For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ನಿಂದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾಗೆ ಸಿಕ್ಕ ಸಂಭಾವನೆ ಮಾಹಿತಿ ಇಲ್ಲಿದೆ

  |

  ಕೊರೊನಾ ವೈರಸ್ ಮೂರನೇ ಅಲೆಯ ಭೀತಿಯಲ್ಲೂ ಬಿಗ್ ಬಾಸ್ ಒಟಿಟಿಗೆ ಚಾಲನೆ ಸಿಕ್ಕಿದೆ. ಮತ್ತೆ ಕೋವಿಡ್ ಬಂದ್ರೆ ನೋಡೋಣ ಎಂದು ಧೈರ್ಯದಿಂದ ಹಿಂದಿಯ ಖ್ಯಾತ ರಿಯಾಲಿಟಿ ಶೋ ಆರಂಭಿಸಲಾಗಿದೆ. ಈ ಬಾರಿಯ ವಿಶೇಷ ಅಂದ್ರೆ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವುದು. ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮುಂಚೆಯೇ ಒಟಿಟಿಯಲ್ಲಿ ಬಿಗ್ ಬಾಸ್ ಟೆಲಿಕಾಸ್ಟ್ ಆಗುತ್ತಿದೆ.

  ಆಗಸ್ಟ್ 15ಕ್ಕೆ ಬಿಗ್ ಬಾಸ್ ಒಟಿಟಿ ಆರಂಭವಾಗಿ ಒಂದು ವಾರ ಪೂರೈಸಲಿದೆ. ಮೊದಲ ವಾರದಲ್ಲಿಯೇ ಬಿಗ್ ಬಾಸ್ ಸ್ಪರ್ಧಿಗಳು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕಾರ್ಯಕ್ರಮದೊಳಗಿನ ಗಾಸಿಪ್, ವಿವಾದ, ವೈಯಕ್ತಿಕ ವಿಚಾರಗಳನ್ನು ಹೊರತುಪಡಿಸಿ ಸ್ಪರ್ಧಿಗಳು ಸಂಭಾವನೆ ಎಷ್ಟಿರಬಹುದು ಎಂದು ತಿಳಿದು ಕೊಳ್ಳುವ ಕುತೂಹಲ ಪ್ರೇಕ್ಷಕರಿಗೆ ಕಾಡುತ್ತದೆ.

  'ಬಿಗ್ ಬಾಸ್'ಗೆ ಶುರುವಾಯ್ತು ಕೊರೊನಾ 3ನೇ ಅಲೆಯ ಭಯ'ಬಿಗ್ ಬಾಸ್'ಗೆ ಶುರುವಾಯ್ತು ಕೊರೊನಾ 3ನೇ ಅಲೆಯ ಭಯ

  ಈ ಬಾರಿಯ ಬಿಗ್ ಬಾಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿ ಭಾಗಿಯಾಗಿರುವುದು ಎಲ್ಲರನ್ನು ಬೆರಗುಗೊಳಿಸಿದೆ. ಅಕ್ಕನ ಪತಿ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಕಡೆ ಶಮಿತಾ ಶೆಟ್ಟಿ ನೋಡಿದ್ರೆ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಇನ್ನು ಸಂಭಾವನೆ ವಿಚಾರದಲ್ಲೂ ಶಮಿತಾ ಶೆಟ್ಟಿಗೆ ಅತಿ ಹೆಚ್ಚು ವೇತನ ಸಿಗುತ್ತಿರಬಹುದು ಎಂಬ ಮಾತಿದೆ. ಆದರೆ, ಸದ್ಯ ಬಹಿರಂಗವಾಗಿರುವ ಮಾಹಿತಿಯಲ್ಲಿ ಶಮಿತಾ ಶೆಟ್ಟಿ ಹೆಚ್ಚು ಸಂಭಾವನೆ ಪಡೆಯುತ್ತಿಲ್ಲ.

  'ಜಾಗ್ರನ್' ವೆಬ್‌ಸೈಟ್ ವರದಿಯ ಪ್ರಕಾರ, ರಿಧಿಮಾ ಪಂಡಿತ್ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಕಡಿಮೆ ಸಂಬಳ ಪಡೆಯುತ್ತಿರುವ ಸ್ಪರ್ದಿ ಯಾರೆಂದು ತಿಳಿದರೆ ನಿಮಗೆ ಖಂಡಿತಾ ಆಶ್ಚರ್ಯವಾಗುತ್ತದೆ. ಬಿಗ್ ಬಾಸ್ ಒಟಿಟಿಯಲ್ಲಿ ಪ್ರತಿ ವಾರ ಸ್ಪರ್ಧಿಗಳ ಸಂಬಳದ ಮಾಹಿತಿ ಇಲ್ಲಿದೆ. ಮುಂದೆ ಓದಿ...

  ಕರಣ್ ಚೋಹರ್ ಹಾಟ್ ಒಟಿಟಿ 'ಬಿಗ್ ಬಾಸ್'ನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ?ಕರಣ್ ಚೋಹರ್ ಹಾಟ್ ಒಟಿಟಿ 'ಬಿಗ್ ಬಾಸ್'ನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ?

  ಟಾಪ್ ಸಂಭಾವನೆ ಪಡೆಯುವ ಸ್ಪರ್ಧಿ

  ಟಾಪ್ ಸಂಭಾವನೆ ಪಡೆಯುವ ಸ್ಪರ್ಧಿ

  ಕನ್ನಡದ ರೋಬೋ ಸೊಸೆ ಖ್ಯಾತಿಯ, 'ಬಹು ಹುಮರಿ ರಜನಿ-ಕಾಂತ್' ಶೋ ಮೂಲಕ ಮನೆ ಮಾತಾಗಿರುವ ನಟಿ ರಿಧಿಮಾ ಪಂಡಿತ್ ಪ್ರತಿವಾರಕ್ಕೆ 5 ಲಕ್ಷ ಸಂಭಾವನೆ ಚಾರ್ಜ್ ಮಾಡ್ತಿದ್ದಾರೆ ಎಂದು ವರದಿಯಾಗಿದೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ವೇತನಕ್ಕೆ ಒಪ್ಪಂದ ಹಾಕಿರುವ ನಟಿ ರಿಧಿಮಾ. ಎರಡನೇ ಸ್ಥಾನದಲ್ಲಿ ನಟಿ ಶಮಿತಾ ಶೆಟ್ಟಿ ಇದ್ದಾರೆ. ಶಿಲ್ಪಾ ಶೆಟ್ಟಿ ಸಹೋದರಿ ಪ್ರತಿವಾರಕ್ಕೆ 3.75 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

  ಉರ್ಫಿ ಜಾವೇದ್ ಸಂಭಾವನೆ ಎಷ್ಟಿದೆ?

  ಉರ್ಫಿ ಜಾವೇದ್ ಸಂಭಾವನೆ ಎಷ್ಟಿದೆ?

  ಸಾಮಾಜಿಕ ಜಾಲತಾಣದ ಸೆನ್ಸೇಷನ್ ಹಾಗೂ 'ಕಸೌಟಿ ಜಿಂದಗಿ ಕೇ 2' ಮತ್ತು 'ಪಂಚ್ ಬೀಟ್ 2'ನಲ್ಲಿ ಕೆಲಸ ಮಾಡಿರುವ ಉರ್ಫಿ ಜಾವೇದ್ ವಾರಕ್ಕೆ ರೂ 2.75 ಲಕ್ಷ ಪಡೆಯುತ್ತಿದ್ದಾರೆ. ಇನ್ನು ಉರ್ಫಿ ಜಾವೇದ್ ಮಾಜಿ ಗೆಳೆಯ ಜೀಶನ್ ಖಾನ್ ವಾರಕ್ಕೆ 2.5 ಲಕ್ಷ ರೂ ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೀಶನ್ ಖಾನ್ 'ಕುಂಕುಮ್ ಭಾಗ್ಯ' ಧಾರಾವಾಹಿಯಲ್ಲಿ ನಟಿಸಿದ್ದರು.

  ದಿವ್ಯಾ ಅಗರ್ವಾಲ್ & ನೇಹಾ ಭಾಸಿನ್

  ದಿವ್ಯಾ ಅಗರ್ವಾಲ್ & ನೇಹಾ ಭಾಸಿನ್

  'ರಾಗಿಣಿ ಎಂಎಂಎಸ್ ರಿಟರ್ನ್ಸ್-2' ಖ್ಯಾತಿಯ ನಟಿ ದಿವ್ಯಾ ಅಗರ್ವಾಲ್ ಅದಾಗಲೇ ಬಿಗ್ ಬಾಸ್ ಮನೆಯಲ್ಲಿ ಇತರೆ ಸದಸ್ಯರೊಂದಿಗೆ ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರತೀಕ್ ಸೆಹಜಪಾಲ್ ಜೊತೆ ದಿವ್ಯಾ ಅಗರ್ವಾಲ್ ಸ್ನೇಹವೇ ಕೂಡಿ ಬರ್ತಿಲ್ಲ. ಇನ್ನು 'ಚಾಶ್ನಿ', 'ಜಗ್ ಘೂಮೇಯಾ' ಹಾಡುಗಳಿಂದ ಗುರುತಿಸಿಕೊಂಡಿರುವ ಜನಪ್ರಿಯ ಗಾಯಕಿ ನೇಹಾ ಭಾಸಿನ್ ಸಹ ಶೋನಲ್ಲಿ ಗಮನ ಸೆಳೆಯುತ್ತಿದ್ದಾರೆ. ಇವರಿಬ್ಬರು ವಾರಕ್ಕೆ ತಲಾ 2 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.

  ಅಕ್ಷರ ಸಿಂಗ್ & ಮಿಲ್ಲಿಂಡ್

  ಅಕ್ಷರ ಸಿಂಗ್ & ಮಿಲ್ಲಿಂಡ್

  ಭೋಜ್‌ಪುರಿ ಸೆನ್ಸೇಷನ್ ಅಕ್ಷರ ಸಿಂಗ್ ಮತ್ತು ಜನಪ್ರಿಯ ಪಂಜಾಬಿ ಗಾಯಕ ಮಿಲ್ಲಿಂಡ್ ಗಬಾ ವಾರಕ್ಕೆ 1.75 ಲಕ್ಷ ರೂ ವೇತನ ಪಡೆಯಲಿದ್ದಾರೆ. ಮೂಸ್ ಜತ್ನಾ ಅಕ್ ಮಸ್ಕನ್ ಮತ್ತು 'ಯೇ ದಿಲ್ ಆಶಿಕಾ'ನ ನಟ ಕರಣ್ ನಾಥ್ ವಾರಕ್ಕೆ 1.5 ಲಕ್ಷ ಪಡೆಯುತ್ತಿದ್ದಾರೆ. ಜನಪ್ರಿಯ ನೃತ್ಯ ಸಂಯೋಜಕ ನಿಶಾಂತ್ ಭಟ್ ಮತ್ತು ಪ್ರಸಿದ್ಧ ನಟ ರಾಕೇಶ್ ಬಾಪಟ್ ವಾರಕ್ಕೆ 1.2 ಲಕ್ಷ ಪಡೆಯುತ್ತಿದ್ದಾರೆ. ಈ ಸೀಸನ್‌ನಲ್ಲಿರುವ ವಿವಾದಾತ್ಮಕ ಸ್ಪರ್ಧಿ, ಪ್ರತೀಕ್ ಸೆಹಾಜ್ಪಾಲ್ ವಾರಕ್ಕೆ 1 ಲಕ್ಷ ರೂ ಪಡೆಯುವ ಮೂಲಕ ಕಡಿಮೆ ಸಂಭಾವನೆ ಹೊಂದಿದ್ದಾರೆ.

  English summary
  Bigg Boss OTT contestants salary; Check complete list here. not shamita shetty getting highest fee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X