For Quick Alerts
  ALLOW NOTIFICATIONS  
  For Daily Alerts

  ಕೋಟ್ಯಧಿಪತಿಯಲ್ಲಿ ಪುನೀತ್ ಕಾಲೆಳೆದ ರವಿಚಂದ್ರನ್

  |

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಗೇಮ್ ಶೋನಲ್ಲಿ ರವಿಚಂದ್ರನ್ ಭಾಗವಹಿಸಲಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಓದಿದ್ದೀರಿ. ಆದರೆ ಆ ರಸನಿಮಿಷಗಳನ್ನು ಟಿವಿಯಲ್ಲಿ ಎಂದು ನೋಡಲಿದ್ದೀರಿ ಎಂಬ ಮಾಹಿತಿ ಬಹಿರಂಗವಾಗಿರಲಿಲ್ಲ.

  ಪವರ್ ಸ್ಟಾರ್ ಪುನೀತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜುಗಲ್ಬಂಧಿಯ ಈ ವಿಶೇಷ ಸಂಚಿಕೆಯು ಇದೇ ಮಂಗಳವಾರ, ಅಂದರೆ ಜೂನ್ 05, 2012 ರಂದು ಪ್ರಸಾರವಾಗಲಿದೆ. ಇದು ಐವತ್ತನೇ ವಿಶೇಷ ಕಂತು. ಈ ಮೂಲಕ ರವಿಚಂದ್ರನ್ 'ಕನ್ನಡದ ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸುತ್ತಿರುವ ಮೂರನೇ ಸೆಲೆಬ್ರಿಟಿ ಎನಿಸಿಕೊಳ್ಳಲಿದ್ದಾರೆ.

  ಇದಕ್ಕೂ ಮೊದಲು ಗೋಲ್ಡನ್ ಗರ್ಲ್ ರಮ್ಯಾ ಸಹ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದರು. ಇನ್ನು ಎರಡನೇ ಸೆಲೆಬ್ರಿಟಿಯಾಗಿ ಭಾಗವಹಿಸಿದ್ದವರು ಹಿರಿಯ ಪಂಚಭಾಷಾ ತಾರೆ ಲಕ್ಷ್ಮಿ. ಅಣ್ಣಾವ್ರ 84ನೇ ಹುಟ್ಟುಹಬ್ಬದ ನಿಮಿತ್ತ ಏಪ್ರಿಲ್ 24, 2012 ರಂದು ಲಕ್ಷ್ಮಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

  ಸೋಮವಾರದಿಂದ ಗುರುವಾರದವರೆಗೆ ಪ್ರತಿ ರಾತ್ರಿ 8 ರಿಂದ 9.30ರ ತನಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಇದೀಗ ಕ್ರೇಜಿಸ್ಟಾರ್ ಆಗಮಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡಿದೆ. ಏಕೆಂದರೆ ರವಿಚಂದ್ರನ್ ಸಖತ್ ಜಾಲಿ, ಸಖತ್ ಕ್ರೇಜಿ.

  ಈ ಕೋಟ್ಯಧಿಪತಿ ಐವತ್ತನೇ ವಿಶೇಷ ಕಂತಿಗಾಗಿ ರವಿಚಂದ್ರನ್ ಚೆನ್ಯೈಗೆ ಹೋಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ 'ಸ್ಪರ್ಧೆಯುದ್ದಕ್ಕೂ ರವಿಚಂದ್ರನ್, ನಿರೂಪಕ ಪುನೀತ್ ಅವರನ್ನು ಕಾಲೆಳಿದ್ದಾರೆ, ಗೇಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪುನೀತ್ ಅವರನ್ನು ಸಾಕಷ್ಟು ಬಾರಿ ಛೇಡಿಸಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ' ಎಂಬುದು ಅಲ್ಲಿ ಭಾಗವಹಿಸಿ ಬಂದವರ ಅನಿಸಿಕೆ.

  ರವಿಚಂದ್ರನ್ ರಸಿಕ. ಅವರ ರಸಿಕತೆ ಬಗ್ಗೆ ಗೊತ್ತಲ್ಲದವರು ಇರಲಿಕ್ಕಿಲ್ಲ. ಈ ಹಿಂದೆ ಪುನೀತ್ ಜೊತೆ ಮಾತನಾಡುತ್ತಾ "ಕನ್ನಡದ ಕೋಟ್ಯಾಧಿಪತಿಗೆ ಬಂದಿದ್ದ ರಮ್ಯಾಗೆ ಮಾತು ಮಾತಿನಲ್ಲೇ ಕಣ್ಣು ಹೊಡೆದದ್ದು, ರೇಗಿಸಿದ್ದು ಎಲ್ಲಾ ನೋಡ್ದೆ"ಎಂದು ತಮಾಷೆಯಾಗಿ ರೇಗಿಸಿ ತಮ್ಮ 'ನೋಡ್ದೆ ನೋಡ್ದೆ ನೋಡಬಾರದ್ದನ್ನ ನೋಡ್ದೆ' ಎಂಬ ತಮ್ಮದೇ ಹಾಡನ್ನು ನೆನಪಿಸಿದ್ದರು. ಈಗ ಸ್ವತಃ ಅವರೇ ಶೋನಲ್ಲಿ ಭಾಗವಹಿಸುತ್ತಿರುವಾಗ ಪುನೀತ್ ಅವರನ್ನು ಅದೆಷ್ಟು ಗೋಳುಹುಯ್ದುಕೊಂಡಿದ್ದಾರೋ!

  ತಮ್ಮ ಸಿನಿಮಾಯಾನದ ಸಾಕಷ್ಟು ನೆನಪುಗಳನ್ನು, ಅನುಭವಗಳನ್ನು ಈ ವೇದಿಕೆಯಲ್ಲಿ ರವಿಚಂದ್ರನ್ ಹಂಚಿಕೊಂಡಿದ್ದಾರಂತೆ. ಜೊತೆಗೆ, ತಮ್ಮ ತಂದೆ ವೀರಾಸ್ವಾಮಿ, ತನ್ನ ಬೆಳವಣಿಗೆಗೆ ಹೇಗೆ ಅಕ್ಷರಶಃ ಬೆನ್ನೆಲುಬಾಗಿ ನಿಂತರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರಂತೆ ಈ ನಮ್ಮ ಕ್ರೇಜಿಸ್ಟಾರ್.

  ಪುನೀತ್ ಹಾಗೂ ರವಿಚಂದ್ರನ್ ಜುಗಲ್ಬಂದಿಯ ಈ ಕಾರ್ಯಕ್ರಮವನ್ನು ನೋಡಲು ಕನ್ನಡದ ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲ, ಸಿನಿಪ್ರೇಕ್ಷಕರೂ ಕಾದುಕುಳಿತಿದ್ದಾರೆ. ಇನ್ನೇನು ನಾಳೆ 8 ಗಂಟೆಗೆ ಟಿವಿ ಮುಂದೆ ಕುಳಿತರಾಯಿತು, ಕ್ರೇಜಿಸ್ಟಾರ್ ಹಾಗೂ ಪವರ್ ಸ್ಟಾರ್ ಅವರ ಐವತ್ತರ ವಿಶೇಷ ಸಂಚಿಕೆ ಹಬ್ಬವನ್ನು ನೋಡಬಹುದು. (ಒನ್ ಇಂಡಿಯಾ ಕನ್ನಡ)

  English summary
  Crazy Star Ravichandran participated as celebrity guest in Puneet Rajkumar’s quiz show Kannadada kotyadhipati. This 50th Special program telecasts on Tomorrow, June 05, 2012. Sources are revield that Ravichandran and Puneet Rajkumar combined this show has lot of Fun and Joy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X