»   » ಬಿಗ್ ಬಾಸ್ ಸೀಸನ್ 3 : ಸ್ಪೆಷಾಲಿಟಿ ಏನ್ ಗೊತ್ತಾ?

ಬಿಗ್ ಬಾಸ್ ಸೀಸನ್ 3 : ಸ್ಪೆಷಾಲಿಟಿ ಏನ್ ಗೊತ್ತಾ?

Posted By:
Subscribe to Filmibeat Kannada

15 ಸ್ಪರ್ಧಿಗಳು...55 ಕ್ಯಾಮರಾಗಳು...100 ದಿನ...1 ಮನೆ...ಹೌದು ಸ್ವಾಮಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 25 ರಿಂದ 'ಬಿಗ್ ಬಾಸ್-3' ಪ್ರಸಾರವಾಗಲಿದೆ.

'ಬಿಗ್ ಬಾಸ್-3' ಬಹುದೊಡ್ಡ ಸ್ಪೆಷಾಲಿಟಿ ಎಂದರೆ 'ಬಿಗ್ ಬಾಸ್' ಮನೆ ಕನ್ನಡದ ಮನೆಯಾಗಿರುವುದು. ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವುದು ಎಂದಿನಂತೆ ಪುಣೆ ಸಮೀಪದ ಲೋನಾವಾಲಾದಲ್ಲಲ್ಲ. ಬದಲಾಗಿ ಬೆಂಗಳೂರು ಬಳಿಯ ಬಿಡದಿಯಲ್ಲಿ. ಇದಕ್ಕಾಗಿ, 14,000 ಚದರ ಅಡಿಗಳ ಭವ್ಯ ಮನೆ ತಲೆ ಎತ್ತಿದೆ. ಇದು ಈ ಹಿಂದಿನ 'ಬಿಗ್ ಬಾಸ್' ಮನೆಗಿಂತಲೂ ವಿಶಾಲವಾದದ್ದು. [ನಿಮಗ್ಯಾರಿಗೂ ಗೊತ್ತಿಲ್ಲದ 'ಬಿಗ್ ಬಾಸ್' ಸುದೀಪ್.!]

Bigg Boss Kannada season 3 specialities

ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಹಾಗು 'ಬಿಗ್ ಬಾಸ್' ಕಾರ್ಯಕ್ರಮದ ನಿರ್ದೇಶಕರಾಗಿರುವ ಪರಮೇಶ್ವರ ಗುಂಡ್ಕಲ್ ಹೇಳುವ ಪ್ರಕಾರ, ''ಈ ಬಾರಿಯ ಬಿಗ್ ಬಾಸ್ ಕಾಂಟ್ರವರ್ಶಿಯಲ್ ಬಿಗ್ ಬಾಸ್ ಅಲ್ಲ. ಬದಲಾಗಿ ಎಮೋಷನಲ್ ಬಿಗ್ ಬಾಸ್. 15 ಬೇರೆ ಬೇರೆ ಮನಸ್ಸುಗಳು ಸೇರಿಕೊಂಡು ಬಿಟ್ಟರೆ ಬೇರೆ ಬೇರೆ ಎಮೋಷನ್ಸ್ ಸಿಗುತ್ತೆ.''

''ಅವಿಭಕ್ತ ಕುಟುಂಬವನ್ನು ನೀವು ಈ ಶೋನಲ್ಲಿ ಕಾಣಬಹುದು. 25 ವರ್ಷದ ಮಗಳೂ ಈ ಶೋನಲ್ಲಿ ಇರುತ್ತಾಳೆ. ವಯಸ್ಸಾಗಿರುವ ಅಪ್ಪನೂ ಇರುತ್ತಾನೆ. ಅಪ್ಪ-ಅಮ್ಮ, ಸೊಸೆ, ಮಗ, ಮಗಳು, ಅಡುಗೆಯವರು, ವಿದೂಷಕ ಸೇರಿದಂತೆ ಹಲವರು ಮನೆಯಲ್ಲಿ ಇರುತ್ತಾರೆ.'' ['ಬಿಗ್ ಬಾಸ್' ವೀಕೆಂಡ್ ಸ್ಪೆಷಲ್ ನಲ್ಲಿ ನೀವೂ ಭಾಗವಹಿಸಬಹುದು.!]

Bigg Boss Kannada season 3 specialities

''ಒಬ್ಬರನ್ನು ಹೊಂದುಕೊಂಡು ಇನ್ನೊಬ್ಬರು ಹೇಗೆ ನೂರು ದಿನ ಬದುಕುತ್ತಾರೆ ಅನ್ನೋದೇ ಈ ಶೋ. ಇಲ್ಲಿ ಜಗಳಕ್ಕಾಗಿ ಜಗಳ ಇರಲ್ಲ. ಹೊಡೆದಾಟಕ್ಕಾಗಿ ಹೊಡೆದಾಟ ನಡೆಯುವುದಿಲ್ಲ.''

''ಇಲ್ಲಿ ಕನ್ನಡದ ಚಾಲೆಂಜ್ ಗಳು ಇವೆ. ಹೀಗಾಗಿ ಈ ಬಾರಿ ಕನ್ನಡತನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕಕ್ಕೆ ಪ್ರಸ್ತುತವಾದ ಸವಾಲುಗಳಿವೆ.'' ಅಂತ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.

English summary
In an interaction with the media, Bigg Boss Director cum Business head of Colours Kannada Channel Parameshwar Gundkal explained the specialities of Bigg Boss Kannada season 3. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada