For Quick Alerts
  ALLOW NOTIFICATIONS  
  For Daily Alerts

  ಮನರಂಜನೆಯ ಮಹಾಪೂರಕ್ಕೆ 'ಬಿಗ್ ಬಾಸ್' ರೆಡಿ

  By Rajendra
  |

  ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಕಾತುರ, ಕುತೂಹಲಕ್ಕೆ ತೆರೆಬೀಳುವ ಸಮಯ ಬಂದೇ ಬಿಟ್ಟಿದೆ. ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ಸುವರ್ಣ ವಾಹಿನಿ 'ಬಿಗ್ ಬಾಸ್' ಕಾರ್ಯಕ್ರಮ ಆರಂಭದ ಕುರಿತು ಅಧಿಕೃತವಾಗಿ ಘೋಷಿಸಿದೆ.

  ಈ ಜನಪ್ರಿಯ ಕಾರ್ಯಕ್ರಮ ಇದೇ ಜೂನ್ 29 ,2014 ರ ಭಾನುವಾರದಿಂದ ಪ್ರಾರಂಭವಾಗಲಿದ್ದು 14 ಮಂದಿ ಸ್ಪರ್ಧಿಗಳೊಂದಿಗಿನ ಈ ಆವೃತ್ತಿಯು ಮತ್ತಷ್ಟು ರೋಮಾಂಚನಕಾರಿಯಾಗಲಿದೆ. ಕಾರ್ಯಕ್ರಮದ ಸಾರಥಿ, ಸೂಪರ್ ಸ್ಟಾರ್, ಕಿಚ್ಚ ಸುದೀಪ್, ಸುವರ್ಣವಾಹಿನಿಯ ಮುಖ್ಯಸ್ಥರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ['ಬಿಗ್ ಬಾಸ್ 2' ಫಸ್ಟ್ ಲುಕ್ ಔಟ್, ಸುದೀಪ್ ರಾಕ್ಸ್]

  ಬಿಗ್ ಬಾಸ್ ಕಾರ್ಯಕ್ರಮದ ಈ ಹೊಸ ಆವೃತ್ತಿಯ ಸ್ಪರ್ಧಿಗಳಾಗಿ ಭಾಗವಹಿಸುವವರ ಕುರಿತು ಯಾವುದೇ ಸುಳಿವನ್ನು ಇಲ್ಲಿಯವರೆಗೂ ನೀಡಲಾಗಿಲ್ಲ. ಇಂದಿನ ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರು ನಾನಾ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದರು ಸ್ಪರ್ಧಿಗಳ ಬಗ್ಗೆ ಕಿಂಚಿತ್ತೂ ಸುಳಿವು ಬಿಟ್ಟುಕೊಡಲಿಲ್ಲ.

  ಈ ಬಾರಿಯೂ ರು.50 ಲಕ್ಷ ನಗದು ಬಹುಮಾನ

  ಈ ಬಾರಿಯೂ ರು.50 ಲಕ್ಷ ನಗದು ಬಹುಮಾನ

  ಎಂಡಮಾಲ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಬೃಹತ್ ರಿಯಾಲಿಟಿ ಶೋನ ಹೊಸ ಆವೃತ್ತಿಯು ಅತ್ಯುತ್ತಮ ಹಾಗೂ ಅತ್ಯಾಕರ್ಷಕವಾಗಿರುತ್ತದೆ. ಈ ಹೊಸ ಆವೃತ್ತಿಯಲ್ಲಿ ವಿಜಯಶಾಲಿಯಾದವರಿಗೆ ರು.50 ಲಕ್ಷ ನಗದನ್ನು ಪ್ರಶಸ್ತಿಯಾಗಿ ನೀಡಲಾಗುತ್ತಿದೆ.

  ಹದಿನಾಲ್ಕು ಮಂದಿ ಸ್ಪರ್ಧಿಗಳ ಜೊತೆ ಸೆಣೆಸಾಟ

  ಹದಿನಾಲ್ಕು ಮಂದಿ ಸ್ಪರ್ಧಿಗಳ ಜೊತೆ ಸೆಣೆಸಾಟ

  ಸಿನಿಮಾ, ಕಿರುತೆರೆ ಹಾಗೂ ಇತರೆ ಕ್ಷೇತ್ರಗಳಲ್ಲಿರುವ 14 ಮಂದಿ ಸ್ಪರ್ಧಿಗಳು 'ಬಿಗ್ ಬಾಸ್' ಪಟ್ಟಕ್ಕಾಗಿ ಸೆಣಸಾಡುತ್ತಾರೆ. ಇವರೆಲ್ಲರೂ 3 ತಿಂಗಳುಗಳ ಕಾಲ ಒಂದೇ ಸೂರಿನಡಿ ಇರುತ್ತಾರೆ. ಸಾಕಷ್ಟು ಹೊಸತು ಮತ್ತು ವೈವಿಧ್ಯತೆಗಳನ್ನು ಹೊತ್ತು ತರುತ್ತಿರುವ ಈ ಆವೃತ್ತಿಯ ಹಲವು ವಿಶೇಷತೆಗಳಿಂದ ಕೂಡಿರುತ್ತದೆ.

  ಬಿಗ್ ಬಾಸ್ ರೋಮಾಂಚಕಾರಿ ಸರಣಿ

  ಬಿಗ್ ಬಾಸ್ ರೋಮಾಂಚಕಾರಿ ಸರಣಿ

  ಸುವರ್ಣವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಮಾತನಾಡುತ್ತಾ, "ನಾವು ನಮ್ಮ ವೀಕ್ಷಕರಿಗೆ ಸದಾ ವಿಭಿನ್ನ ಮತ್ತು ಮನಮೋಹಕವಾದ ಕಾರ್ಯಕ್ರಮಗಳನ್ನೇ ಉಣಬಡಿಸುತ್ತಾ ಬಂದಿದ್ದೇವೆ. ಈಗ ಮತ್ತೊಂದು ರೋಮಾಂಚನಕಾರಿ ಸರಣಿಯೊಂದಿಗೆ ನಿಮ್ಮ ಮುಂದೆ ಬರುತ್ತಿರುವುದು ಬಹಳ ಸಂತಸ...

  ವೀಕ್ಷಕರ ಮನದಾಳಕ್ಕೆ ಲಗ್ಗೆ ಹಾಕಲಿರುವ ಶೋ

  ವೀಕ್ಷಕರ ಮನದಾಳಕ್ಕೆ ಲಗ್ಗೆ ಹಾಕಲಿರುವ ಶೋ

  'ಬಿಗ್ ಬಾಸ್'ನ ದ್ವಿತೀಯ ಆವೃತ್ತಿಯು ಸಾಕಷ್ಟು ಉತ್ತೇಜನಕಾರಿಯಾಗಲಿದ್ದು ಸೂಪರ್ ಸ್ಟಾರ್ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಸ್ಪರ್ಧಾಳುಗಳ ಜೊತೆ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುವ ಈ ಆವೃತ್ತಿಯು ವೀಕ್ಷಕರ ಮನದಾಳಕ್ಕೀಳಿಯುತ್ತದೆ ಎಂಬ ವಿಶ್ವಾಸ ನಮ್ಮದು" ಎಂದರು.

  ಈ ಬಾರಿಯೂ ಆಸಕ್ತಿದಾಯಕ ಟಾಸ್ಕ್ ಗಳು

  ಈ ಬಾರಿಯೂ ಆಸಕ್ತಿದಾಯಕ ಟಾಸ್ಕ್ ಗಳು

  ಕಿಚ್ಚ ಸುದೀಪ್ ಮಾದ್ಯಮ ಮಿತ್ರರನ್ನುದ್ದೇಶಿಸಿ ಮಾತನಾಡಿ, "ಈ ರೀತಿಯ ಕಾರ್ಯಕ್ರಮಗಳನ್ನು ನಿರೂಪಿಸುವುದಕ್ಕೆ ನಾನು ಸದಾ ಮುಂದೆ ನೋಡುತ್ತಿರುತ್ತೇನೆ. ಸುವರ್ಣ ಪರಿವಾರ ಮತ್ತು ಬಿಗ್ ಬಾಸ್ ಕುಟುಂಬದ ಸದಸ್ಯನಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಈ ಕಾರ್ಯಕ್ರಮ ಸಾಕಷ್ಟು ಹಾಸ್ಯ ಮತ್ತು ಆಸಕ್ತಿದಾಯಕ ಟಾಸ್ಕ್ ಗಳೊಂದಿಗೆ ಕೂಡಿದ್ದು ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಬ್ಬರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ನನ್ನದು" ಎಂದರು.

  ಟಿ.ಆರ್.ಪಿ ದಾಖಲೆ ಸೃಷ್ಟಿಸಿದ ಕಾರ್ಯಕ್ರಮ

  ಟಿ.ಆರ್.ಪಿ ದಾಖಲೆ ಸೃಷ್ಟಿಸಿದ ಕಾರ್ಯಕ್ರಮ

  ಎಂಡಮಾಲ್ ಇಂಡಿಯಾ ಟೆಲಿವಿಷನ್ ಸಿಒಒ, ಅಭಿಷೇಕ್ ರೇಗೆ ಮಾತನಾಡಿ, "ಊಹೆಗೂ ನಿಲುಕದ ಕಾರ್ಯಕ್ರಮ 'ಬಿಗ್ ಬಾಸ್'ನ ಕನ್ನಡದ ಆವೃತ್ತಿ. ಈ ಕಾರ್ಯಕ್ರಮ ದೇಶಾದ್ಯಂತ ಛಾಪನ್ನು ಮೂಡಿಸಿದೆ. ರಾಷ್ಟ್ರ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿಯೂ ಅತೀ ಹೆಚ್ಚು ಟಿ.ಆರ್.ಪಿ.ಯನ್ನು ಗಳಿಸಿ ದಾಖಲೆಯನ್ನು ಸೃಷ್ಟಿಸಿದೆ. ಕನ್ನಡಿಗರ ಅಚ್ಚುಮೆಚ್ಚಿನ ಕಿಚ್ಚ ಸುದೀಪ್ ಈ ಕಾರ್ಯಕ್ರಮದ ಸಾರಥಿಯಾಗಿ 14 ಸ್ಪರ್ಧಿಗಳೊಂದಿಗಿರುತ್ತಾರೆ ಹಾಗೂ ವಾರಾಂತ್ಯದಲ್ಲಿ ಕಾರ್ಯಕ್ರಮದಿಂದ ಒಬ್ಬ ಸ್ಪರ್ಧಿ ನಿರ್ಗಮಿಸುತ್ತಾರೆ" ಎಂದು ವಿವರ ನೀಡಿದರು.

  ಮನೋರಂಜನೆಯ ಮಹಾಪರ್ವಕ್ಕೆ ನಾಂದಿ

  ಮನೋರಂಜನೆಯ ಮಹಾಪರ್ವಕ್ಕೆ ನಾಂದಿ

  ಬಿಗ್ ಬಾಸ್ ದ್ವಿತೀಯ ಆವೃತ್ತಿಯ ಮೂಲಕ ಕರ್ನಾಟಕದ ಮೆಚ್ಚುಗೆಯ ವಾಹಿನಿಯಾದ ಸುವರ್ಣ, ಮನೋರಂಜನೆಯ ಮಹಾಪರ್ವಕ್ಕೆ ನಾಂದಿ ಹಾಡಲಿದೆ.

  ಸುವರ್ಣ ವಾಹಿನಿಯು ಕರ್ನಾಟಕದಾದ್ಯಂತ ಎಲ್ಲರ ಮನೆಮಾತಾಗಿದ್ದು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನೇ ನೀಡುತ್ತಾ ಬರುತ್ತಿದೆ.

  ಪ್ರತಿ ಶನಿವಾರ ಎಲಿಮಿನೇಷನ್ ಇರುತ್ತದೆ

  ಪ್ರತಿ ಶನಿವಾರ ಎಲಿಮಿನೇಷನ್ ಇರುತ್ತದೆ

  ಇದೇ ಜೂನ್ 29, 2014 ರಿಂದ ಪ್ರಾರಂಭವಾಗುವ ಬಿಗ್ ಬಾಸ್' 2ನೇ ಆವೃತ್ತಿಯು 14 ವಾರಗಳ ಕಾಲ ಮನೋರಂಜನೆಯ ಮಹಾಪೂರವನ್ನೇ ಹರಿಸಲಿದೆ. ಪ್ರತಿ ಶನಿವಾರ ಎಲಿಮಿನೇಷನ್ ಇರುತ್ತದೆ. ಜೂನ್ 29ರಿಂದ ಪ್ರತಿ ರಾತ್ರಿ 8 ಗಂಟೆಗೆ ಸುವರ್ಣವಾಹಿನಿಯನ್ನು ತಪ್ಪದೇ ಟ್ಯೂನ್ ಮಾಡಿ!

  English summary
  Suvarna TV, Star Network's Kannada General Entertainment Channel, made an official announcement on the most awaited reality show on Kannada television – Bigg Boss Season 2! The celebrated show will be aired from 29th June 2014, Sunday with an intriguing mix of housemates that is set to make the season more exciting!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X