»   » ಜನವರಿ 16 ರಿಂದ ಕಲರ್ಸ್ ಕನ್ನಡದಲ್ಲಿ 'ರಾಧಾ ರಮಣ'

ಜನವರಿ 16 ರಿಂದ ಕಲರ್ಸ್ ಕನ್ನಡದಲ್ಲಿ 'ರಾಧಾ ರಮಣ'

Written By:
Subscribe to Filmibeat Kannada

ಸದಾ ಹೊಸತನದ, ಸೃಜನಾತ್ಮಕ ಕತೆಗಳನ್ನು ಪರಿಚಯಿಸುತ್ತಾ ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿರುವ ಕಲರ್ಸ್ ಕನ್ನಡ ವಾಹಿನಿ ಇದೀಗ ಮತ್ತೊಂದು ವಿನೂತನ ಕತೆಯನ್ನು ಪರಿಚಯಿಸುತ್ತಿದೆ, ಅದುವೇ 'ರಾಧಾರಮಣ'.

'ರಾಧಾರಮಣ' ಧಾರವಾಹಿ ಇದೇ ಜನವರಿ 16ರಿಂದ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರವರೆಗೂ ರಾತ್ರಿ 9ಗಂಟೆಗೆ ನಿಮ್ಮ ಮನೆಗೆ ಬರಲಿದೆ.

Colors Kannada Lunches New serial Radha Ramana

ಹೌದು, 'ಬಿಗ್ ಬಾಸ್ ಕನ್ನಡ 4' ರಿಯಾಲಿಟಿ ಶೋ ಸೋಮವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಆ ಜಾಗವನ್ನು ತುಂಬಲು 'ರಾಧಾ ರಮಣ' ಸಿದ್ಧವಾಗಿದೆ.

Colors Kannada Lunches New serial Radha Ramana

ಅಂದ್ಹಾಗೆ, 'ರಾಧಾ ರಮಣ' ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕತೆ. ಹುಟ್ಟುತ್ತಾ ಒಡಹುಟ್ಟಿದವರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಸದಾ ಸತ್ಯ ಎಂಬ ಕಥಾಹಂದರವನ್ನಿಟ್ಟು ಕಥೆ ಮಾಡಲಾಗಿದೆ.

Colors Kannada Lunches New serial Radha Ramana

ಕಲರ್ಸ್ ಕನ್ನಡ ಮತ್ತು ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಹೇಳುವಂತೆ ''ರಾಧಾ ರಮಣ' ಒಂದು ಧನಾತ್ಮಕ ಕತೆ. ಸಂಬಂಧಗಳು ಮೌಲ್ಯವನ್ನು ಕಳೆದುಕೊಳುತ್ತಿರುವ ಸಂದರ್ಭದಲ್ಲಿ, ಜವಾಬ್ದಾರಿಗಳಿಂದ ದೂರ ಸರಿಯುವ ಒಡಹುಟ್ಟಿದವರಿಗೊಂದು ಸೂಕ್ತ ಪಾಠವಾಗಬಲ್ಲದು ಈ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯು ಇಲ್ಲಿಯವರೆಗೂ ಫ್ರೆಶ್ ಕಂಟೆಂಟ್ ನೀಡಿದೆ. ಈಗಲೂ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ'' ಎನ್ನುತ್ತಾರೆ.

Colors Kannada Lunches New serial Radha Ramana

ರಾಧರಮಣ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಆರಾಧನ ಪಾತ್ರದಲ್ಲಿ ಶ್ವೇತಾ ಪ್ರದೀಪ್, ರಮಣ್ ಪಾತ್ರದಲ್ಲಿ ಸ್ಕಂದ್, ಸೇರಿದಂತೆ ರಕ್ಷಾ, ಸಿಬ್ಬು, ಸುಜಾತ, ಸುಚಿತ್ರಾ, ರಾಜ್ ಗೋಪಾಲ್ ಜೋಶಿ ಅಭಿನಯಿಸಿದ್ದಾರೆ.

English summary
colors kannada channel start new serial from january 16th. The Serial Name Radha Ramana. Monday onwards Radha Ramana Telecasting at 9pm Everyday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada