»   » 'ಬಿಗ್ ಬಾಸ್' ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಅನ್ನೋಕೆ ಸಾಕ್ಷಿ ಇಲ್ಲಿದೆ

'ಬಿಗ್ ಬಾಸ್' ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಅನ್ನೋಕೆ ಸಾಕ್ಷಿ ಇಲ್ಲಿದೆ

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-4' ಮುಗಿದು ಒಂದು ತಿಂಗಳ ಮೇಲಾಗಿದೆ. ಆದ್ರೆ, ಈಗಲೂ ಜನರಲ್ಲಿ 'ಬಿಗ್ ಬಾಸ್' ಕ್ರೇಜ್ ಕಮ್ಮಿ ಆಗಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಅಂದ್ರೆ, ಇತ್ತೀಚೆಗಷ್ಟೇ 'ಅರಮನೆ ನಗರಿ' ಮೈಸೂರಿನಲ್ಲಿ ನಡೆದ 'ಬಿಗ್ ಬಾಸ್ ಸಂತೆ'.

ಹೇಳಿ ಕೇಳಿ... 'ಬಿಗ್ ಬಾಸ್' ಸಂತೆಯಿಂದ ದೂರವಿದ್ದ ರಿಯಾಲಿಟಿ ಶೋ. ದೈನಂದಿನ ಬದುಕಿನ ಜಂಜಾಟಗಳಿಂದ ದೂರ ಉಳಿದು ಸ್ಪರ್ಧಿಗಳು ತಮ್ಮನ್ನ ತಾವು ಕಂಡುಕೊಳ್ಳುವ ಕಾರ್ಯಕ್ರಮ 'ಬಿಗ್ ಬಾಸ್'.['ಬಿಗ್ ಬಾಸ್' ಪ್ರಥಮ್ ಬಗ್ಗೆ ಬಂತು ಬಿಗ್ ಬ್ರೇಕಿಂಗ್ ನ್ಯೂಸ್.!]

ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಒಂದೇ ಮನೆಯೊಳಗೆ ನೂರಕ್ಕೂ ಹೆಚ್ಚು ದಿನವಿದ್ದ ಸ್ಪರ್ಧಿಗಳನ್ನ ಮತ್ತೆ ಜನಜಂಗುಳಿಗೆ ಕರೆತರುವ ಪ್ರಯತ್ನವೇ 'ಬಿಗ್ ಬಾಸ್ ಸಂತೆ'.

ಬನ್ನಿಮಂಟಪದಲ್ಲಿ ನಡೆದ 'ಬಿಗ್ ಬಾಸ್' ಸಂತೆ

ಮೈಸೂರಿನ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 'ಬಿಗ್ ಬಾಸ್ ಸಂತೆ' ನಡೆಯಿತು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರೊಂದಿಗೆ ಮಾತುಕತೆ, ಹರಟೆ, ಡ್ಯಾನ್ಸ್ ಮುಂತಾದ ಚಟುವಟಿಕೆಗಳಿಂದ 'ಬಿಗ್ ಬಾಸ್ ಸಂತೆ' ಜರುಗಿತು. ಇಷ್ಟೆಲ್ಲ ಸಾಧ್ಯವಾಗಿದ್ದು 'ಬಿಗ್ ಬಾಸ್' ಕುರಿತು ಇದ್ದ ಕ್ರೇಜ್ ನಿಂದಲೇ.['ಬಿಗ್ ಬಾಸ್' ಗೆದ್ದ ಮೇಲೆ ಪ್ರಥಮ್ ಗೆ ಸಿಗುತ್ತಿರುವ ಗೌರವ ಇದು.!]

ಯಾರ್ಯಾರೆಲ್ಲಾ ಭಾಗವಹಿಸಿದ್ದರು.?

ಮೈಸೂರಿನಲ್ಲಿ ನಡೆದ 'ಬಿಗ್ ಬಾಸ್ ಸಂತೆ'ಯಲ್ಲಿ ಪ್ರಥಮ್, ರೇಖಾ, ಓಂ ಪ್ರಕಾಶ್ ರಾವ್, ನಿರಂಜನ್ ದೇಶಪಾಂಡೆ, ಶೀತಲ್ ಶೆಟ್ಟಿ, ಮೋಹನ್, ಕಾರುಣ್ಯ ರಾಮ್, ಭುವನ್, ಸಂಜನಾ, ದೊಡ್ಡ ಗಣೇಶ್, ವಾಣಿಶ್ರೀ, ಚೈತ್ರ, ಶಾಲಿನಿ ಮತ್ತು ಮಸ್ತಾನ್ ಭಾಗವಹಿಸಿದ್ದರು.['ಬಿಗ್ ಬಾಸ್' ಫಿನಾಲೆ ದಿನ ಎದುರಾದ ಸವಾಲು ಏನು ಗೊತ್ತಾ?]

'ಬಿಗ್ ಬಾಸ್ ಸಂತೆ' ವೇದಿಕೆ ಮೇಲೆ ಅಕುಲ್ ಬಾಲಾಜಿ

'ಬಿಗ್ ಬಾಸ್ ಸಂತೆ' ಕಾರ್ಯಕ್ರಮವನ್ನ ಅಕುಲ್ ಬಾಲಾಜಿ ಲವಲವಿಕೆಯಿಂದ ನಿರೂಪಣೆ ಮಾಡಿರುವುದು ಮತ್ತೊಂದು ವಿಶೇಷ.

ಪ್ರಥಮ್ ಡ್ಯಾನ್ಸ್ ನೋಡಿ...

'ಬಿಗ್ ಬಾಸ್ ಸಂತೆ'ಯಲ್ಲಿ ಲಾರ್ಡ್ ಪ್ರಥಮ್ ಸರ್ ಕುಣಿದು ಕುಪ್ಪಳಿಸಿರುವ ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ ನೋಡಿ....

ಪ್ರೋಮೋ ನೋಡಿದ್ರಾ.?

'ಬಿಗ್ ಬಾಸ್ ಸಂತೆ'ಯ ಪ್ರೋಮೋ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಪ್ರಸಾರ ಯಾವಾಗ.?

'ಬಿಗ್ ಬಾಸ್' ಸಂತೆಯ ರೋಮಾಂಚನ ಕ್ಷಣಗಳನ್ನು ನೋಡಲು ಮಾರ್ಚ್ 5 ರಂದು ಸಂಜೆ 4 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಯನ್ನು ಟ್ಯೂನ್ ಮಾಡಿ...

English summary
'Bigg Boss Santhe' will be aired on March 5th at 4 pm in Colors Kannada and Colors Super Channel. Don't miss

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada