»   » ಯಪ್ಪಾ ಸ್ವಾಮಿ...ಬಿಗ್ ಬಾಸ್ ಗೆ ಹೋಗೋಕೆ ಏನೆಲ್ಲಾ ಮಾಡ್ತಿದ್ದಾರೆ ನೋಡಿ

ಯಪ್ಪಾ ಸ್ವಾಮಿ...ಬಿಗ್ ಬಾಸ್ ಗೆ ಹೋಗೋಕೆ ಏನೆಲ್ಲಾ ಮಾಡ್ತಿದ್ದಾರೆ ನೋಡಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋಗೆ ಈ ಬಾರಿ ಜನಸಾಮಾನ್ಯರಿಗೆ ಅವಕಾಶ ನೀಡಿರುವುದು ವಿಶೇಷ. ಈ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಲು 'ಬಿಗ್ ಬಾಸ್' ಆಕಾಂಕ್ಷಿಗಳು ಸಿಕ್ಕಾಪಟ್ಟೆ ಕಸರತ್ತು ಮಾಡ್ತಿದ್ದಾರೆ.

'ಬಿಗ್ ಬಾಸ್ ಕನ್ನಡ-5'ಗೆ ಜನಸಾಮಾನ್ಯರು ಆಯ್ಕೆ ಆಗಬೇಕಾದರೇ, ತಮ್ಮ ಪರಿಚಯ ಮಾಡಿಕೊಳ್ಳುವ ಮೂರು ರೀತಿಯ ವಿಭಿನ್ನವಾದ ವಿಡಿಯೋಗಳ ಜೊತೆ ಆನ್ ಲೈನ್ ಅರ್ಜಿ ಸಲ್ಲಿಸಬೇಕು. ಹೀಗಾಗಿ, ಸಾಮಾನ್ಯ ಜನರು ಬಗೆ ಬಗೆಯ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹರಿದುಬಿಟ್ಟಿದ್ದಾರೆ.

ಇವುಗಳಲ್ಲಿ ಕೆಲವೊಂದು ವಿಡಿಯೋಗಳು ಹಾಸ್ಯವೆನಿಸಿದರೂ, ಅವರ ಆಸಕ್ತಿ ಎದ್ದು ಕಾಣುತ್ತಿದೆ. ಇವುಗಳಲ್ಲಿ ಕೆಲವೊಂದನ್ನ ಮಾತ್ರ ಆಯ್ಕೆ ಮಾಡಿಕೊಂಡಿದ್ದೇವೆ. ಮುಂದೆ ನೋಡಿ.....

ಮಲ್ಟಿ ಟ್ಯಾಲೆಂಟ್ ಪ್ರತಿಭೆ

ಬೆಂಗಳೂರಿನ ಈ ಯುವಕನ ಹೆಸರು ಅನಿಲ್ ಗೌಡ. ತನ್ನ ಪ್ರತಿನಿತ್ಯದ ಕೆಲಸದ ಜೊತೆ ಏನೆಲ್ಲಾ ಹವ್ಯಾಸಗಳು ಇದೆ. ಪ್ರತಿಭೆ ಏನಿದೆ ಎಂಬುದನ್ನ ವಿಡಿಯೋ ಮಾಡಿದ್ದಾರೆ.

ವಿದ್ಯಾವಂತ ರೈತ

ಇಲ್ಲೊಬ್ಬ ವ್ಯಕ್ತಿ ನೋಡಿ. ಇವರ ಹೆಸರು ಶಶಿ. ಅಮ್ಮನ ಆಸೆಗೆ ಓದಿ ಕೆಲಸ ಮಾಡಿದ್ರಂತೆ. ತನ್ನಾಸೆಯಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನಂತೆ. ಇವರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

ಹುಡುಗಿಯರು ಪೈಪೋಟಿ

ಇನ್ನು ಬಿಗ್ ಬಾಸ್ ಕನ್ನಡ 5 ನಲ್ಲಿ ಭಾಗವಹಿಸಿಲು ಹುಡುಗರಂತೆ ಹುಡುಗಿಯರು ಕೂಡ ಪೈಪೋಟಿ ನಡೆಸುತ್ತಿದ್ದಾರೆ.

ಸಿನಿಮಾ ಡೈಲಾಗ್ ನಲ್ಲಿ ಮಾತು

ಈ ಯುವಕನ ಹೆಸರು ರಾಘವೇಂದ್ರ. ಇವರು ಮಾತು ಕೂಡ ಅಷ್ಟೇ ಸಿನಿಮಾ ಸ್ಟೈಲ್ ನಲ್ಲಿದೆ. ಇವರು ವಿಡಿಯೋವನ್ನ ನೀವೆ ನೋಡಿ ಹೇಗಿದೆ ಅಂತ.

ಬೇರೆಯವರಿಗಿಂತ ತಾವು ಹೇಗೆ ಭಿನ್ನ

ತಮ್ಮ ತಮ್ಮ ಬಗ್ಗೆ ಹೇಳಿಕೊಳ್ಳುವ ಈ ಯುವಕರು, ತಾವು ಬೇರೆಯವರಿಗಿಂತ ಎಷ್ಟು ವಿಭಿನ್ನವೆಂದು ಕೂಡ ವಿಡಿಯೋ ಮೂಲಕ ತೋರಿಸುತ್ತಿದ್ದಾರೆ.

ವಿಡಿಯೋ ನೋಡಿ

ಏನ್ ಟ್ಯಾಲೆಂಟ್ ಗುರು

ತಾವು ಯಾವುದರಲ್ಲಿ ಶಕ್ತಿವಂತರು, ತಾವು ಯಾವುದರಲ್ಲಿ ಬುದ್ದಿವಂತರು ಎಂದುವಿಡಿಯೋಗಳ ಮೂಲಕ ಬಿಗ್ ಬಾಸ್ ಗೆ ಮನವಿ ಸಲ್ಲಿಸುತ್ತಿದ್ದಾರೆ.

ವಿಡಿಯೋ ನೋಡಿ

ಸಿನಿಮಾ ಕಲಾವಿದರು

'ಬಿಗ್ ಬಾಸ್' ಗೆ ಅವಕಾಶ ಕೋರಿ ಶರತ್ ಕುಮಾರ್ ಎಂಬುವರು ಅನೇಕ ಬಾರಿ ಕಲರ್ಸ್ ಕನ್ನಡ ವಾಹಿನಿಯ ಮುಂದೆ ಹೋಗಿ ಕಾದಿದ್ದಾರಂತೆ. ದರ್ಶನ್, ಸುದೀಪ್, ಪುನೀತ್ ಅವರ ಚಿತ್ರಗಳಲ್ಲಿ ನಟಿಸಿದ್ದಾರಂತೆ. ಈಗೊಂದು ಅವಕಾಶ ಸಿಕ್ಕಿರುವುದರಿಂದ ತಮ್ಮದೇ ಆದ ಸ್ಟೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

ವಿಡಿಯೋ ನೋಡಿ

English summary
Collection of Videos, Who Gives Auditions For Bigg Boss Kannada Season 5.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada