For Quick Alerts
  ALLOW NOTIFICATIONS  
  For Daily Alerts

  ಸಂಪಾದನೆ ಇಲ್ಲ ಎಂದು ಮರ್ಯಾದೆ ಕಳೆಯಬೇಡಿ : ಮಗಳು-ಅಳಿಯನಿಗೆ ಭಾರ್ಗಿ ಅವಮಾನ

  |

  ಚಂದು ಭಾರ್ಗಿ ಎರಡನೆ ಮಗಳು ಚಂಚಲ ನಿಶ್ಚಿತಾರ್ಥದ ಸಂಭ್ರಮದಲ್ಲಿ ಎಲ್ಲರು ತೇಲುತ್ತಿದ್ದಾರೆ. ಆದ್ರೆ ಜಾನಕಿ ಮತ್ತು ನಿರಂಜನ್ ಇಬ್ಬರಿಗೆ ಚಂಚಲ ನಿಶ್ಚಿತಾರ್ಥದ ಸಂಭ್ರಮವನ್ನು ಎಂಜಾಯ್ ಮಾಡಲು ಭಾರ್ಗಿ ಅಡ್ಡಿ ಪಡಿಸುತ್ತಿದ್ದಾರೆ. ಪದೇ ಪದೇ ನಿರಂಜನ್ ಮತ್ತು ಜಾನಕಿಯನ್ನು ಅವಮಾನ ಮಾಡುವ ಮೂಲಕ ನೋವುಂಟು ಮಾಡುತ್ತಿದ್ದಾರೆ.

  ಚಂಚಲಗೋಸ್ಕರ ಜಾನಕಿ ಮತ್ತು ನಿರಂಜನ್ ಇಬ್ಬರು ಭಾರ್ಗಿ ಮನೆಗೆ ಬಂದಿದ್ದಾರೆ. ಚಂಚಲಗಾಗಿ ಭಾರ್ಗಿ ಏನೆ ಹೇಳಿದ್ರು ಸಹಿಸಿಕೊಂಡು ಇದ್ದಾರೆ. ಮತ್ತೊಂದೆಡೆ ಚಿರಂತನ್ ಮತ್ತು ಭಾರ್ಗಿ ಇಬ್ಬರು ನಿಶ್ಚಿತಾರ್ಥದ ಬಗ್ಗೆ ಮಾತನಾಡುತ್ತಿದ್ದಾರೆ. ಚಿರಂತನ್ ಮನೆಯಿಂದ ಯಾರು ಬರುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ ಎನ್ನುವ ಆತಂಕದಲ್ಲಿದ್ದಾರೆ ಚಿರಂತನ್.

  ಕೊನೆಗೂ ಚಂಚಲ ನಿಶ್ಚಿತಾರ್ಥಕ್ಕೆ ಬಂದ ಜಾನಕಿ-ನಿರಂಜನ್

  ಮಾಧ್ಯಮದವರೆಲ್ಲ ಈಗಾಗಲೆ ಕೇಳೋಕೆ ಶುರು ಮಾಡಿಕೊಂಡಿದ್ದಾರೆ. ಮಾಜಿ ಹೋಮ್ ಮಿನಿಸ್ಟರ್ ಗೂ ಮತ್ತು ಹಾಲಿ ಹೋಮ್ ಮಿನಿಸ್ಟರ್ ಇಬ್ಬರು ಹಾವು ಮುಂಗುಸಿ ತರ ಇದ್ದಾರೆ. ಚಿರಂತನ್ ಅನ್ನು ಮನೆಯವರಿಂದ ದೂರ ಮಾಡಿ ಮದುವೆ ಮಾಡಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಇದರ ನಡುವೆ ಜಾನಕಿ ಕೂಡ ತೀರ ಆತಂಕದಲ್ಲಿದ್ದಾರೆ. ಮುಂದೆ ಓದಿ..

  ಆತಂಕದಲ್ಲಿ ಮಗಳು ಜಾನಕಿ

  ಆತಂಕದಲ್ಲಿ ಮಗಳು ಜಾನಕಿ

  ನಿಶ್ಚಿತಾರ್ಥದಲ್ಲಿ ಏನಾದ್ರು ತೊಂದರೆ ಆಗಬಹುದು ಎನ್ನುವ ಆತಂಕದಲ್ಲಿ ಓಡಾಡುತ್ತಿದ್ದಾರೆ ಜಾನಕಿ. ಜಾನಕಿ ಮತ್ತು ನಿರಂಜನ್ ಗಂಡ ಹೆಂಡತಿ ಎನ್ನುವ ವಿಚಾರ ಮನೆಯವರಿಗೆ ಗೊತ್ತಾಗಲಿಗೆ ಎನ್ನುವ ಅನುಮಾನ ಜಾನಕಿಯನ್ನು ಕಾಡುತ್ತಿದೆ. ಮಾಧ್ಯಮದವರು ಬಂದರೆ ಎಲ್ಲ ವಿಚಾರ ಬಹಿರಂಗವಾಗುತ್ತೆ ಎಂದು ಹೇಳುತ್ತಿದ್ದಾರೆ ಜಾನಕಿ. ಆದ್ರೆ ನಿರಂಜನ್ ಪ್ರೆಸ್ ಅವರು ಬಂದರೆ ಅವರ ಮುಂದೆ ಹೋಗುವುದೆ ಬೇಡ. ಆಗ ಗೊತ್ತಾಗುವುದಿಲ್ಲ ಎಂದು ಹೇಳಿ ಜಾನಕಿಯನ್ನು ಸಮಾಧಾನ ಪಡಿಸಿದ್ದಾರೆ.

  ಭಾರ್ಗಿ ಜೊತೆ ವಿದೇಶಕ್ಕೆ ಹೊರಟ ಮಧುಕರ : ವಿಷಯ ಕೇಳಿ ಶಾಕ್ ಆದ ಸಿ ಎಸ್ ಪಿ

  ಚಂಚಲಗೆ ಗಿಫ್ಟ್ ನೀಡಿದ ಜಾನಕಿ

  ಚಂಚಲಗೆ ಗಿಫ್ಟ್ ನೀಡಿದ ಜಾನಕಿ

  ಮುದ್ದು ತಂಗಿ ಚಂಚಲಗೆ ಜಾನಕಿ ಪ್ರೀತಿಯಿಂದ ಪುಟ್ಟ ಗಿಫ್ಟ್ ನೀಡಿದ್ದಾರೆ. ಅಕ್ಕನ ಗಿಫ್ಟ್ ನೋಡಿ ಸಂತಸದಲ್ಲಿದ್ದಾರೆ ಚಂಚಲ. ಅಕ್ಕ-ಭಾವ ಬಂದಿರುವ ಖುಷಿಯಲ್ಲಿ ಚಂಚಲ ಇದ್ದಾರೆ. ಆದ್ರೆ ಮಾತ್ರ ಬೇಸರವನ್ನು ತಂಗಿಯ ಬಳಿ ಹೇಳಿಕೊಳ್ಳುತ್ತಿದ್ದಾರೆ. ಆಸ್ಪತ್ರೆ ಕಟ್ಟಿಸುತ್ತಿರುವ ಕಾರಣ ಚಂಚಲ ಮತ್ತು ಚಿರಂತನ್ ಇಬ್ಬರು ಮನೆಯಿಂದ ದೂರ ಅಳಿಯುತ್ತಾರೆ. ಆದ್ರೆ ಇಬ್ಬರು ಮನೆ ಬಿಟ್ಟು ಹೋಗುವುದರಿಂದ ಅಮ್ಮನಿಗೆ ಕಷ್ಟ ಆಗುತ್ತೆ ಎಂದು ನೊಂದುಕೊಳ್ಳುತ್ತಿದ್ದಾರೆ.

  ನಿರಂಜನ್ ಗೆ ಭಾರ್ಗಿ ಅವಮಾನ

  ನಿರಂಜನ್ ಗೆ ಭಾರ್ಗಿ ಅವಮಾನ

  ನಿರಂಜನ್ ಕಂಪೆನಿಗೆ 70 ಲಕ್ಷ ಸಾಲ ಮಾಡಿರುವ ಬಗ್ಗೆ ಅವಮಾನ ಮಾಡಿದ್ದಾರೆ ಬಾರ್ಗಿ. ನಿರಂಜನ್ ಗೆ ಏನು ಸಂಪಾದನೆ ಇಲ್ಲ ಎಂದು ಭಾರ್ಗಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಾರೆ. ಇದು ಕುಟುಂಬದ ಮರ್ಯಾದೆಯ ಪ್ರಶ್ನೆ ಯಾರಾದ್ರು ಕೇಳಿದ್ರೆ ಸಂಪಾದನೆ ಇಲ್ಲ ಎಂದು ಹೇಳಬೇಡಿ, ತಿಂಗಳಿಗೆ 25 ಲಕ್ಷ ಸಂಪಾದನೆ ಮಾಡುತ್ತೇನೆ ಎಂದು ಹೇಳಿ, ನಮ್ಮ ಮರ್ಯಾದೆ ಕಾಪಾಡಿ ಎಂದು ಜಾನಕಿ ಮತ್ತು ನಿರಂಜನ್ ಗೆ ಭಾರ್ಗಿ ಮತ್ತಷ್ಟು ಚುಚ್ಚುಮಾತುಗಳನ್ನು ಆಡುತ್ತಿದ್ದಾರೆ.

  ಚಂಚಲ ನಿಶ್ಚಿತಾರ್ಥಕ್ಕೆ ಹೋಗಲು ಜಾನಕಿಯನ್ನು ಒಪ್ಪಿಸಿದ ನಿರಂಜನ್

  ಗೆಸ್ಟ್ ಹೌಸ್ ನಲ್ಲಿ ಉಳಿಯಲು ಹೇಳಿದ ಭಾರ್ಗಿ

  ಗೆಸ್ಟ್ ಹೌಸ್ ನಲ್ಲಿ ಉಳಿಯಲು ಹೇಳಿದ ಭಾರ್ಗಿ

  ಮನೆಗೆ ಬಂದ ಅಳಿಯ ಮತ್ತು ಮಗಳನ್ನು ಗೆಸ್ಟ್ ಹೌಸ್ ನಲ್ಲಿ ಉಳಿದಿಕೊಳ್ಳುವಂತೆ ಹೇಳುವ ಮೂಲಕ ಇಬ್ಬರು ತುಂಬ ಕೆಟ್ಟದಾಗಿ ಟ್ರೀಟ್ ಮಾಡುತ್ತಿದ್ದಾರೆ ಭಾರ್ಗಿ. ಆದ್ರೆ ನಿರಂಜನ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳುದಿಲ್ಲ, ನಿಂರಜನ್ ಗೆ ಹೋಟೆಲ್ ಬುಕ್ ಮಾಡಿದ್ದೀನಿ ಎಂದು ಗಂಡನನ್ನು ಹೋಟೆಲ್ ಗೆ ಕಳುಹಿಸುತ್ತಿದ್ದಾರೆ ಜಾನಕಿ. ಭಾರ್ಗಿ ಮಾಡಿದ ಅವಮಾನದಿಂದ ರಶ್ಮಿ ಅವರು ಜಾನಕಿ ಮತ್ತು ನಿರಂಜನ್ ಬಳಿ ಕೈ ಮುಗಿದು ಕ್ಷಮೆಕೇಳಿದ್ದಾರೆ.

  English summary
  Chandu Bargi asks Niranjan about his new business venture and humiliates him for not being able to earn any income from it. He instructs Niranjan to lie to the guests about his income.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X