For Quick Alerts
  ALLOW NOTIFICATIONS  
  For Daily Alerts

  BB7: ಅರ್ಮಾನ್, ಅನಿತಾ ಕಿತ್ತಾಟ ಶಿಲ್ಪಾ ಸೇಫ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಬಿಗ್ ಬಾಸ್ 7 ರಲ್ಲಿ ಸ್ವರ್ಗ ಹಾಗೂ ನರಕವಾಸಿಗಳ ಪೈಕಿ ಈಗ ಸ್ವರ್ಗವಾಸಿಗಳ ಕಿತ್ತಾಟವೇ ಗಮನ ಸೆಳೆಯುತ್ತಿದೆ. ಕ್ಲಾರ್ಕ್ ವರ್ಕಿಂಗ್ ಟಾಸ್ಕ್ ಮುಂದುವರೆದಿದ್ದು ಸ್ವರ್ಗವಾಸಿಗಳ ಮೇಲೆ ನರಕವಾಸಿಗಳು ಕೊಂಚ ಮೇಲುಗೈ ಸಾಧಿಸಿರುವುದು ಕಂಡು ಬಂದಿದೆ.

  ಸ್ವರ್ಗವಾಸಿಗಳೆಲ್ಲರೂ ನಾವೆಲ್ಲರೂ ಸೇಫ್ ಎಂದು ತಿಳಿದಿದ್ದರು ಆದರೆ, ಅವರ ನಂಬಿಕೆ ಟ್ವಿಸ್ಟ್ ನೀಡಿದ ಬಿಗ್ ಬಾಸ್ ನೀವು ಕೂಡಾ ಟಾಸ್ಕ್ ನಲ್ಲಿ ಗೆದ್ದರೆ ಮಾತ್ರ ನಿಮ್ಮ ಸ್ಥಾನ ಸುರಕ್ಷಿತ ಎಂದರು.

  ಲಕ್ಸುರಿ ಬಜೆಟ್ ಗಾಗಿ ಅರ್ಮಾನ್ ಹಾಗೂ ಶಿಲ್ಪಾ ಮೊದಲು ಗಡಿಯಾರ ನೋಡಿಕೊಳ್ಳಲು ಬರುತ್ತಾರೆ. ಪ್ರತ್ಯೂಷಾ ಹಾಗೂ ಗೌಹರ್ ಅವರು ಗಲಾಟೆ ಮಾಡುತ್ತಾ ಸಾಕಷ್ಟು ತೊಂದರೆ ನೀಡುತ್ತಾರೆ. ಕಳೆದ ಬಾರಿ ಪೂರ್ತಿ ಟಾಸ್ಕ್ ಮಾಡಿದ ಎಲ್ಲಿ ಹಾಗೂ ರತನ್ ಸಕತ್ ಡಲ್ ಹೊಡೆಯುತ್ತಾ ಇಬ್ಬರ ಆಟ ನೋಡುತ್ತಾರೆ.

  ಈ ನಡುವೆ ತನ್ನ ನೆಚ್ಚಿನ ಪತಿ ಹೇಗಿರಬೇಕು ಎಂಬುದರ ಬಗ್ಗೆ ಅಪೂರ್ವ ಹಾಗೂ ಗೌಹರ್ ಜತೆ ವಿದೇಶಿ ಸ್ಪರ್ಧಿ ಎಲ್ಲಿ ಹಂಚಿಕೊಳ್ಳುತ್ತಾಳೆ. ಉತ್ತಮ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಬಗ್ಗೆ ಗೊಂದಲ ಮೂಡುತ್ತದೆ. ಕಾಮ್ಯಾ ನೀಡಿದ ಸಲಹೆಗೆ ಸರಿಯಾದ ಸಹಕಾರ ಸಿಗುವುದಿಲ್ಲ.

  ಮೂವರಿಗೆ ಶಿಕ್ಷೆ: ಗೌಹರ್, ಶಿಲ್ಪಾ, ತನೀಶಾ ಹಿಂದಿ ಭಾಷೆ ಬಿಟ್ಟು ಇಂಗ್ಲೀಷ್ ನಲ್ಲೇ ಹೆಚ್ಚು ಸಂಭಾಷಿಸುವುದಕ್ಕೆ ಆಕ್ಷೇಪವ್ಯಕ್ತಪಡಿಸಿದ ವಾರ್ಡನ್ ಎಚ್ಚರಿಕೆ ನೀಡುತ್ತಾರೆ. ಮತ್ತೊಮ್ಮೆ ಭಾಷೆ ಬಳಕೆಯಲ್ಲಿ ವ್ಯತ್ಯಾಸ ಕಂಡು ಬಂದರೆ ನೇರ ಶಿಕ್ಷೆ ವಿಧಿಸಲಾಗುತ್ತದೆ ಎಂದು ವಾರ್ಡನ್ ಹೇಳುತ್ತಾರೆ.

  ಆದರೆ, ಮಾತಿಗೆ ತಪ್ಪಿದ ಮೂವರಿಗೆ ನೂರು ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಲಾಗುತ್ತದೆ. ನಿತ್ಯ ಮನರಂಜನೆಗಾಗಿ ಕಲರ್ಸ್ ವಾಹಿನಿಯಲ್ಲಿ ಸೋಮವಾರದಿಂದ ಭಾನುವಾರ ತನಕ ರಾತ್ರಿ 9 ಗಂಟೆಗೆ ನೋಡಿ..

  ಬಿಗ್ ಬಾಸ್ ಟ್ವಿಸ್ಟ್

  ಬಿಗ್ ಬಾಸ್ ಟ್ವಿಸ್ಟ್

  ಗೌಹರ್, ಕುಶಾಲ್, ರತನ್ ಹಾಗೂ ಪ್ರತ್ಯೂಷಾ ಹೆಚ್ಚಿನ ಗಮನ ಸೆಳೆದರೆ, ಅರ್ಮಾನ್ ಹಾಗೂ ಹಿರಿಯ ಸ್ಪರ್ಧಿ ಅನಿತಾ ವಾಕ್ಸಮರ ನಡೆಯುತ್ತದೆ. ಇವರಿಬ್ಬರಲ್ಲಿ ಟಾಸ್ಕ್ ಗೆದ್ದವರು ಮಾತ್ರ ಅದಲಿ ಬದಲಿಯಿಂದ ಬಚಾವಾಗುತ್ತಾರೆ ಎಂದು ಬಿಗ್ ಬಾಸ್ ಟ್ವಿಸ್ಟ್ ಕೊಡುತ್ತಾರೆ. ಸಂಗ್ರಾಮ್ ಸಿಂಗ್ ವರ್ತನೆಯಲ್ಲೂ ಸಾಕಷ್ಟು ಬದಲಾವಣೆ ಕಾಣುತ್ತಿದೆ. ರತನ್ ಸದ್ಯಕ್ಕೆ ಸುಧಾರಣೆಗೊಂಡ ಹಾಗೆ ಕಾಣುತ್ತಾನೆ.

  ವಿಜೆ ಆಂಡಿ

  ವಿಜೆ ಆಂಡಿ

  ಇಂಗ್ಲೀಷ್ ನಲ್ಲಿ ಮಾತಾಡಿ ಶಿಕ್ಷೆ ಪಡೆದ ವಿಜೆ ಆಂಡಿ

  ಶಿಲ್ಪಾ ಅಗ್ನಿಹೋತ್ರಿ

  ಶಿಲ್ಪಾ ಅಗ್ನಿಹೋತ್ರಿ

  ಆಂಡಿ ಹಾಗೂ ತನೀಶಾ ಜತೆ ಶಿಕ್ಷೆ ಅನುಭವಿಸಿದ ಶಿಲ್ಪಾಗೆ ನರಕಕ್ಕೆ ಹೋಗುವ ಆಫರ್ ಬಂದಿತ್ತು. ನರಕವಾಸಿ ಪತಿ ಅಪೂರ್ವ ಜತೆ ಇರುವ ಅವಕಾಶ ಸಿಕ್ಕರೂ ಸ್ವರ್ಗದಲ್ಲೇ ಉಳಿಯುತ್ತೇನೆ ಎನ್ನುತ್ತಾಳೆ

  ಮೂವರು ಕೋತಿಗಳು

  ಮೂವರು ಕೋತಿಗಳು

  ಖುಷಿಯಿಂದಲೇ ನೂರು ಬಾರಿ ಕುಳಿತು ಏಳುವ ಕಾರ್ಯಕ್ಕೆ ಆಂಡಿ, ಶಿಲ್ಪಾ ಹಾಗೂ ತನೀಶಾ ರೆಡಿಯಾದರು.

  ಆದರೆ ಕಷ್ಟ ಕಷ್ಟ

  ಆದರೆ ಕಷ್ಟ ಕಷ್ಟ

  ಖುಷಿಯಿಂದಲೇ ನೂರು ಬಾರಿ ಕುಳಿತು ಏಳುವ ಕಾರ್ಯಕ್ಕೆ ಆಂಡಿ, ಶಿಲ್ಪಾ ಹಾಗೂ ತನೀಶಾ ಉಸ್ಸತ್ತಾ ಎಂದು ಕುಸಿದರು

  ಶಿಕ್ಷೆ ಸಂಪೂರ್ಣ

  ಶಿಕ್ಷೆ ಸಂಪೂರ್ಣ

  ಆದರೆ ಕಷ್ಟಪಟ್ಟು ಹಾಗೂ ಹೀಗೂ ಶಿಕ್ಷೆ ಪೂರ್ಣಗೊಳಿಸಿದ ಮೂವರು ಹಿಂದಿಯಲ್ಲೇ ಮಾತನಾಡುವ ಶಪಥ ಮಾಡಿದರು.

  ಆನಿತಾ-ಅರ್ಮಾನ್

  ಆನಿತಾ-ಅರ್ಮಾನ್

  ಅನಿತಾ ಸ್ವರ್ಗದಲ್ಲೆ ಉಳಿಯಲಿ ಎಂದು ತನೀಶಾ ಬಿಗ್ ಬಾಸ್ ಗೆ ಹೇಳಿದಳು ಆದರೆ, ಇನ್ನೊಂದು ಹೆಸರಿನ ಬಗ್ಗೆ ಗೊಂದಲ ಮೂಡಿತು. ಅರ್ಮಾನ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದರೂ ನಂತರ ಮಾತಿನ ಚಕಮಕಿ ನಿಲ್ಲಿಸಿಬಿಟ್ಟ

  ಎಲ್ಲಿ ಅವ್ರಾಮ್

  ಎಲ್ಲಿ ಅವ್ರಾಮ್

  ಉತ್ತಮ ಸ್ಪರ್ಧಿ ಆಯ್ಕೆಗೆ ಚೀಟಿ ಎತ್ತುವ ಐಡಿಯಾ ಕೊಟ್ಟ ಕಾಮ್ಯಾ ವಿರುದ್ಧ ಎಲ್ಲಿ ಹಾಗೂ ರತನ್ ತಿರುಗಿ ಬಿದ್ದರು.

  ಕುಶಾಲ್- ಎಲ್ಲಿ

  ಕುಶಾಲ್- ಎಲ್ಲಿ

  ಅಪರೂಪಕ್ಕೆ ಗೌಹರ್ ಸಂಗ ಬಿಟ್ಟು ಎಲ್ಲಿ ಜತೆ ಕಾಣಿಸಿಕೊಂಡ ಕುಶಾಲ್

  English summary
  Bigg Boss season 7 -Day 10 saw Jannat wasis continuing their task by working on the clock. Jahannum Wasis too had some success in distracting the contestants. Also, Tanisha had to pick two contestants among themselves to retain their Heavenliness, but Bigg Boss drops the twist

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X