For Quick Alerts
  ALLOW NOTIFICATIONS  
  For Daily Alerts

  ಹೊಸ ಸಾಹಸಕ್ಕೆ ಕೈ ಹಾಕಿದ ಸ್ಟಾರ್ ನಟ ರಣ್ವೀರ್ ಸಿಂಗ್

  |

  ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ರಣ್ವೀರ್ ಸಿಂಗ್ ಈಗ ಸಿನಿಮಾ ಜೊತೆಗೆ ಕಿರುತೆರೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರಣ್ವೀರ್ ಸಿಂಗ್ ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಸಿನಿಮಾ ಚಿತ್ರೀಕರಣಗಳ ಒತ್ತಡದ ನಡುವೆಯೂ ರಣ್ವೀರ್ ಸಿಂಗ್ ಕಿರುತೆರೆಯ ಪ್ರಸಿದ್ಧ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

  ಕಿರುತೆರೆಯ ಕಲರ್ಸ್ ವಾಹಿನಿಯಲ್ಲಿ ರಣ್ವೀರ್ ಸಿಂಗ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದಿ ಬಿಗ್ ಪಿಕ್ಟರ್ ಹೆಸರಿನಲ್ಲಿ ಮೂಡಿಬರುವ ಕಾರ್ಯಕ್ರಮವನ್ನು ರಣ್ವೀರ್ ಹೋಸ್ಟ್ ಮಾಡಲಿದ್ದಾರೆ. ಬನಿಜಯ್ ಏಷ್ಯಾ ಮತ್ತು ಐಟಿವಿ ಸ್ಟುಡಿಯೋ ಗ್ಲೋಬಲ್ ಎಂಟರ್ ಟೈನ್ ಮೆಂಟ್ ನಿರ್ಮಿಸುತ್ತಿರುವ ಈ ಶೋ ವೂಟ್ ಮತ್ತು ಜಿಯೋದಲ್ಲಿ ಪ್ರಸಾರವಾಗಲಿದೆ.

  ಬಿಗ್ ಪಿಕ್ಚರ್ ಸ್ಪರ್ಧಿಗಳ ಜ್ಞಾನ ಮತ್ತು ದೃಶ್ಯ ಸ್ಮರಣೆಯನ್ನು ಪರೀಕ್ಷಿಸುತ್ತಿದೆ. ಇದರಲ್ಲಿ ಲೈಫ್ ಲೈನ್ ಸಹಾಯ ಕೂಡ ಇರಲಿದೆ. ಈ ಶೋನಲ್ಲಿ ಗೆದ್ದವರಿಗೆ ನಗದು ಬಹುಮಾನ ಇರಲಿದೆ. ಸ್ಪರ್ಧಿಗಳು 12 ದೃಶ್ಯ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸಬೇಕು.

  ಈ ಶೋನಲ್ಲಿ ವೀಕ್ಷಕರು ಕೂಡ ಆಟ ಆಡಲು ಅವಕಾಶವಿದ್ದು, ಮನೆಯಿಂದನೇ ಹಣ ಗೆಲ್ಲಬಹುದು. ಇನ್ನು ಮೊದಲ ಬಾರಿಗೆ ಕಿರುತೆರೆಗೆ ಕೊಟ್ಟಿರುವ ರಣ್ವೀರ್ ಸಿಂಗ್ ಕಾರ್ಯಕ್ರಮ ನಡೆಸಿಕೊಡಲು ಉಸ್ತುಕರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣ್ವೀರ್, "ಕಲಾವಿದನಾಗಿ ನನ್ನ ಪ್ರಯಾಣದಲ್ಲಿ, ಪ್ರಯೋಗ ಮತ್ತು ಅನ್ವೇಷಣೆಯ ಹಂಬಲ ನಿರಂತರವಾಗಿದೆ. ಭಾರತೀಯ ಸಿನಿಮಾರಂಗ ನನಗೆ ಎಲ್ಲವನ್ನು ನೀಡಿದೆ. ನಟನಾಗಿ ನನ್ನ ಕೌಶಲ್ಯಗಳನ್ನು ಉತ್ತಮಗೊಳಿಸಲು ಇದು ಒಂದು ವೇದಿಕೆಯಾಗಿದೆ. ಜನರಿಂದ ಅಪಾರವಾದ ಪ್ರೀತಿಯನ್ನು ಪಡೆಯುವ ಅದೃಷ್ಟ ನನಗೆ ಸಿಕ್ಕಿದೆ. ಈಗ ಕಿರುತೆರೆ ಕಾರ್ಯಕ್ರಮದ ಮೂಲಕ ಅತ್ಯಂತ ವಿಶಿಷ್ಟವಾಗಿ ಸಂಪರ್ಕ ಸಾಧಿಸಲು ನೋಡುತ್ತೇನೆ. ಭಾರತವನ್ನು ರಸಪ್ರಶ್ನೆ ಕಾರ್ಯಕ್ರಮಕ್ಕೆ ಪರಿಚಯಿಸುವ ಪ್ರಸ್ತಾಪ ಬಂದಾಗ ನಾನು ಒಪ್ಪಿಕೊಂಡೆ" ಎಂದಿದ್ದಾರೆ.

  ಅಂದಹಾಗೆ ರಣ್ವೀರ್ ಈಗಾಗಲೇ ಕಾರ್ಯಕ್ರಮದ ಮೊದಲ ಟೀಸರ್ ನ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಈ ಟೀಸರ್ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಬಗ್ಗೆ ರಣ್ವೀರ್ ಮತ್ತು ಕಾರ್ಯಕ್ರಮದ ಆಯೋಜಕರು ಕೂಡ ಸಖತ್ ಉತ್ಸುಕರಾಗಿದ್ದಾರೆ. ರಣ್ವೀರ್ ಸಿಂಗ್ ಉತ್ಸಾಹ ಭಾರತೀಯ ಯುವಜನರನ್ನು ಆಕರ್ಷಿಸುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, 83, ಸೂರ್ಯವಂಶಿ, ಜಯೇಶ್‌ಭಾಯ್ ಜೋರ್ದಾರ್, ಸರ್ಕಸ್ ಮತ್ತು ಇತ್ತೀಚಿಗೆ ತಮಿಳಿನ ಸೂಪರ್ ಹಿಟ್ ಅನ್ನಿಯನ್ ಸಿನಿಮಾ ರಿಮೇಕ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  English summary
  Bollywood Actor Ranveer Singh to make tv debut with The Big Picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X