For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್' ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿದ ಸಾಧಕರು

  By Harshitha
  |

  ಸಾಧಕರ ಜೀವನದ ಹಿತವಾದ ಭಾಗ ಪರಿಚಯಿಸುವ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್'. ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂರನೇ ಆವೃತ್ತಿ ಮುಕ್ತಾಯಗೊಂಡಿದೆ.

  'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ ಕೂತ ಸಾಧಕರ ಬಗ್ಗೆ ಕೆಲವರಿಗೆ ಅಸಮಾಧಾನ ಇರಬಹುದು. ಆದರೂ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಟಿ.ಆರ್.ಪಿ ಲಭಿಸಿರುವುದು ಮಾತ್ರ ಸುಳ್ಳಲ್ಲ.

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಕಾರ್ಯಕ್ರಮದ ಬಗ್ಗೆ ಸಾಧಕರು ಹಾಡಿ ಹೊಗಳಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಯಶಸ್ಸಿಗೆ ಕಾರಣವಾಗಿರುವ ತಂಡಕ್ಕೆ ಸಾಧಕರು ಹಾಟ್ಸ್ ಆಫ್ ಹೇಳಿದ್ದಾರೆ.

  ಯಾರ್ಯಾರು ಏನೇನು ಹೇಳಿದ್ದಾರೆ ಅಂತ ನೀವೇ ನೋಡಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....

  ಹೃದಯ ತುಂಬಿ ನಮಸ್ಕಾರ ಮಾಡುತ್ತೇನೆ

  ಹೃದಯ ತುಂಬಿ ನಮಸ್ಕಾರ ಮಾಡುತ್ತೇನೆ

  ''ನನ್ನ 57 ವರ್ಷಗಳ ರಾಜಕೀಯ ಘಟನೆಗಳನ್ನ ಕಾರ್ಯಕ್ರಮದಲ್ಲಿ ನೋಡಿದೆ ನಾನು. ನಿಜಕ್ಕೂ ಹೇಳುತ್ತೇನೆ ಇಂತಹ ಒಂದು ಕಾರ್ಯಕ್ರಮ ನಾನು ನೋಡಿಲ್ಲ. ಮುಂದೆ ಕೂಡ ನೋಡುತ್ತೇನೋ, ಇಲ್ಲವೋ ಗೊತ್ತಿಲ್ಲ. ಇದು ಅತ್ಯಂತ ಅದ್ಭುತವಾದ ಕಾರ್ಯಕ್ರಮ. ನಾನು ಹೃದಯ ತುಂಬಿ ನಮಸ್ಕಾರ ಮಾಡುತ್ತೇನೆ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

  ಸಾಮಾನ್ಯ ಟಿ.ವಿ ಸಂದರ್ಶನ ಅಲ್ಲ

  ಸಾಮಾನ್ಯ ಟಿ.ವಿ ಸಂದರ್ಶನ ಅಲ್ಲ

  ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ನನ್ನನ್ನ ಕರೆದಾಗ, ನಾನು ತಿಳಿದುಕೊಂಡಿದ್ದೆ ಇದು ಇನ್ನೊಂದು ಟಿವಿ ಸಂದರ್ಶನ ಅಂತ. ಆದ್ರೆ, ಅದಕ್ಕೂ ಇದಕ್ಕೂ ಬಹಳ ಅಜಗಜಾಂತರ ವ್ಯತ್ಯಾಸ ಇತ್ತು'' - ಸಂತೋಷ್ ಹೆಗ್ಡೆ

  ಎಲ್ಲರಿಗೂ ಧನ್ಯವಾದಗಳು

  ಎಲ್ಲರಿಗೂ ಧನ್ಯವಾದಗಳು

  ''ನನ್ನ ಬಗ್ಗೆ ಮಾತನಾಡಿದ ಎಲ್ಲ ಸ್ನೇಹಿತರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ. ಹೋರಾಟದ ಮೂಲಕ ನಾನು ಇಲ್ಲಿಯವರೆಗೂ ಬಂದಿದ್ದೇನೆ. ಇನ್ನೊಬ್ಬರಿಗೆ ಸ್ಫೂರ್ತಿ ಆಗುವುದು ಬಹಳ ಮುಖ್ಯ'' - ಸಿದ್ದರಾಮಯ್ಯ, ಮುಖ್ಯಮಂತ್ರಿ

  ನಟ ಜಗ್ಗೇಶ್ ಏನಂತಾರೆ.?

  ನಟ ಜಗ್ಗೇಶ್ ಏನಂತಾರೆ.?

  ''ಹೃದಯದ ಅಂತರಾಳದಲ್ಲಿ ಬಚ್ಚಿಟ್ಟುಕೊಂಡ ಅದೆಷ್ಟೋ ವಿಚಾರಧಾರೆಗಳನ್ನ ಹೊರಗೆ ತರುವಂತಹ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'' - ಜಗ್ಗೇಶ್, ನಟ

  ಮ್ಯಾಜಿಕ್ ಸೀಟ್

  ಮ್ಯಾಜಿಕ್ ಸೀಟ್

  ''ಮ್ಯಾಜಿಕ್ ಸೀಟ್ ಅಂತ ಹೇಳಬಹುದು. ಯಾಕಂದ್ರೆ, ಎಂಥ ಮನುಷ್ಯ ಆಗಿರಬಹುದು. ಅಲ್ಲಿಗೆ ಬಂದ್ಮೇಲೆ ಮಗು ಆಗಿಬಿಡುತ್ತಾನೆ. ವೀಕೆಂಡ್ ವಿತ್ ರಮೇಶ್ ನನ್ನ ಜೀವನದಲ್ಲಿ ಬಹಳ ಸೊಗಸಾದ ಕ್ಷಣಗಳು'' - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಅದ್ಭುತ ಶ್ರಮ

  ಅದ್ಭುತ ಶ್ರಮ

  ''ಓದಿರುವ ಸ್ಕೂಲ್ ಗಳಿಗೆಲ್ಲ ಹೋಗಿ ರಿಜಿಸ್ಟರ್ ತಡಕಾಡಿ... ಈ ಶ್ರಮ ಅಂತೂ ಅದ್ಭುತವಾಗಿರುವಂಥದ್ದು'' - ಪ್ರಾಣೇಶ್

  ಸಾರ್ಥಕ ಅನಿಸಿತು

  ಸಾರ್ಥಕ ಅನಿಸಿತು

  ''ಜೀವನದಲ್ಲಿ ಎಲ್ಲರೂ ಕಣ್ಣೀರು ಹಾಕುತ್ತಾರೆ. ಆದರೆ ಆನಂದಭಾಷ್ಪ ಬಹುಶಃ ನಮ್ಮೆಲ್ಲರಿಗೂ ಸಿಗುವುದಿಲ್ಲ. ಈ ವೇದಿಕೆಯಲ್ಲಿ ಕೂತಾಗ ಎಲ್ಲರ ಕಣ್ಣಲ್ಲೂ ಆನಂದಭಾಷ್ಪ ಇತ್ತಲ್ಲ. ಅದೇ ಸಾರ್ಥಕ ಅನಿಸ್ತು ಈ ಕಾರ್ಯಕ್ರಮ'' - ಶ್ರುತಿ, ನಟಿ

  ಜಯಂತ್ ಕಾಯ್ಕಿಣಿ ಏನಂದರು.?

  ಜಯಂತ್ ಕಾಯ್ಕಿಣಿ ಏನಂದರು.?

  ''ವೀಕೆಂಡ್ ವಿತ್ ರಮೇಶ್ ನನ್ನನ್ನ ತುಂಬಾ ವಿನೀತಗೊಳಿಸಿದೆ'' - ಜಯಂತ್ ಕಾಯ್ಕಿಣಿ

  ಜನರ ಮನಸ್ಸಿನ ಒಳಗೆ ಹೋದೆ

  ಜನರ ಮನಸ್ಸಿನ ಒಳಗೆ ಹೋದೆ

  ''ವೀಕೆಂಡ್ ವಿತ್ ರಮೇಶ್ ನಿಂದ ಜನರ ಹತ್ತಿರ ಅಲ್ಲದೇ, ಅವರ ಮನಸ್ಸು ಒಳಗೆ ಹೋದೆ ಅನಿಸುತ್ತದೆ. ಥ್ಯಾಂಕ್ಯು ವೀಕೆಂಡ್ ವಿತ್ ರಮೇಶ್'' - ಜಯಶ್ರೀ

  English summary
  Celebrities says Thanks to Zee Kannada Channel's popular show 'Weekend With Ramesh-3'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X