»   » ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!

ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!

Posted By:
Subscribe to Filmibeat Kannada

ಜೀ-ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಲಾಡಿಗಳು' ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್ ಮತ್ತು ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಮೂವರು ತೀರ್ಪುಗಾರರಾಗಿದ್ದರು. ಮೊದಲ ಆವೃತ್ತಿ ಬಿಂದಾಸ್ ಆಗಿ ಮುಗಿದಿತ್ತು.

ಅದಾದ ನಂತರ ಜಗ್ಗೇಶ್ ಅವರು 'ಕಿಲಾಡಿ ಕುಟುಂಬ' ಎಂಬ ಹೊಸ ಕಾರ್ಯಕ್ರಮ ಮುಗಿಸಿ, ಈಗ '8MM' ಸಿನಿಮಾ ಮಾಡ್ತಿದ್ದಾರೆ. ಮತ್ತೊಂದೆಡೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ರಕ್ಷಿತಾ ಜಡ್ಜ್ ಆಗಿದ್ದಾರೆ. ಯೋಗರಾಜ್ ಭಟ್ಟರು ಸಿನಿಮಾ ನಿರ್ದೇಶನದಲ್ಲಿ ತಲ್ಲಿನರಾದರು.

ಆದ್ರೀಗ, ಈ ಮೂವರು ಮತ್ತೆ ಒಟ್ಟಿಗೆ ಕಿರುತೆರೆಗೆ ಬರ್ತಿದ್ದಾರೆ. ಮತ್ತೆ ನಿಮ್ಮನ್ನ ನಗಿಸಲು ಒಂದು ಸೂಪರ್ ತಂಡವನ್ನ ಕರೆದುಕೊಂಡು ಬರ್ತಿದ್ದಾರೆ. ಯಾವ ಕಾಯಕ್ರಮ? ಯಾವಾಗನಿಂದ ಶುರು ಎಂದು ಮುಂದೆ ಓದಿ......

ಮತ್ತೆ ಬರ್ತಿದ್ದಾರೆ ಕಿಲಾಡಿಗಳು

'ಕಾಮಿಡಿ ಕಿಲಾಡಿಗಳು ಸೀಸನ್-2' ಆರಂಭವಾಗುತ್ತಿದ್ದು, ಮತ್ತೆ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಪ್ರೇಮ್ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಆಡಿಷನ್ ಆರಂಭ

'ಕಾಮಿಡಿ ಕಿಲಾಡಿಗಳು ಸೀಸನ್-2' ಆಡೀಷನ್ ಗೆ ಆಹ್ವಾನ ಮಾಡಿದ್ದು, ಆಸಕ್ತಿ ಇರುವ ಪ್ರತಿಭೆಗಳು ಈ ಬಾರಿ ಜೀ ಕನ್ನಡದ ವೇದಿಕೆ ಹತ್ತಬಹುದು.

ನೀವು ಮಾಡಬೇಕಿರುವುದು ಇಷ್ಟೇ

ನೀವು ಮಾಡಿದ ಕಾಮಿಡಿ ವಿಡಿಯೋವನ್ನ ಈ ( 7406064444 ) ನಂಬರ್ ಗೆ ವಾಟ್ಸಪ್ ಮಾಡಬೇಕು. ನಂತರ ಆಯ್ಕೆ ಆದವರು ಆಡಿಷನ್ ನಲ್ಲಿ ಭಾಗಿಯಾಗಬೇಕು.

ಆಡಿಷನ್ ಪ್ರೋಮೋ ನೋಡಿ

'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ಆಡಿಷನ್ ಗೆ ಆಹ್ವಾನ ನೀಡಿರುವ ಪ್ರೋಮೋ ಬಿಡುಗಡೆಯಾಗಿದ್ದು, ಕಲರ್ ಫುಲ್ ಆಗಿ ಗಮನ ಸೆಳೆಯುತ್ತಿದೆ.

ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಕಾರ್ಯಕ್ರಮ ಯಾವಾಗ?

ಸದ್ಯಕ್ಕೆ, ಎರಡನೇ ಆವೃತ್ತಿಯ ಆಡಿಷನ್ ಗೆ ಆಹ್ವಾನ ನೀಡಲಾಗಿದೆ. ಇನ್ನು ಸ್ಪರ್ಧಿಗಳು ಆಯ್ಕೆ ಆಗಬೇಕಿದೆ. ಮುಂದಿನ ದಿನದಲ್ಲಿ ಕಾರ್ಯಕ್ರಮ ಆರಂಭದ ಬಗ್ಗೆ ಮಾಹಿತಿ ನೀಡಲಾಗುತ್ತೆ.

English summary
Zee Kannada's Popular Programme 'Comedy khiladigalu season 2 Audition Starts.
Please Wait while comments are loading...