗುತ್ತಿದೆ ಎನ್ನಿಸುತ್ತಿದೆ. ಕಾರ್ಯಕ್ರಮಕ್ಕೆ ಒಂಚೂರು ಮೈಲೇಜ್ ಕೊಡುತ್ತಿರುವವರು ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಎಂದೇ ಹೇಳಬೇಕು. ಬನ್ನಿ ಒಮ್ಮೆ 64ನೇ ದಿನದ ಹೈಲೈಟ್ಸ್ ಕಡೆಗೆ ಕಣ್ಣು ಹಾಯಿಸೋಣ.

ಈ ಬಾರಿ ಬಿಗ್ ಬಾಸ್ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದ್ದಾನೆ. ಒಂದು ಸಾವಿರ ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಒಂದಕ್ಕೆ ನಾಲ್ಕು ರಂಧ್ರಗಳನ್ನು ಮಾಡಲಾಗಿದ್ದು ನೀರು ಹೊರಹೋಗದಂತೆ ಇಬ್ಬರು ಸದಸ್ಯರು ಹಗಲು ರಾತ್ರಿ ಕಾದು ತಡೆಯಬೇಕು.

Etv Kannada reality show Bigg Boss

ಈ ಮೂಲಕ ಮನೆಯ ಸದಸ್ಯರಿಗೆ ಜಲ ಸಂರಕ್ಷಣೆಯ ಪಾಠ ಮಾಡುತ್ತಿದ್ದಾರೆ ಬಿಗ್ ಬಾಸ್. ಕಡೆಗೆ ಎಷ್ಟು ಲೀಟರ್ ನೀರು ಉಳಿಯುತ್ತದೋ ಅಷ್ಟು ಪಾಯಿಂಟ್ಸ್ ಕೊಡಲಾಗುತ್ತದೆ. ಅದೇ ಈ ಬಾರಿಯ ಲಗ್ಜುರಿ ಬಜೆಟ್. ಟ್ಯಾಂಕಿನ ನಾಲ್ಕು ರಂಧ್ರಗಳನ್ನು ಮುಚ್ಚುವಲ್ಲಿ ಮನೆಯ ಎಲ್ಲಾ ಸದಸ್ಯರು ಹೈರಾಣಾಗಿ ಹೋದರು.

ಈ ನಾಲ್ಕು ರಂಧ್ರಗಳನ್ನು ಮುಚ್ಚಲು ಕೈಯ ಬೆರಳುಗಳನ್ನು ಮಾತ್ರ ಬಳಸುವಂತೆ ಬಿಗ್ ಬಾಸ್ ಆಜ್ಞಾಪಿಸಿದ್ದಾರೆ. ಹಾಗಾಗಿ ಎಲ್ಲರೂ ನಿದ್ದೆಗೆಟ್ಟು, ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೆ ರಂಧ್ರಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಶಕ್ತಿಪಥ ಟಾಸ್ಕ್ ಎಂದೂ ನಾಮಕರಣ ಮಾಡಲಾಗಿದೆ.

<ul id="pagination-digg"><li class="next"><a href="/tv/chandrika-suggests-correct-word-to-arun-bigg-boss-074423.html">Next »</a></li></ul>
English summary
Etv Kannada reality show Bigg Boss day 64th highlights. BB gives luxury budget task to inmates. Brahmanda Narendra Babu Sharma left the task in the middle and used dirty words on Bigg Boss.
Please Wait while comments are loading...