»   » ''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?

''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?

Posted By:
Subscribe to Filmibeat Kannada
ಕಾಮಿಡಿ ಟಾಕೀಸ್ ಪ್ರೋಮೋ ರಿಲೀಸ್ | ರಚಿತಾ ರಾಮ್ ಹಾಗು ಸೃಜನ್ ಲೋಕೇಶ್ ಜಡ್ಜ್ | Filmibeat Kannada

ಸೃಜನ್ ಲೋಕೇಶ್ ಅವರಿಗೆ ನಟಿ ರಚಿತಾ ರಾಮ್ ''ಕಾಲು ಎಳೆಯುವುದು ಬೇಡ'' ಎಂದಿದ್ದಾರೆ. ಆದರೆ ರಚಿತಾ ಈ ರೀತಿ ಹೇಳಿರುವುದು ರಿಯಲ್ ಆಗಿ ಅಲ್ಲ.. ಹೊಸ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ.

ರಚಿತಾ ರಾಮ್ ಮತ್ತು ಸೃಜನ್ ಇಬ್ಬರು ಈಗ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. 'ಕಾಮಿಡಿ ಟಾಕೀಸ್' ಹೆಸರಿನ ಈ ಕಾರ್ಯಕ್ರಮದಲ್ಲಿ ಈ ಇಬ್ಬರು ತೀರ್ಪುಗಾರರಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಸಖತ್ ಫನ್ನಿ ಆಗಿದೆ. 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಪ್ರೋಮೋ ನೋಡುಗರಿಗೆ ನಗು ತರಿಸುತ್ತಿದೆ. ಮುಂದೆ ಓದಿ...

ಪ್ರೋಮೋ ಬಿಡುಗಡೆ

'ಕಾಮಿಡಿ ಟಾಕೀಸ್' ಕಾರ್ಯಕ್ರಮದ ರಚಿತಾ ರಾಮ್ ಅವರ ಪ್ರೋಮೋ ಇದೀಗ ಬಿಡುಗಡೆಯಾಗಿದೆ.

ವಿಭಿನ್ನವಾಗಿದೆ

ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಇಲ್ಲಿ ಕ್ಯಾಮರಾ ಮುಂದೆ ಸೃಜನ್ ಹೊಗಳುವ ರಚಿತಾ ಕ್ಯಾಮರಾ ಆಫ್ ಆದ ಮೇಲೆ ಅವರಿನ್ನು ಬೈದಿದ್ದಾರೆ. ಈ ರೀತಿ ತುಂಬ ತಮಾಷೆಯಾಗಿ ಪ್ರೋಮೋ ಇದೆ.

ಸೃಜನ್ ಪ್ರೋಮೋ

ಈ ಹಿಂದೆ ಸೃಜನ್ ಅವರ ಇದೇ ರೀತಿಯ ಪ್ರೋಮೋ ಕೂಡ ಬಂದಿದ್ದು, ಅಲ್ಲಿ ರಚಿತಾ ರಾಮ್ ಗೆ ಸೃಜನ್ ಬೈದಿದ್ದರು.

ಸೃಜನ್ ಲೋಕೇಶ್ ರನ್ನ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

ನವೆಂಬರ್ 4 ರಿಂದ ಶುರು

ಅಂದಹಾಗೆ, ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಅವರ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ನವೆಂಬರ್ 4 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

English summary
Watch Video : Colors Kannada channel's 'Comedy Talkies' program promo is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X