'ಕಾಮಿಡಿ ಕಿಲಾಡಿಗಳು' ಮುಗಿತು, ಮತ್ತೊಂದು ಹೊಸ ಶೋ ಬಂತು
Recommended Video

ಜೀ ಕನ್ನಡದ ಯಶಸ್ವಿ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು ಸೀಸನ್ 2' ಈಗಷ್ಟೇ ಮುಗಿದಿದೆ. ಎರಡನೇ ಆವೃತ್ತಿಯಲ್ಲಿ ಮಡೆನೂರು ಮನು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಎರಡನೇ ಸೀಸನ್ ಮುಗಿಯುತ್ತಿದ್ದಂತೆ ಮತ್ತೊಂದು ಹೊಸ ಶೋ ಆರಂಭವಾಗುತ್ತಿದೆ.
ಹೌದು, 'ಕಾಮಿಡಿ ಕಿಲಾಡಿಗಳು' ಎರಡು ಆವೃತ್ತಿಯ ಸ್ಪರ್ಧಿಗಳು ಒಟ್ಟಿಗೆ ಭಾಗವಹಿಸಲಿರುವ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಎಂಬ ಹೊಸ ಶೋ ಮೂಡಿ ಬರ್ತಿದೆ.
ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಪ್ರೋಮೋದಲ್ಲಿ ಶಿವರಾಜ್ ಕೆ.ಆರ್ ಪೇಟೆ, ದಿವ್ಯ, ಮಡನೂರು ಮನು ಕಾಣಿಸಿಕೊಂಡಿದ್ದಾರೆ. ಇನ್ನು ವಾರಂತ್ಯದಲ್ಲಿ ಮತ್ತೆ ಎಲ್ಲರನ್ನ ನಗಿಸಲು ಮತ್ತೆ ಕಿಲಾಡಿಗಳು ಬರ್ತಿರೋದಕ್ಕೆ ಟಿವಿ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, ಈ ಕಾರ್ಯಕ್ರಮದಲ್ಲೂ ಅದೇ ತೀರ್ಪುಗಾರರು ಮುಂದುವರೆಯಲಿದ್ದಾರೆ. ನವರಸ ನಾಯಕ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಪ್ರೇಮ್ ಹಾಗೂ ನಿರೂಪಕ ಆನಂದ್ ಅವರೇ ಇರಲಿದ್ದಾರೆ.
ಜುಲೈ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











