»   » 'ಕನೆಕ್ಷನ್' ಶೋಗೆ ಬಂದು ಕಣ್ಣೀರು ಹಾಕಿದ ಹುಚ್ಚ ವೆಂಕಟ್

'ಕನೆಕ್ಷನ್' ಶೋಗೆ ಬಂದು ಕಣ್ಣೀರು ಹಾಕಿದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಕನ್ನಡಿಗರ ಈ ವೀಕೆಂಡ್ ಗೆ ಸಿದ್ಧವಾಗಿದೆ ನಗುವಿನ ಜೊತೆ-ಜೊತೆಗೆ ಎನರ್ಜಿ ಟಾನಿಕ್ 'ಕನೆಕ್ಷನ್' ರಿಯಾಲಿಟಿ ಶೋ. ಪ್ರತೀ ವಾರ ಬೇರೆ-ಬೇರೆ ಸ್ಟಾರ್ ಸೆಲೆಬ್ರಿಟಿಗಳನ್ನು ಕರೆ ತಂದು ಪ್ರೇಕ್ಷಕರನ್ನು ನಕ್ಕು ನಗಿಸುವ 'ಕನೆಕ್ಷನ್' ಶೋ ಗೆ ಈ ವಾರ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ.

ಯುಟ್ಯೂಬ್ ಸ್ಟಾರ್ ಅಂತಾನೇ ಖ್ಯಾತಿ ಗಳಿಸಿರುವ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಈ ವಾರ 'ಕನೆಕ್ಷನ್' ಅಡ್ಡಾದಲ್ಲಿ ಪ್ರೇಕ್ಷಕರನ್ನು ಭೇಟಿ ಮಾಡಲಿದ್ದಾರೆ. ಹುಚ್ಚ ವೆಂಕಟ್ ಅವರ ಜಬರ್ದಸ್ತ್ ಆಟದ ಜೊತೆಗೆ ಹಾಡು, ಮೋಜು-ಮಸ್ತಿ ವೀಕ್ಷಕರಿಗೆ ಸಖತ್ ಮಜಾ ಕೊಡಲಿದೆ.[ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!]

ಬರೀ ಮಾತು ಮತ್ತು ವಿವಾದಗಳಿಂದ ಖ್ಯಾತಿ ಗಳಿಸಿರುವ ಹುಚ್ಚ ವೆಂಕಟ್ ಅವರು 'ಕನೆಕ್ಷನ್' ಶೋನಲ್ಲಿ ಮಾತ್ರ ವಿಭಿನ್ನವಾಗಿ ಕಂಡುಬಂದಿದ್ದಾರೆ. ಇಲ್ಲಿ ವಿವಾದ ಮಾಡುವ ಬದಲು, ವೆಂಕಟ್ ಅವರು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ಚಿತ್ರರಂಗದ ಸುದೀರ್ಘ ಪಯಣ, ಸಿನಿಮಾಗಳ ಲಿಂಕ್ ಜೊತೆ ಸಂಬಂಧಗಳ ಸಿಂಕ್ ನೆನೆದು ಒಂದು ಕ್ಷಣ ಹುಚ್ಚ ವೆಂಕಟ್ ಅವರು ಭಾವುಕರಾದರು. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

ಹೊಸ ರೂಪ ಕೊಟ್ಟ ವೆಂಕಟ್

'ಕನೆಕ್ಷನ್' ಎಂಬುದು ಸಂಬಂಧವಿಲ್ಲದ ಸಂಬಂಧದ ಚಿತ್ರಗಳ ಆಟ ಆದರೆ ಫೈರಿಂಗ್ ಸ್ಟಾರ್ ವೆಂಕಟ್ ಇದಕ್ಕೆ ಹೊಸ ರೂಪ ಕೊಟ್ಟಿದ್ದಾರೆ.['ಬೆಣ್ಣೆ ದೋಸೆ' ತಿಂದ್ರಾ, ನಮ್ ಹುಚ್ಚ ವೆಂಕಟ್!]

ಮಿಮಿಕ್ರಿ ಮಾಡಿದ ವೆಂಕಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿರುವ ವೆಂಕಟ್ ಅವರಂತೆ ಮಿಮಿಕ್ರಿ ಮಾಡಿದ್ದಾರೆ. ಜೊತೆಗೆ ತಾವೇ ಹಾಡಿದ 'ಹುಟ್ಟಿದ ಊರನು ಬಿಟ್ಟು ಬಂದ ಮೇಲೆ' ಹಾಡನ್ನು, 'ಕನೆಕ್ಷನ್' ವೇದಿಕೆಯಲ್ಲಿ ಮತ್ತೆ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಮಾತ್ರವಲ್ಲದೇ ಅವರ ಹೊಸ ಚಿತ್ರ 'ತಿಕಲ'ದ ಒಂದು ಭರ್ಜರಿ ಡೈಲಾಗ್ ಹೊಡೆದು ಎಲ್ಲರನ್ನು ರಂಜಿಸಿದ್ದಾರೆ.

ಜಬರ್ದಸ್ತ್ ಡ್ಯಾನ್ಸ್ ಮಾಡಿದ ವೆಂಕಟ್

ಫೈರಿಂಗ್ ಸ್ಟಾರ್ ವೆಂಕಟ್ ಚೆಂದುಳ್ಳಿ ಚೆಲುವೆ ಶ್ರಾವ್ಯಾ ಅವರ ಜೊತೆಗೂಡಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ದೀಪಿಕಾದಾಸ್ ರವರು ತುಂಬ ಬುದ್ದಿವಂತಿಕೆಯಿಂದ ಆಡಿ ಸೈ ಎನಿಸಿಕೊಂಡರು. ಕರ್ನಾಟಕದ ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ ಸಿಂಧು ಲೋಕನಾಥ ಮುದ್ದು ಮುದ್ದಾದ ಮಾತುಗಳಿಂದ ನಕ್ಕು ನಲಿಸಿದ್ರು.[ಚಿತ್ರಪಟ: ಸ್ಟಾರ್ ಸುವರ್ಣದಲ್ಲಿ 63ನೇ 'ಫಿಲ್ಮ್ ಫೇರ್' ಪ್ರಶಸ್ತಿಯ ಝಲಕ್]

ಗೌರಿ-ಗಣೇಶ ಹಬ್ಬದ ಸ್ಪೆಷಲ್

ಭಾನುವಾರದ ಸಂಚಿಕೆಯಲ್ಲಿ 'ಗಣಪತಿ ಬಪ್ಪ ಮೋರೆಯಾ' ಎಂಬ ಹೊಸ ಆಟವನ್ನು ಸ್ಟಾರ್ ಗಳು ಶುರು ಮಾಡಿದ್ದು, ಯಾವ ಸ್ವಾರ್ ಬಂದು, ಯಾವ ರೀತಿ ಗಣೇಶ ಹಬ್ಬ ಆಚರಿಸಿದ್ರು ಅಂತ ಕಾದು ನೋಡಬೇಕಾಗಿದೆ.

ತಪ್ಪದೇ ನೋಡಿ

ಕರ್ನಾಟಕದ ಹೊಚ್ಚ ಹೊಸ ವಿಭಿನ್ನ ಸ್ಟಾರ್ಸ್ ಗಳ 'ಫನ್ ಫೀಲ್ಡ್ ಶೋ 'ಕನೆಕ್ಷನ್' ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ನಿಮ್ಮ ನೆಚ್ಚಿನ ಸ್ವಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
One of Kannada’s film industry’s most popular personalities, Huchha Venkat is going to make a grand entry in this week’s 'Connexion'. Known for his powerful and distinguished dialogues. Huchha Venkat is going to unleash his hidden and unseen talent in front of the audiences. 'Connexion' will be on-air every Saturday and Sunday at 7:30 PM on Star Suvarna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada