For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯಲ್ಲಿ ಆತ್ಮಹತ್ಯೆ ಯತ್ನ!

  |

  ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಮನೆಯ ಒಳಗೇ ನಡೆದಿದೆ.

  ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿರುವ ಪಂಜಾಬಿ ಗಾಯಕಿ ಅಫ್ಸಾನಾ ಬಿಗ್‌ಬಾಸ್ ಮನೆಯ ಅಡುಗೆ ಮನೆಯಲ್ಲಿ ಚಾಕು ಹಿಡಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

  ಚಾಕು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಅಫ್ಸಾನಾರನ್ನು ಮನೆಯ ಇತರೆ ಸ್ಪರ್ಧಿಗಳು ಹಿಡಿದು ಸಮಾಧಾನಗೊಳಿಸಿದ್ದಾರೆ. ಆದರೆ ಅಫ್ಸಾನಾ ಅಂದು ಆಡಿದ ರೀತಿ ಮನೆಯ ಇತರ ಸದಸ್ಯರಿಗೆ ತೀವ್ರ ಆತಂಕ ತಂದಿದೆ. ಜೊತೆಗೆ ಆಯೋಜಕರಿಗೆ ಆತಂಕ ತಂದಿದೆ ಹಾಗಾಗಿ ಅಫ್ಸಾನಾರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

  ಆದರೆ ಅಫ್ಸಾನಾ ಮನೆಯಿಂದ ಹೊರಗೆ ಹೋಗಲು ಸಿದ್ಧರಿಲ್ಲ. ತಾನು ಮನೆಯಿಂದ ಹೊರಗೆ ಹೋಗುವುದಿಲ್ಲ ಎಂದು ಅಫ್ಸಾನಾ ಕಿರುಚಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಅಫ್ಸಾನಾರನ್ನು ಬಿಗ್‌ಬಾಸ್ ಆಯೋಜಕರು ಮನೆಯಿಂದ ಹೊರಗೆ ಕಳಿಸಿದ್ದಾರೆ.

  ಆದರೆ ಪಟ್ಟು ಬಿಡದ ಅಫ್ಸಾನಾ ಬಿಗ್‌ಬಾಸ್ ಕಚೇರಿಗೆ ಹೋಗಿ ಆಯೋಕರನ್ನು ಭೇಟಿ ಮಾಡಿ ತಾವು ಮರಳಿ ಶೋಗೆ ಹೋಗಬೇಕು ಎಂದು ಒತ್ತಾಯಿಸಿದ್ದಾರೆ. ಆಯೋಜಕರು ಕೆಲವು ಷರತ್ತುಗಳ ಮೂಲಕ ಅಫ್ಸಾನಾರನ್ನು ಮತ್ತೆ ಮನೆಗೆ ಕಳುಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಖಾತ್ರಿಯಾಗಿಲ್ಲ.

  ಅಫ್ಸಾನಾರಿಗೆ ಬಿಗ್‌ಬಾಸ್ ಮನೆಯಲ್ಲಿದ್ದಾಗ ಪ್ಯಾನಿಕ್ ಅಟ್ಯಾಕ್ ಬಂದಿತ್ತು ಎನ್ನಲಾಗುತ್ತಿದೆ. ವೈದ್ಯಕೀಯ ತಂಡವು ಅಫ್ಸಾನಾರನ್ನು ಪರೀಕ್ಷೆ ಸಹ ಮಾಡಿತು.

  ಅಫ್ಸಾನಾ ಆತ್ಮಹತ್ಯೆ ಬೆದರಿಕೆ ಹಾಗೂ ಅನಿಯಂತ್ರಿತ ವರ್ತನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಮಾನಸಿಕ ಸ್ಥಿತಿಯ ಬಗ್ಗೆ ಚರ್ಚೆಗಳು ಎದ್ದಿವೆ. ಮಾಜಿ ಬಿಗ್‌ಬಾಸ್ ಸ್ಪರ್ಧಿಗಳಾದ ರಶ್ಮಿ ದೇಸಾಯಿ, ಶೆಫಾಲಿ ಜೆರಿವಾಲಾ, ಹಿಮಾಂಶಿ ಖುರಾನಾ ಹಾಗೂ ಇನ್ನೂ ಕೆಲವರು ಸಹ ಈ ಬಗ್ಗೆ ಮಾತನಾಡಿದ್ದು, ಸ್ಪರ್ಧಿಗಳು ಮಾನಸಿಕವಾಗಿ ಬಹಳ ಒತ್ತಡದ ಪರಿಸ್ಥಿತಿಯಲ್ಲಿ ಬಿಗ್‌ಬಾಸ್ ಮನೆಯ ಒಳಗೆ ಬದುಕುತ್ತಿರುತ್ತಾರೆ. ಇಂಥಹಾ ಸೂಕ್ಷ್ಮ ವಿಷಯಗಳನ್ನು ಟಿವಿಗಳಲ್ಲಿ ತೋರಿಸುವ ಅವಶ್ಯಕತೆಯಾದರೂ ಏನಿದೆ. ಇದಲ್ಲದೆ ಶೋ ನೋಡುವ ಪ್ರೇಕ್ಷಕರು ಆಯೋಜಕರು ತೋರಿಸುವ ಕೆಲವು ತುಣುಕುಗಳನ್ನು ನೋಡಿ ಸ್ಪರ್ಧಿಗಳ ವ್ಯಕ್ತಿತ್ವವನ್ನು ಜಡ್ಜ್‌ ಮಾಡುತ್ತಿರುತ್ತಾರೆ ಇದು ಸಹ ಒಂದು ರೀತಿಯ ಹಿಂಸೆ'' ಎಂದಿದ್ದಾರೆ.

  ''ನಾನು ಇದ್ದ ಸೀಸನ್‌ನಲ್ಲಿ ನನ್ನ ಸಹಸ್ಪರ್ಧಿಗಳೇ ಬಹಿರಂಗವಾಗಿ ನನ್ನ ವ್ಯಕ್ತಿತ್ವದ ಬಗ್ಗೆ, ನನ್ನ ಖಾಸಗಿ ವಿಷಯಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಸಲ್ಮಾನ್ ಖಾನ್ ಸಹ ಸ್ವತಃ ಇತರೆ ಸ್ಪರ್ಧಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ರಿಯಾಲಿಟಿ ಶೋನಲ್ಲಿ ಕೆಲವು ಬಾರಿ ಅತಿರೇಕದ ವರ್ತನೆಗಳನ್ನು ಕೆಲವು ಸ್ಪರ್ಧಿಗಳು ಮಾಡುತ್ತಾರೆ. ಅದು ಇತರೆ ಸ್ಪರ್ಧಿಗಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ'' ಎಂದಿದ್ದಾರೆ.

  COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

  English summary
  Contestant Afsana Khan evicted from Hindi Bigg Boss show due her behavior. She threatened to kill her self.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X