»   » ಇಂದಿನಿಂದ ಶುರು ಸೃಜನ್ - ರಚಿತಾ ಜೋಡಿಯ 'ಕಾಮಿಡಿ ಟಾಕೀಸ್'

ಇಂದಿನಿಂದ ಶುರು ಸೃಜನ್ - ರಚಿತಾ ಜೋಡಿಯ 'ಕಾಮಿಡಿ ಟಾಕೀಸ್'

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಹೊಸ ಕಾರ್ಯಕ್ರಮ 'ಕಾಮಿಡಿ ಟಾಕೀಸ್' ಇಂದಿನಿಂದ ಶುರು ಆಗಲಿದೆ. 'ಮಜಾ ಟಾಕೀಸ್' ಮತ್ತು 'ಮಜಾ ಭಾರತ'ದ ನಂತರ ಕಲರ್ಸ್ ವಾಹಿನಿ ಕಡೆಯಿಂದ ಈಗ ವೀಕ್ಷಕರನ್ನು ನಗಿಸುವುದಕ್ಕೆ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ಪ್ರಾರಂಭವಾಗುತ್ತಿದೆ.

'ಕಲರ್ಸ್ ಕನ್ನಡ'ದಲ್ಲಿ ವಾರಾಂತ್ಯಕ್ಕೆ ಹಾಸ್ಯದ ರಸದೌತಣ ನೀಡುವ 'ಕಾಮಿಡಿ ಟಾಕೀಸ್'

ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದಾರೆ. ಉದಯ ಟಿವಿಯ 'ಕಿಕ್' ರಿಯಾಲಿಟಿ ಶೋ ಬಳಿಕ ಮತ್ತೆ ರಚಿತಾ ಕಿರುತೆರೆಯ ಕಾರ್ಯಕ್ರಮಕ್ಕೆ ತೀರ್ಪಗಾರರಾಗಿದ್ದಾರೆ. 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಕಾರ್ಯಕ್ರಮದ ನಿರೂಪಕರಾಗಿದ್ದು, ಮೊದಲ ಸಂಚಿಕೆಯಲ್ಲಿ ವಿಜಯ್ ಸೂರ್ಯಗೆ ಸನ್ನಿಧಿ ಆಗಿರುವ ವೈಷ್ಣವಿ ಗೌಡ ಕೂಡ ಸಾಥ್ ನೀಡಲಿದ್ದಾರೆ.

'Comedy Talkies' program will be telecasting from today

ಅಂದಹಾಗೆ, ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ 'ಕಾಮಿಡಿ ಟಾಕೀಸ್' ಪ್ರಸಾರವಾಗಲಿದೆ. 'ಕಾಮಿಡಿ ಟಾಕೀಸ್' ಒಂದು ನಗೆಯ ಸ್ಫರ್ಧೆ ಆಗಿದ್ದು, ಇದರಲ್ಲಿ ನಾಲ್ಕು ಜನರ ಒಟ್ಟು ಆರು ತಂಡಗಳಿವೆ. ಈ ತಂಡಗಳು 'ಕಾಮಿಡಿ ಟಾಕೀಸ್'ನ ಮೆಗಾ ಬಹುಮಾನಕ್ಕಾಗಿ ಸ್ಫರ್ಧಿಸುತ್ತವೆ.

English summary
Colors Kannada channel's 'Comedy Talkies' program will be telecasting from today(4th November). 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಇಂದಿನಿಂದ ಶುರು ಆಗಲಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X