For Quick Alerts
  ALLOW NOTIFICATIONS  
  For Daily Alerts

  ವಾರದ ಕಥೆ ಕಿಚ್ಚನ ಜೊತೆ ಬಿಗ್ ಬಾಸ್ ಹೈಲೈಟ್ಸ್

  By Rajendra
  |
  <ul id="pagination-digg"><li class="next"><a href="/tv/sudeep-clears-doubt-on-bigg-boss-074732.html">Next »</a></li></ul>

  ತಿಳಿನೀಲಿ ಬಣ್ಣದ ಜಾಕೆಟ್ ತೊಟ್ಟು ಬಂದಿದ್ದ ಸುದೀಪ್ ಆಕರ್ಷಕ ಹೇರ್ ಸ್ಟೈಲ್ ನಲ್ಲಿ ಈ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಂಗೊಳಿಸುತ್ತಿದ್ದರು. 'ಬಿಗ್ ಬಾಸ್' ರಿಯಾಲಿಟಿ ಶೋ ನಿರೂಪಕರಾಗಿ ಅವರು ಜನಮನ ಗೆದ್ದಿದ್ದಾರೆ. ಶುಕ್ರವಾರದ (ಜೂ.8) ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ.

  ಈ ಬಾರಿ ಯಾರು ಮನೆಯಿಂದ ಯಾರು ಹೊರಹೋಗಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಚಂದ್ರಿಕಾ ಹಾಗೂ ಬ್ರಹ್ಮಾಂಡ ಶರ್ಮಾ ಅವರು ಎಲಿಮಿನೇಷನ್ ಲಿಸ್ಟ್ ನಲ್ಲಿ ಇರಲಿಲ್ಲ. ಅರುಣ್, ಅನುಶ್ರೀ, ನಿಕಿತಾ ಹಾಗೂ ವಿಜಯ್ ರಾಘವೇಂದ್ರ ಮಾತ್ರ ಇದ್ದರು.

  ಅನುಶ್ರೀ ಅವರು ಮನೆಯಿಂದ ಹೊರಹೋಗುವ ಸಾಧ್ಯತೆ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಎಲ್ಲರ ಊಹೆ ತಲೆಕೆಳಗಾಗಿ ಅನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಇನ್ನು ಮನೆಯಲ್ಲಿ ಇರುವುದು ಐದೇ ಜನ. ಉಳಿದಿರುವುದು ನಾಲ್ಕೇ ವಾರ.

  ಈ ಬಾರಿಯ ಕಾರ್ಯಕ್ರಮದಲ್ಲೂ ಸುದೀಪ್ ಅವರು ತಮ್ಮ ವಿಭಿನ್ನ ನಿರೂಪಣಾ ಶೈಲಿಯಿಂದ ಸ್ಪರ್ಧಿಗಳನ್ನು ಒಂದಷ್ಟು ಕೆಣಕಿ, ರಮಿಸಿ,ನಲಿಸಿ, ರಂಜಿಸಿದರು. ಅರುಣ್ ಸಾಗರ್ ಅವರನ್ನು ಉದ್ದೇಶಿಸಿ ನೀವ್ಯಾಕ್ರಿ ನಿಮ್ಮ ಹೆಂಡ್ತಿಯನ್ನು ಕರೆದುಕೊಂಡು ಬಾತ್ ರೂಮಿಗೆ ಹೋದ್ರಿ.

  ಹತ್ತು ನಿಮಿಷದಲ್ಲಿ ಎಷ್ಟು ಕೊಟ್ರಿ ಎಂದೆಲ್ಲಾ ಕೇಳಿ ಅರುಣ್ ಅವರ ಕೆನ್ನೆ ಕೆಂಪಾಗುವಂತೆ ಮಾಡಿದರು. ಕನ್ಫೆಷನ್ ರೂಂ ಕೋರ್ಟ್ ಇದ್ದಂತೆ. ಅಲ್ಲೂ ತಮ್ಮ ಹೆಂಡತಿಯನ್ನು ಬಿಡಲಿಲ್ಲ ಅಲ್ರಿ. ಬಿಗ್ ಬಾಸ್ ಮನೆಯಲ್ಲಿ ಹೊಸ ಹಿಸ್ಟರಿಯನ್ನೇ ಕ್ರಿಯೇಟ್ ಮಾಡಿಬಿಟ್ರಿ ಅರುಣ್ ಸಾಗರ್ ಅವರೇ ಎಂದು ಕೆಣಕಿದರು.

  ಕಳೆದ ವಾರ ಅರುಣ್ ಅವರ ಪತ್ನಿ ಬಿಗ್ ಬಾಸ್ ಮನೆಗೆ ಬಂದಿದ್ದಾಗ ಅವರನ್ನು ಅಪ್ಪಿ ಮುದ್ದಾಡಿದ್ದರು. ಕಳೆದ ಎಪ್ಪತ್ತು ದಿನಗಳಿಂದ ಬಿಸಿಲನು ಕಾಣದ ಲತೆಯಂತಾಗಿದ್ದರು ಅರುಣ್. ಪತ್ನಿ ಸಿಕ್ಕ ಖುಷಿಯಲ್ಲಿ ಎಲ್ಲವನ್ನೂ ಮರೆತು ಕ್ಯಾಮೆರಾಗಳ ಮುಂದೆಯೇ ಮುತ್ತಿನ ಸುರಿಮಳೆ ಗರೆದಿದ್ದರು.

  <ul id="pagination-digg"><li class="next"><a href="/tv/sudeep-clears-doubt-on-bigg-boss-074732.html">Next »</a></li></ul>
  English summary
  Anushree, a popular VJ evicted from the Bigg Boss house. She has spent in the house more than 70 days. Finally she got out from the show. Etv Kannada reality show Bigg Boss week end programme 'Vaarada Kathe Kichchana Jothe' highlights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X