ಎಲ್ಲ ಕಲಾವಿದರಿಗೂ 'ಟೀಕೆ' ಇರಲೇಬೇಕು ಎಂದ ನಟಿ ಐಂದ್ರಿತಾ ರೇ.!

By Harshitha

'ಬಾಸು... ನಮ್ ಬಾಸು....' ಅಂತ ತಮ್ಮ ಇಷ್ಟದ ನಟರನ್ನ 'ಆರಾಧ್ಯ ದೈವ'ನಂತೆ ಪೂಜೆ ಮಾಡುವ ಅಭಿಮಾನಿಗಳಿಗೆ, ತಮ್ಮ ಬಾಸ್ ಕಾಲನ್ನ ಯಾರೇ ಎಳೆದರೂ ಇಷ್ಟವಾಗುವುದಿಲ್ಲ. ಅಂಥದ್ರಲ್ಲಿ, ''ಕಲಾವಿದರಿಗೆ 'ಟೀಕೆ' ಬಹುಮುಖ್ಯ'' ಅಂತ ಕಾಮೆಂಟ್ ಮಾಡಿದ್ದಾರೆ ನಟಿ ಐಂದ್ರಿತಾ ರೇ.

'ಕಲರ್ಸ್ ಸೂಪರ್ ವಾಹಿನಿ'ಯಲ್ಲಿ ಪ್ರಸಾರ ಅಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಐಂದ್ರಿತಾ ರೇ, ''ಎಲ್ಲ ಕಲಾವಿದರಿಗೂ ಟೀಕೆ ಇರಲೇಬೇಕು'' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

''Criticism is required for all Actors'' says Kannada Actress Aindrita Ray

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ವೈಯುಕ್ತಿಕ ಜೀವನ, ಗಾಸಿಪ್, ವಿವಾದಗಳ ಬಗ್ಗೆ ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆಗಳನ್ನು ಕೇಳಿದ್ರೆ, ಇಲ್ಲಿಯವರೆಗೂ ಮುಜುಗರ ಪಟ್ಟುಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಉತ್ತರ ಕೊಟ್ಟಿದ್ದಾರೆ.

'ದಿಗಂತ್ ಜೊತೆಗಿನ ಸಂಬಂಧ'ವನ್ನೂ ಮುಚ್ಚು ಮರೆ ಇಲ್ಲದೇ ನಟಿ ಐಂದ್ರಿತಾ ರೇ ಒಪ್ಪಿಕೊಂಡಿದ್ದು ಇದೇ ಶೋನಲ್ಲಿ.!

ಹೀಗಾಗಿ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಕೊನೆಗೆ ''ಈ ತರಹ ಶೋಗಳು ಇನ್ನೂ ಬರಬೇಕು. ಯಾಕಂದ್ರೆ, ತುಂಬಾ ಡೈರೆಕ್ಟ್ ಪ್ರಶ್ನೆಗಳನ್ನು ಕೇಳುತ್ತೀರಾ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಡಿಪ್ಲೋಮ್ಯಾಟಿಕ್ ಆಗಿ ಮಾತನಾಡಲು ಟ್ರೈ ಮಾಡುತ್ತಾರೆ. ಇಂತಹ ಶೋಗಳಿಂದ ಎಲ್ಲರೂ ಓಪನ್ ಅಪ್ ಆಗಲಿ. ಹಾಗೂ, ಎಲ್ಲಾ ಕಲಾವಿದರಿಗೂ ಟೀಕೆ (Criticism) ತುಂಬಾ ಮುಖ್ಯ. ಎಲ್ಲವನ್ನೂ ಪಾಸೀಟಿವ್ ಆಗಿ ಎಲ್ಲರೂ ತೆಗೆದುಕೊಳ್ಳುತ್ತಾರೆ ಅಂತ ನಾನು ಭಾವಿಸುತ್ತೇನೆ'' ಅಂತ ಹೇಳಿದರು.

More from Filmibeat

English summary
''Criticism is required for all Actors'' says Kannada Actress Aindrita Ray in Colors Super Channel's popular show 'Super Talk Time'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X