For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ಮೊದಲ ದಿನವೇ ಕಿಸ್ಸಿಂಗ್, ಫೈಟಿಂಗ್

  By ಜೇಮ್ಸ್ ಮಾರ್ಟಿನ್
  |

  ಭಾರಿ ಕುತೂಹಲ ಕೆರಳಿಸಿದ್ದ ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಕಂತು ತನ್ನ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

  ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೆಲ್ ಕೀಚ್, ಸಂಗ್ರಾಮ್ ಸಿಂಗ್, ಅರ್ಮಾನ್, ಅಪೂರ್ವ ಅಗ್ನಿಹೋತ್ರಿ, ಶಿಲ್ಪಾ ಅಗ್ನಿ ಹೋತ್ರಿ, ಎಲ್ಲಿ ಅವ್ರಾಮ್, ವಿಜೆ ಆಂಡಿ, ಪ್ರತ್ಯೂಷಾ ಬ್ಯಾನರ್ಜಿ, ರಾಜತ್ ರವೈಲ್, ಅನಿತಾ ಅದವ್, ತನಿಶಾ, ಕುಶಾಲ್ ತಂಡನ್, ರತನ್ ರಜಪುತ್ ಒಬ್ಬರಿಗಿಂತ ಒಬ್ಬರು ತಮ್ಮ ಇರುವಿಕೆಯ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ.

  ಸ್ವರ್ಗ, ನರಕಗಳಲ್ಲಿನ ಸ್ಪರ್ಧಿಗಳ ಪೈಕಿ ನಿರೀಕ್ಷೆಯಂತೆ ಮೊದಲ ದಿನವೇ ನರಕವಾಸಿಗಳ ಸದ್ದು ಗದ್ದಲ ಹೆಚ್ಚಾಗಿದೆ. ವೋಟ್ ಔಟ್ ನಲ್ಲೂ ನರಕವಾಸಿಗಳಿಗೆ ಹೆಚ್ಚಿನ ಮತಗಳು ಬಿದ್ದಿವೆ.

  ನರಕದಲ್ಲಿ: ಭಾರತೀಯ ಶೈಲಿ ಪಾಯಿಖಾನೆ ನೋಡಿ ಹಜೇಲ್ ಶಾಕ್ ಆಗಿದ್ದು, ಬಾಲಿಕಾ ವಧು ಖ್ಯಾತಿಯ ಪ್ರತ್ಯೂಷಾ ಹಾರಾಟ, ನಲ್ಲಿ ಇದ್ದರೂ ನೀರಿಲ್ಲ, ನೀರು ಬಂದರೂ ಒಂಚೂರು ಬಿಸಿ ಇಲ್ಲ ಸ್ನಾನ ಮಾಡದೇ ವಿಧಿ ಇಲ್ಲ.

  ಸ್ವರ್ಗದಲ್ಲಿ : ಪತಿ ಅಪೂರ್ವ ನರಕದಲ್ಲಿ ಪತ್ನಿ ಶಿಲ್ಪ ಸ್ವರ್ಗದಲ್ಲಿ ಇರುವುದು ಯಾಕೋ ಸರಿ ಕಾಣುತ್ತಿಲ್ಲ ಬಿಗ್ ಬಾಸ್ ಎಂದು ತನೀಶಾ ಗೋಳಾಡಿದ್ದು ವಿಶೇಷ. ಮೊದಲ ದಿನವೇ ವಾರ್ಡನ್ ವಾಯ್ಸ್ ಎಲ್ಲರನ್ನು ಎಬ್ಬಿಸಿದ್ದು, ಶಿಲ್ಪಾ, ಗೌಹಾರ್ , ಅನಿತಾಗೆ ಅಡುಗೆ ಮನೆ ಡ್ಯೂಟಿ ಸಿಕ್ಕಿದ್ದು ಇನ್ನಷ್ಟು ವಿವರ ಮುಂದೆ ನೋಡಿ...

  ಎಂಟ್ರಿ ನಂತರ

  ಎಂಟ್ರಿ ನಂತರ

  ವಿಶೇಷವೆಂದರೆ ಬಿಗ್ ಬಾಸ್ ನ ಮನೆ ಹೊಕ್ಕ ನಂತರ ಸ್ವರ್ಗ ಅಥವಾ ನರಕವಾಸಿಗಳು ಮೊದಲು ಮಲಗುವ ವ್ಯವಸ್ಥೆ ಹೇಗಿದೆ ಎಂದು ಹುಡುಕಿದರು. ಗಂಟೆಗಟ್ಟಲೆ ನಿದ್ದೆಗೇ ಬಿಗ್ ಬಾಸ್ ನಲ್ಲಿ ಬ್ರೇಕ್ Cool

  ಮೊದಲ ಚುಂಬನ

  ಮೊದಲ ಚುಂಬನ

  ಒಡೆದ ಮನಸ್ಸನ್ನು ಒಂದು ಮಾಡುವ ವೇದಿಕೆ ಎನ್ನಲಾಗುವ ಬಿಗ್ ಬಾಸ್ ನಲ್ಲಿ ಪತಿ ಅಪೂರ್ವ ಅಗ್ನಿಹೋತ್ರಿ ನರಕವಾಸಿಯಾಗಿದ್ದರೆ, ಪತ್ನಿ ಶಿಲ್ಪಾ ಅಗ್ನಿಹೋತ್ರಿ ಸ್ವರ್ಗವಾಸಿಯಾಗಿದ್ದಾರೆ. ಪರಸ್ಪರ ಮುದ್ದು ಮಾಡಲು ಅರ್ಮಾನ ಸಹಾಯಕರಾಗಿದ್ದಾರೆ. ಲವ್ ಬರ್ಡ್ಸ್ ಮುತ್ತಿಟ್ಟಿದ್ದು ಸೆರೆ ಸಿಕ್ಕಿದ್ದು ಹೀಗೆ

  ಆರೋಗ್ಯ ಸಮಸ್ಯೆ

  ಆರೋಗ್ಯ ಸಮಸ್ಯೆ

  ರಜತ್ ಹಾಗೂ ಗೌಹರ್ ಹೋಲಿಕೆ ಮಾಡಿದ ವಿಜೆ ಆಂಡಿ ಆರೋಗ್ಯ ಕಾಪಾಡಿಕೊಳ್ಳಿ ತೂಕ ಇಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

  ನರಕದ ಡೈನಿಂಗ್ ಟೇಬಲ್

  ನರಕದ ಡೈನಿಂಗ್ ಟೇಬಲ್

  ನರಕಕ್ಕೆ ಊಟ, ತಿಂಡಿ ಎಲ್ಲವೂ ಸ್ವರ್ಗದಿಂದಲೇ ಪೂರೈಕೆಯಾಗುತ್ತಿದೆ. ಆದರೆ, ತಟ್ಟೆ, ಲೋಟ, ಶುಚಿತ್ವದ ಬಗ್ಗೆ ಮಾತನಾಡುವಂತಿಲ್ಲ.

  ನರಕದಲ್ಲಿ

  ನರಕದಲ್ಲಿ

  ನರಕವಾಸಿಗಳು ಕಂಬಿ ದಾಟಿ/ಮುರಿದು ಸ್ವರ್ಗದ ಕಡೆಗೆ ಯಾವ ಕಾರಣಕ್ಕೂ ಬರುವಂತಿಲ್ಲ.

  ಕುಶಾಲ್ ತಂಡನ್

  ಕುಶಾಲ್ ತಂಡನ್

  ನಾಮಿನೇಷನ್ ಆದಮೇಲೆ ತನಿಶಾ ಹಾಗೂ ಕುಶಾಲ್ ನಡುವೆ ಭಾರಿ ಚರ್ಚೆ ನಡೆಯಿತು. ನಾನು ಮದ್ಯವ್ಯಸನಿ ದುಡಿಯುತ್ತೇನೆ ಕುಡಿಯುತ್ತೇನೆ ಯಾರಿಗೂ ತೊಂದರೆ ಮಾಡಿಲ್ಲ ಎಂದು ಕುಶಾಲ್ ಹೇಳುತ್ತಾನೆ.

  ತನಿಶಾ ನಾನು ಯಾರಿಗೂ ನಿಮಗೆ ಇಷ್ಟವಾದ ಚಟ ಬಿಟ್ಟುಬಿಡಿ ಎಂದು ಹೇಳಲಾರೆ ಆದರೆ, ಅದು ನಿಮ್ಮನ್ನು ನುಂಗುವ ಮುನ್ನ ಕಡಿಮೆ ಮಾಡಿಕೊಳ್ಳಿ, ಎನ್ನ್ನುತ್ತೇನೆ ಎಂದಳು

  ಪ್ರತ್ಯೂಷಾ ಫೈಟ್

  ಪ್ರತ್ಯೂಷಾ ಫೈಟ್

  ಬಿಗ್ ಬಾಸ್ ಅಣತಿಯಂತೆ ವಿಜೆ ಆಂಡಿ ಹಾಗೂ ಶಿಲ್ಪಾ ರಿಯಾಲಿಟಿ ಟಾಕ್ ಶೋ ನಡೆಸಿದರು. ಇದರಲ್ಲಿ ಮಾತನಾಡಲು ನಾಮಿನೇಟ್ ಆದವರಿಗೆ ಮಾತ್ರ ಅವಕಾಶ ಇತ್ತು.

  ತನ್ನ ಜನಪ್ರಿಯತೆ ಬಗ್ಗೆ ಪ್ರತ್ಯೂಷಾ ಹೇಳುವಾಗ ಗೌಹರ್ ಗೆ ನಗು ಉಕ್ಕಿತ್ತು ಇದು ಇವರಿಬ್ಬರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ನಂತರ ಶಾಂತಿ ಮಾತುಕತೆಗೆ ಗೌಹರ್ ಮುಂದಾದರೂ ಪ್ರಯೋಜನವಾಗಲಿಲ್ಲ.

  ಹಜೇಲ್ ಹಾಗೂ ಆಂಡಿ

  ಹಜೇಲ್ ಹಾಗೂ ಆಂಡಿ

  ಸ್ವರ್ಗ -ನರಕದ ನಡುವೆ ಕಥಕ್ ನೃತ್ಯ ಸ್ಪರ್ಧೆ ಹಜೇಲ್ ಹಾಗೂ ವಿಜೆ ಆಂಡಿ ಇಬ್ಬರು ಹಳೆ ಹಿಂದಿ ಹಾಡಿಗೆ ಕಥಕ್ ನೃತ್ಯ ಪ್ರದರ್ಶಿಸಿದರು ಎರಡೂ ಕಡೆಯವರು ಚಪ್ಪಾಳೆ ತಟ್ಟಿ ಆನಂದ ಪಟ್ಟರು.

  ತನೀಶಾಗೆ ಕೋಪ

  ತನೀಶಾಗೆ ಕೋಪ

  ನಾಮಿನೇಷನ್ ಸಂದರ್ಭದಲ್ಲಿ ತನೀಶಾ ಕೊಂಚ ಕೋಪ ಗೊಂಡಿದಳು. ನರಕವಾಸಿಗಳಲ್ಲಿ ಇಬ್ಬಿಬ್ಬರನ್ನು ನಾಮಿನೇಟ್ ಮಾಡುವುದು ಹೇಗೆ ಎಂಬುದು ತನಿಶಾಗೆ ಗೊಂದಲವಾಗಿತ್ತು.

  ಕಾಯಕವೇ ಕೈಲಾಸ

  ಕಾಯಕವೇ ಕೈಲಾಸ

  ನರಕವಾಸಿಗಳಾದ ಪ್ರತ್ಯೂಷಾ, ಕುಶಾಲ್ ಅವರು ಕಸ ಗುಡಿಸುವುದು ಕ್ಲೀನಿಂಗ್ ಕೆಲಸ ಮಾಡಿದರೆ, ಅಪೂರ್ವ ಟಾಯ್ಲೆಟ್ ಕ್ಲೀನ್ ಮಾಡಿದ. ಫಾರಿನ್ ಲೇಡಿ ಎಲ್ಲಿ ನೀರು ಹಿಡಿಯುವಲ್ಲಿ ನಿರತಳಾಗಿದ್ದಳು

  ನರಕದಲ್ಲಿ

  ನರಕದಲ್ಲಿ

  ನರಕದಲ್ಲಿ ಕೆಲಸವೋ ಕೆಲಸ ಅಲ್ಲಲ್ಲಿ ಸೋರುವ ನೀರು, ಸದಾ ಕ್ಲೀನಿಂಗ್ , ಸಮಯಕ್ಕೆ ಸರಿಯಾಗಿ ನೀರು ತುಂಬಿಸಬೇಕು. ಊಟಕ್ಕಾಗಿ ಕಾಯಬೇಕು. ಮಲಗುವ ಕೋಣೆ ಕೂಡಾ ಸ್ವಚ್ಛಗೊಳಿಸಬೇಕು. ನೆಲದ ಮೇಲೆ ಹಾಸಿಗೆ ಹಾಸಿ ಮಲಗಬೇಕು

  ಅನಿತಾ ಅಡ್ವಾಣಿ

  ಅನಿತಾ ಅಡ್ವಾಣಿ

  ಸದಾ ಕಾಲ ನೋವು ಹತಾಶೆ ನುಂಗಿ ಬದುಕಿದ ಅನಿತಾ ಅವರು ನಾಮಿನೇಷನ್ ಸಂದರ್ಭದಲ್ಲಿ ಕಣ್ಣೀರಿಟ್ಟರು. ನಂತರ ಸಂಗ್ರಾಮ್ ಸಿಂಗ್ ಜತೆ ದುಃಖ ತೋಡಿಕೊಂಡರು. ವಿಜೆ ಆಂಡಿ ಬಂದು ಇಬ್ಬರಿಗೂ ಸಮಾಧಾನ ಹೇಳಬೇಕಾಯಿತು.

  English summary
  Bigg Boss Saath 7: The journey of Bigg Boss has started and this time it's Jannat VS Jahannum. After the housemates entered the house, they took time to explore the house and were surprised at the new elements that made them go WOW and AAW at the same time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X