India
  For Quick Alerts
  ALLOW NOTIFICATIONS  
  For Daily Alerts

  ಏನು..'ಬಿಗ್ ಬಾಸ್'ನಿಂದ ಸುದೀಪ್ ಹೊರ ನಡೆದ್ರಾ?

  By Harshitha
  |

  ಇಂದು ಮುಂಜಾನೆಯಿಂದ ಗಾಂಧಿನಗರದಲ್ಲಿ ಒಂದೇ ಗುಲ್ಲು. ಈ ಬಾರಿಯ 'ಬಿಗ್ ಬಾಸ್' ಸೀಸನ್ 3 ನಲ್ಲಿ ಸುದೀಪ್ ಇರೋದಿಲ್ಲ. 'ಬಿಗ್ ಬಾಸ್' ಶೋನಿಂದ ಸುದೀಪ್ ಹೊರ ನಡೆದಿದ್ದಾರೆ ಅಂತ.

  ನಿಜ ಹೇಳ್ಬೇಕಂದ್ರೆ, ಕಳೆದ ಕೆಲ ತಿಂಗಳಿನಿಂದ 'ಬಿಗ್ ಬಾಸ್' ಸೀಸನ್ 3 ನಲ್ಲಿ ಸುದೀಪ್ ಕಾಣಿಸಿಕೊಳ್ತಾರೋ, ಇಲ್ವೋ ಅನ್ನೋದರ ಬಗ್ಗೆ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಚರ್ಚೆ ಆಗುತ್ತಲೇ ಇದೆ. ['ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?]

  ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಸುದೀಪ್ ಈ ಬಾರಿ ಕೂಡ 'ಬಿಗ್ ಬಾಸ್' ಹೋಸ್ಟ್ ಆಗುವುದು ಕನ್ಫರ್ಮ್ ಅನ್ನುವ ಮಾಹಿತಿ ಹೊರಬಿದ್ದಿತ್ತು. ಆದ್ರೆ, ಈ ಬಗ್ಗೆ ಸುದೀಪ್ ಮಾತ್ರ ತುಟಿಕ್ ಪಿಟಿಕ್ ಅಂದಿರ್ಲಿಲ್ಲ. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?]

  ಕೌಟುಂಬಿಕ ಕಾರಣಗಳಿಂದಾಗಿ ಸುದೀಪ್ 'ಬಿಗ್ ಬಾಸ್' ಹೋಸ್ಟ್ ಮಾಡುವುದಿಲ್ಲ ಅಂತ ಕೆಲವರು ಸುದ್ದಿ ಹಬ್ಬಿಸಿದರು. ಇದಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. 'ಬಿಗ್ ಬಾಸ್' ಸೀಸನ್-3 ನಲ್ಲಿ ಸುದೀಪ್ ಮತ್ತೆ ಮಿಂಚುವುದು ಪಕ್ಕಾ. ಅದಕ್ಕೆ ಸಾಕ್ಷಿ ಸುದೀಪ್ ರವರ ಈ ಟ್ವೀಟ್.

  ''ನಾನು 'ಬಿಗ್ ಬಾಸ್' ನಿಂದ ಹೊರನಡೆದಿದ್ದೇನೆ ಅನ್ನುವ ಊಹಾಪೋಹ ಸುಳ್ಳು. ನಿನ್ನೆ ರಾತ್ರಿಯಷ್ಟೇ ವಾಹಿನಿಯವರೊಂದಿಗೆ ಚರ್ಚೆ ಮಾಡಿದ್ದೇನೆ. ಸದ್ಯದಲ್ಲೇ ಬಿಗ್ ಬಾಸ್ ಕಾರ್ಯಕ್ರಮದ ಪ್ರೊಮೋ ಶೂಟ್ ನಲ್ಲಿ ಭಾಗವಹಿಸುತ್ತೇನೆ'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

  ಅಲ್ಲಿಗೆ, 'ಬಿಗ್ ಬಾಸ್' ಸೀಸನ್ 3 ಸುತ್ತ ಹಬ್ಬಿದ್ದ ಎಲ್ಲಾ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಂತಾಗಿದೆ.

  English summary
  Kannada Actor Sudeep has taken his twitter account to clear all the speculations on him hosting 'Bigg Boss Kannada-3'. Sudeep has clearly stated that, he will host 'Bigg Boss Kannada-3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X