»   » ಅನುಶ್ರೀ, ಯೋಗಿ 'ಬಿಗ್ ಬಾಸ್ ತುಲಾಭಾರ' ಸೇವೆ

ಅನುಶ್ರೀ, ಯೋಗಿ 'ಬಿಗ್ ಬಾಸ್ ತುಲಾಭಾರ' ಸೇವೆ

Posted By:
Subscribe to Filmibeat Kannada
<ul id="pagination-digg"><li class="next"><a href="/tv/anushree-feels-naturs-call-bigg-boss-074463.html">Next »</a></li></ul>

ಬಿಗ್ ಬಾಸ್ ನೀಡಿದ್ದ ಜಲಸಂರಕ್ಷಣೆ ಟಾಸ್ಕ್ ಮುಗಿದಿದೆ. ಎಲ್ಲರೂ ಅಹರ್ನಿಶಿ ಶ್ರಮಿಸಿ ಕಡೆಗೆ 600 ಪಾಯಿಂಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 66ನೇ ದಿನವೂ ಶಕ್ತಿಪಥ ಟಾಸ್ಕ್ ಮುಂದುವರಿದಿದೆ. ಈ ಬಾರಿ 'ಬಿಗ್ ಬಾಸ್ ತುಲಾಭಾರ' ಟಾಸ್ಕ್ ನೀಡಲಾಗಿದೆ.

ಈ ಟಾಸ್ಕ್ ನಲ್ಲಿ ಗೆದ್ದರೆ 1000 ಪಾಯಿಂಟ್ಸ್ ನೀಡಲಾಗುತ್ತದೆ. ಒಂದು ಕಡೆ ಇಬ್ಬರು ಕೂರಬೇಕು. ಇನ್ನೊಂದು ಕಡೆ ಮನೆಯ ಸದಸ್ಯರ ಪರ್ಸನಲ್ ವಸ್ತುಗಳನ್ನು ಹಾಕಿ ತಕ್ಕಡಿ ಎರಡೂ ಕಡೆಗೆ ಸಮವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನೆಲಕ್ಕೆ ತಾಗಬಾರದು.

Etv Kannada reality show Bigg Boss

ಒಮ್ಮೆ ನೆಲಕ್ಕೆ ತಾಗಿದರೆ 200 ಪಾಯಿಂಟ್ಸ್ ಕಟ್. ಐದು ಬಾರಿ ತಾಗಿದರೆ ಸಂಪೂರ್ಣ ಪಾಯಿಂಟ್ಸ್ ಕಟ್. ಇನ್ನು ತಾಗಿಸುತ್ತಾ ಹೋದರೆ ಮೈನಸ್ ಆಗುತ್ತಾ ಹೋಗುತ್ತದೆ. ಅಂದ್ರೆ ಮುಂದಿನ ಟಾಸ್ಕ್ ನ ಪಾಯಿಂಟ್ಸ್ ನಲ್ಲೂ ಕೋತಾ ಆಗಲಿದೆ.

ಮೊದಲು ತುಲಾಭಾರ ಸೇವೆ ಲಭಿಸಿದ್ದು ಅನುಶ್ರೀ ಹಾಗೂ ಲೂಸ್ ಮಾದ ಯೋಗೀಶ್ ಅವರಿಗೆ. ಇಬ್ಬರೂ ಒಂದು ಕಡೆ ಕೂತರು. ಇನ್ನೊಂದು ಕಡೆ ಮನೆಯ ಸದಸ್ಯರ ವಸ್ತುಗಳನ್ನು ಇಡಲಾಯಿತು. ಇಬ್ಬರೂ ತುಲಾಭಾರ ಕಾಪಾಡುವಲ್ಲಿ ಯಶಸ್ವಿಯಾಗಿ ಬಿಗ್ ಬಾಸ್ ಪ್ರೀತಿಗೂ ಪಾತ್ರರಾದರು.

<ul id="pagination-digg"><li class="next"><a href="/tv/anushree-feels-naturs-call-bigg-boss-074463.html">Next »</a></li></ul>
English summary
Etv Kannada reality show Bigg Boss day 66th highlights. 'Shaktipatha' Task continues on 66th day also. This time BB gives another task to inmates, which is 'Bigg Boss Tulabhara'.
Please Wait while comments are loading...