For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಹುಟ್ಟ ಹಬ್ಬದ ದಿನ ಅವರ ಬಗ್ಗೆ ತಿಳಿಯಿರಿ..

  By ಪ್ರಿಯಾ ದೊರೆ
  |

  ವಿಶ್ವರೂಪ್ ಎಂದೇ ಫೇಮಸ್ ಆಗಿರುವ ರಾಕೇಶ್ ಪೂಜಾರಿ ಈಗ ತಮ್ಮ ಕಾಮಿಡಿಗಳಿಂದಲೇ ಚಿರಪರಿಚಿತರಾಗಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿದ್ದರೂ, ಕಾಮಿಡಿ ಕಿಲಾಡಿಗಳು ಮೂಲಕ ಮುಖ್ಯ ವೇದಿಕೆಗೆ ಬಂದರು.

  ರಾಕೇಶ್ ಪೂಜಾರಿ ಅವರು ಹುಟ್ಟಿದ್ದು, ಬೆಳೆದಿದ್ದೆಲ್ಲವೂ ಉಡುಪಿಯಲ್ಲಿ. ಕೊಂಚ ಮುಜುಗರ ಸ್ವಾಭಾವದವರಾದ ರಾಕೇಶ್ ಅವರಿಗೆ ಸ್ಟೇಜ್ ಎಂದರೆ ಭಯವಿತ್ತಂತೆ. ಆದರೆ ಇಂದು ಕ್ಯಾಮರಾ ಮುಂದೆ ನಿಂತು ಎಷ್ಟು ಜನರಿದ್ದರೂ ಹೆದರದೇ ಆಕ್ಟ್ ಮಾಡುತ್ತಾರೆ.

  ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿನ್ನರ್ ಆಗಿದ್ದಾರೆ. ಈ ಪ್ರತಿಭಾವಂತ ಕಲಾವಿದ ರಾಕೇಶ್ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿಯೂ ಜನಪ್ರಿಯ ಸೆಲೆಬ್ರಿಟಿಯಾಗಿದ್ದಾರೆ. ಹಲವು ವರ್ಷಗಳಿಂದಲೂ ನಾಟಕ, ಟಿವಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.

  ನಾಟಕ ರಂಗದಲ್ಲಿ ಸಕ್ರಿಯರಾಗಿರುವ ರಾಕೇಶ್

  ನಾಟಕ ರಂಗದಲ್ಲಿ ಸಕ್ರಿಯರಾಗಿರುವ ರಾಕೇಶ್

  ರಾಕೇಶ್ ಪೂಜಾರಿ ಅವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ರಾಕೇಶ್ ಮನೆಯ ಬಳಿ ಹಲವು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ಚಿಕ್ಕವರಿದ್ದಾಗಿನಿಂದಲೂ ರಾಕೇಶ್ ಅವರು ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ಗಳನ್ನು ನೋಡಿ ಬೆಳೆದವರು. ಅವರೆಲ್ಲಾ ಅಷ್ಟು ಜನರ ಮುಂದೆ ಹೇಗೆ ನಟಿಸುತ್ತಾರೆ ಎಂದು ಆಶ್ಚರ್ಯ ಪಡುತ್ತಿದ್ದರಂತೆ. ಪದವಿ ಓದುವಾಗ ರಾಕೇಶ್ ಅವರು ಮೊದಲ ಬಾರಿಗೆ ಸ್ಟೇಜ್ ಹತ್ತಿದ್ದರಂತೆ. ಬಳಿಕ ಹಲವು ನಾಟಕಗಳಲ್ಲಿ ನಟಿಸಿದರಂತೆ. ರಂಗಭೂಮಿಯಲ್ಲಿ ಹಲವು ವರ್ಷ ಸಕ್ರಿಯರಾಗಿದ್ದ ರಾಕೇಶ್ ಅವರು ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

  ಒಮ್ಮೆ ರನ್ನರ್ ಅಪ್.. ನಂತರ ವಿನ್ನರ್

  ಒಮ್ಮೆ ರನ್ನರ್ ಅಪ್.. ನಂತರ ವಿನ್ನರ್

  ಇನ್ನು ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು 'ಚೈತನ್ಯ ಕಲಾವಿದರು' ನಾಟಕ ತಂಡದ ಮೂಲಕ. ಬಳಿಕ 2014ರಲ್ಲಿ ಖಾಸಗಿ ಚಾನೆಲ್ ನಲ್ಲಿ 'ಕಡ್ಲೆ ಬಜಿಲ್' ಎಂಬ ತುಳು ರಿಯಾಲಿಟಿ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು. ನಂತರ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದರು. ಸುಮಾರು 150 ಆಡಿಷನ್ ನೀಡಿದ್ದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ 'ಕಾಮಿಡಿ ಕಿಲಾಡಿಗಳು ಸೀಸನ್ 2' ಶೋಗೆ ಸೆಲೆಕ್ಟ್ ಆದರು. ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ 'ಕಾಮಿಡಿ ಕಿಲಾಡಿಗಳು ಸೀಸನ್ 3' ವಿಜೇತರು ಸಹ ಆದರು. ಇದಾದ ಬಳಿಕ ರಾಕೇಶ್ ಅವರನ್ನು ರೆಸ್ಪೆಕ್ಟ್ ನೀಡದವರೆಲ್ಲಾ, ಮರ್ಯಾದೆ ಇಂದ ಮಾತನಾಡಿಸುತ್ತಿದ್ದರಂತೆ. ಎಲ್ಲರೂ ಗೌರವಿಸುತ್ತಿದ್ದರಂತೆ. ಈ ಬಗ್ಗೆ ರಾಕೇಶ್ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

  ತುಳು ಭಾಷೆಯಲ್ಲೂ ನಟನೆ

  ತುಳು ಭಾಷೆಯಲ್ಲೂ ನಟನೆ

  ಇನ್ನು ರಾಕೇಶ್ ಅವರು ಕನ್ನಡ ಮತ್ತು ತುಳುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಕನ್ನಡದಲ್ಲಿ 'ಪೈಲ್ವಾನ್', 'ಇದು ಎಂಥಾ ಲೋಕವಯ್ಯ' ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ 'ಪೆಟ್ಕಮ್ಮಿ', 'ಅಮ್ಮೆರ್ ಪೊಲೀಸ್', 'ಪಮ್ಮನ್ನೆ ದಿ ಗ್ರೇಟ್', 'ಉಮಿಲ್', 'ಇಲ್ಲೋಕ್ಕೆಲ್' ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಕರಾವಳಿಯ ರಿಯಾಲಿಟಿ ಶೋಗಳಾದ 'ಬಲೆ ತೇಲಿಪಾಲೆ', 'ಮೇ 22', 'ಸ್ಟಾರ್', 'ತುಯಿನಾಯೆ ಪೋಯೆ' ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಕನ್ನಡದ ಕಿರುತೆರೆಯಲ್ಲಿ ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕೇಶ್

  ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕೇಶ್

  ರಾಕೇಶ್ ಪೂಜಾರಿ ಕಳೆದ ಒಂದು ವರ್ಷದಿಂದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ವಿಶ್ವರೂಪ್ ಹೆಸರಿನ ಎಜೆ ಪಿಎ ಆಗಿ ನಟಿಸುತ್ತಿದ್ದಾರೆ. ಇದರಲ್ಲಿನ ರಾಕೇಶ್ ಅವರ ಕಾಮಿಡಿಗೆ ಎಲ್ಲರೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡಿದ್ದಾರೆ. ಇನ್ನು ಇಂದು ರಾಕೇಶ್ ಅವರ ಹುಟ್ಟು ಹಬ್ಬ. ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರು, ಅಭಿಮಾನಿಗಳು ರಾಕೇಶ್ ಅವರ ಬರ್ತಡೇ ಅನ್ನು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ದಾರೆ. ಸಹ ಕಲಾವಿದರು ರಾಕೇಶ್ ಅವರಿಗೆ ವಿಶ್ ಮಾಡಿದ್ದಾರೆ.

  English summary
  Rakesh poojary life journey. theatre and film actor his plays in tulu, kannada language
  Tuesday, November 15, 2022, 20:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X