Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಸೀಸನ್ 1ರಿಂದ 9ರವರೆಗೆ ಟ್ರೋಫಿ ಗೆದ್ದವರು ಹಾಗೂ ರನ್ನರ್ ಅಪ್ ಆದವರ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತರ ಗ್ರಾಂಡ್ ಫಿನಾಲೆ ನಿನ್ನೆಯಷ್ಟೇ ( ಡಿಸೆಂಬರ್ 31 ) ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ. ಈ ಫಿನಾಲೆಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿದ್ದ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಪೈಕಿ ಅಂತಿಮವಾಗಿ ರೂಪೇಶ್ ಶೆಟ್ಟಿ ಅವರೇ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇನ್ನು ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ಈ ಬಾರಿ ಮೊದಲಿಗೆ ಬಿಗ್ ಬಾಸ್ ಓಟಿಟಿ ಸೀಸನ್ ನಡೆಸಿ ನೂತನವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಓಟಿಟಿ ಸೀಸನ್‌ನಿಂದ ಕೆಲ ಸ್ಪರ್ಧಿಗಳನ್ನು ಒಂಬತ್ತನೇ ಸೀಸನ್ ಬಿಗ್ ಬಾಸ್‌ಗೆ ಕಳುಹಿಸಲಾಯಿತು. ಇವರ ಜತೆಗೆ ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳಲ್ಲಿ ಸ್ಫರ್ಧಿಗಳಾಗಿ ಭಾಗವಹಿಸಿದ್ದವರನ್ನು ಮನೆಯೊಳಗೆ ಕಳುಹಿಸಿ ನವೀನರು ಹಾಗೂ ಪ್ರವೀಣರ ಆಟವನ್ನು ಏರ್ಪಡಿಸಲಾಗಿತ್ತು.
ರಶ್ಮಿಕಾ
ಚಿತ್ರಕ್ಕಿಲ್ಲ
ಥಿಯೇಟರ್
ಭಾಗ್ಯ:
'ಮಿಷನ್
ಮಜ್ನು'
ಓಟಿಟಿ
ರಿಲೀಸ್
ಡೇಟ್
ಘೋಷಿಸಿದ
ಕಿರಿಕ್
ಬೆಡಗಿ
ಹೀಗೆ ಈ ಬಾರಿ ವಿಭಿನ್ನವಾದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೀಕ್ಷಕರು ಸಾಕ್ಷಿಯಾಗಿದ್ದು, ಕಾರ್ಯಕ್ರಮಕ್ಕೆ ಫಿನಾಲೆ ಮೂಲಕ ತೆರೆಬಿದ್ದಿದೆ. ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿಗಳನ್ನು ಬಹುಮಾನ ದರವಾಗಿ ಟ್ರೋಫಿ ಜತೆ ನೀಡಿದ್ದು, ಇಲ್ಲಿಯವರೆಗೆ ಯಾವ ಸೀಸನ್‌ಗಳಲ್ಲಿ ಯಾವ ಸ್ಪರ್ಧಿ ವಿನ್ನರ್ ಆಗಿದ್ದರು ಹಾಗೂ ಯಾವ ಸ್ಪರ್ಧಿ ರನ್ನರ್ ಅಪ್ ಆಗಿದ್ದರು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ..

ವಿನ್ನರ್ ಹಾಗೂ ರನ್ನರ್‌ಗಳ ಪಟ್ಟಿ
ಸೀಸಸ್ 1: ವಿಜಯ್ ರಾಘವೇಂದ್ರ ವಿನ್ನರ್, ಅರುಣ್ ಸಾಗರ್ ರನ್ನರ್ ಅಪ್
ಸೀಸಸ್ 2: ಅಕುಲ್ ಬಾಲಾಜಿ ವಿನ್ನರ್ ಹಾಗೂ ಸೃಜನ್ ಲೋಕೇಶ್ ರನ್ನರ್ ಅಪ್
ಸೀಸಸ್ 3: ಶೃತಿ ವಿನ್ನರ್ ಹಾಗೂ ಚಂದನ್ ಕುಮಾರ್ ರನ್ನರ್ ಅಪ್
ಸೀಸಸ್ 4: ಪ್ರಥಮ್ ವಿನ್ನರ್ ಹಾಗೂ ಕಿರಿಕ್ ಕೀರ್ತಿ ರನ್ನರ್ ಅಪ್
ಸೀಸಸ್ 5: ಚಂದನ್ ಶೆಟ್ಟಿ ವಿನ್ನರ್ ಹಾಗೂ ದಿವಾಕರ್ ರನ್ನರ್ ಅಪ್
ಸೀಸಸ್ 6: ಶಶಿ ಕುಮಾರ್ ವಿನ್ನರ್ ಹಾಗೂ ನವೀನ್ ಸಜ್ಜು ರನ್ನರ್ ಅಪ್
ಸೀಸಸ್ 7: ಶೈನ್ ಶೆಟ್ಟಿ ವಿನ್ನರ್ ಹಾಗೂ ಕುರಿ ಪ್ರತಾಪ್ ರನ್ನರ್ ಅಪ್
ಸೀಸಸ್ 8: ಮಂಜು ಪಾವಗಡ ವಿನ್ನರ್ ಹಾಗೂ ಅರವಿಂದ್ ಕೆಪಿ ರನ್ನರ್ ಅಪ್
ಸೀಸಸ್ 9: ರೂಪೇಶ್ ಶೆಟ್ಟಿ ವಿನ್ನರ್ ಹಾಗೂ ರಾಕೇಶ್ ಅಡಿಗ ರನ್ನರ್ ಅಪ್

ಪ್ರವೀಣರ ಮೇಲೆ ನವೀನರ ಪ್ರಾಬಲ್ಯ
ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈ ಹಿಂದಿನ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವಾರು ಅನುಭವಿ ಆಟಗಾರರು ಆಡುವ ಅವಕಾಶ ಪಡೆದುಕೊಂಡರೂ ಸಹ ಹೊಸ ಸ್ಪರ್ಧಿಗಳ ಮುಂದೆ ಅವರ ಆಟ ನಡೆಯಲಿಲ್ಲ. ನವೀನರು ಎನಿಸಿಕೊಂಡ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಈ ಬಾರಿಯ ಬಿಗ್ ಬಾಸ್‌ನ ವಿನ್ನರ್ ಹಾಗೂ ರನ್ನರ್ ಅಪ್ ಎನಿಸಿಕೊಂಡರು. ಅನುಭವಿ ಸ್ಪರ್ಧಿಗಳು ಈ ಸ್ಥಾನ ಗಿಟ್ಟಿಸಿಕೊಳ್ಳಲಾಗಲಿಲ್ಲ.

ಶೃತಿ ಬಿಗ್ ಬಾಸ್ ಗೆದ್ದ ಏಕೈಕ ಮಹಿಳಾ ಸ್ಪರ್ಧಿ
ಇನ್ನು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಟ್ರೋಫಿ ಗೆದ್ದು ವಿನ್ನರ್ ಎನಿಸಿಕೊಂಡಿರುವ ಏಕೈಕ ಸ್ಪರ್ಧಿ ಎಂದರೆ ಅದು ನಟಿ ಶೃತಿ ಮಾತ್ರ. ಬಿಗ್ ಬಾಸ್ ಮೂರನೇ ಸೀಸನ್‌ನಲ್ಲಿ ಚಂದನ್ ಕುಮಾರ್ ಜತೆ ಟಾಪ್ 2 ಪ್ರವೇಶಿಸಿದ್ದ ಶೃತಿ ಅಂತಿಮವಾಗಿ ವಿನ್ನರ್ ಆಗಿದ್ದರು. ಈ ಸೀಸನ್ ಹೊರತುಪಡಿಸಿ ಇನ್ಯಾವುದೇ ಬಿಗ್ ಬಾಸ್ ಸೀಸನ್‌ನಲ್ಲಿ ಯಾವ ಮಹಿಳಾ ಸ್ಪರ್ಧಿಯೂ ಸಹ ವಿನ್ನರ್ ಆಗಿಲ್ಲ ಹಾಗೂ ಟಾಪ್ 2ಗೂ ಸಹ ಬಂದಿಲ್ಲ.