ವೇಲಾಯುಧ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಶರ್ಮಾ
ನರೇಂದ್ರ ಬಾಬು ಶರ್ಮಾ ಅವರು ತಮ್ಮ ಬಳಿ ಇರುವ ವೇಲಾಯುಧದ ರಹಸ್ಯವನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ. ಅವರಿಗೆ ಆ ಆಯುಧ ಹೇಗೆ ಲಭಿಸಿತು. ಯಾರು ಕೊಟ್ಟರು ಎಂಬುದನ್ನು ಅವರು ಈಟಿವಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು.
ಈ ಆಯುಧವನ್ನು ಬಿಗ್ ಬಾಸ್ ನ ಇನ್ನೊಬ್ಬ ಸ್ಪರ್ಧಿ ಅರುಣ್ ಸಾಗರ್ ಅವರು ಟಾಸ್ಕ್ ಒಂದರಲಿ ಕದ್ದು ಬಚ್ಚಿಟ್ಟಿದ್ದರು. ಆ ವೇಲಾಯುಧವನ್ನು ಮುಟ್ಟಿದ್ದಕ್ಕೆ ಬ್ರಹ್ಮಾಂಡ ಗುರುಗಳು ಕೆಂಡಾಮಂಡಲವಾಗಿದ್ದರು. ಸಾಕಷ್ಟು ಕಣ್ಣೀರು ಸುರಿಸಿದ್ದರು.

ಇದಕ್ಕೆ ಬ್ರಹ್ಮಾಂಡ ಶರ್ಮಾ ಅವರು ಹೇಳಿದ್ದು ಹೀಗಿತ್ತು. ಒಂದು ದಿನ ಕನಸಿನಲ್ಲಿ ಅಮ್ಮನವರು ಕಾಣಿಸಿಕೊಂಡರು. ತಮ್ಮ ಬಳಿ ಇರುವ ಆಯುಧವನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಆದರೆ ತಾವು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಯ್ಯೋ ಕನಸು ಬಿಡು ಎಂದು ಸುಮ್ಮನಾದೆ.
ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಈ ಆಯುಧ ಅಮ್ಮನವರ ಫೋಟೋ ಬಳಿ ಇತ್ತು. ತಮಗೆ ಸಾಕ್ಷಾತ್ ಆ ತಾಯಿಯೇ ಈ ಆಯುಧವನ್ನು ಕೊಟ್ಟಿದ್ದಾಳೆ. ಹಾಗಾಗಿ ಅದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











