For Quick Alerts
  ALLOW NOTIFICATIONS  
  For Daily Alerts

  ಸಿ ಎಸ್ ಪಿಗೆ ಉಡುಗೊರೆ ಕೊಟ್ಟು ಕೆಲಸ ಬಿಟ್ಟು ಹೋದ ಹರಿಕುಮಾರ್

  |

  ನಿರಂಜನ್ ಸಹೋದರಿ ಸಂಜನಾ ಪತಿಯ ಏಳೆನೆ ವರ್ಷದ ತಿಥಿ ಕಾರ್ಯಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖದಲ್ಲಿಯೆ ಸಂಜನಾ ಅನಾಥಾಶ್ರಮದ ಮಕ್ಕಳಿಗೆ ಪುಸ್ತಗಳನ್ನು ವಿತರಿಸುತ್ತಿದ್ದಾರೆ. ಗಂಡನ ಕಳೆದುಕೊಂಡು ಮನಸ್ಸಿನಲ್ಲಿ ಅಘಾದ ನೋವು ಇಟ್ಟುಕೊಂಡು ಯಾತನೆ ಅನುಭವಿಸುತ್ತಿರುವ ಸಂಜನಾ, ಮನೆಯವರ ಮೇಲೆ ರೇಗಾಡಿ ನೋವನ್ನು ಹೊರಹಾಕುತ್ತಿದ್ದಾರೆ.

  ಜಾನಕಿ ಮೇಲೆಯು ಕೊಪ ಮಾಡಿಕೊಂಡಿದ್ದ ಸಂಜನಾ ನಂತರ ಜಾನಕಿ ಬಳಿ ಹೋಗಿ ಕ್ಷಮೆ ಕೇಳಿ ತನ್ನ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ. ಈ ಬೆಳವಣಿಗೆಯ ನಡುವೆ ಹರಿಕುಮಾರ್ ವರ್ತನೆ ನೋಡಿ ಸಿ ಎಸ್ ಪಿ ಅವರಿಗೆ ಶಾಕ್ ಆಗಿದೆ. ಸೂಟು ಬೂಟು ಹಾಕಿಕೊಂಡು ಆಪೀಸ್ ಗೆ ಎಂಟ್ರಿ ಕೊಟ್ಟಿದ್ದಲ್ಲದೆ ಮನೆಯವರಿಗೆಲ್ಲ ಗಿಫ್ಟ್ ಕೂಡ ನೀಡಿದ್ದಾರೆ.

  ಪತಿಯ ಏಳನೆ ವರ್ಷದ ತಿಥಿ ಕಾರ್ಯದಲ್ಲಿ ಸಂಜನಾ

  ಪತಿಯ ತಿಥಿ ಕಾರ್ಯಕದಲ್ಲಿರುವ ಸಂಜನಾ ಅವರಿಗೆ ಎರಡನೆ ಮದುವೆ ಮಾಡಿಸುವಂತೆ ಹೇಳುತ್ತಿದ್ದಾರೆ ಜಾನಕಿ. ಜಾನಕಿಯ ಮಾತು ಕೇಳಿ ನಿರಂಜನ್ ಶಾಕ್ ಆಗಿದ್ದಾರೆ. ಸಂಜನಾ ಎರಡನೆ ಮದುವೆಗೆ ಒಪ್ಪಿಕೊಳ್ಳುತ್ತಾರಾ? ಹರಿಕುಮಾರ್ ವರ್ತನೆ ಯಾಕೆ ವಿಚಿತ್ರವಾಗಿದೆ? ಮುಂದೆ ಓದಿ..

  ಹರಿ ಕುಮಾರ್ ನೋಡಿ ಸಿ ಎಸ್ ಪಿ ಶಾಕ್

  ಹರಿ ಕುಮಾರ್ ನೋಡಿ ಸಿ ಎಸ್ ಪಿ ಶಾಕ್

  ಹರಿಕುಮಾರ್ ಸೂಟ್ ಧರಿಸಿ ಸಿ ಎಸ್ ಪಿ ಆಫೀಸ್ ಗೆ ಬಂದಿದ್ದಾರೆ. ಆಫೀಸ್ ಗೆ ಒಂದಿಷ್ಟು ದಿನಗಳು ಬರಲು ಸಾಧ್ಯವಿಲ್ಲ ಎಂದು ಹೇಳಿ ರಜೆ ಕೇಳಿದ್ದ ಹರಿಕುಮಾರ್, ದಿಢೀರನೆ ಟಿಪ್ ಟಾಪ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಸಿ ಎಸ್ ಪಿ ಅವರಿಗೆ ಪೆನ್ನನ್ನು ಗಿಫ್ಟಾಗಿ ನೀಡಿದ್ದಾರೆ. ಸಿ ಎಸ್ ಪಿ ಅವರ ಹುಟ್ಟುಹಬ್ಬಕ್ಕೆ 20 ದಿನಗಳ ಮೊದಲೆ ಗಿಫ್ಟ್ ನೀಡಿ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೆ ಗಿಫ್ಟ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಹೇಳಿದ್ದಾರೆ.

  ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ'

  ದುಬಾರಿ ಪೆನ್ನು ನೀಡಿದ ಹರಿಕುಮಾರ್

  ದುಬಾರಿ ಪೆನ್ನು ನೀಡಿದ ಹರಿಕುಮಾರ್

  ಬೆಳ್ಳಿ ಮತ್ತು ಬಂಗಾರದಿಂದ ಮಾಡಿಸಿದ ಪೆನ್ನನ್ನು ಹರಿಕುಮಾರ್ ಸಿ ಎಸ್ ಪಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಹಾಗಾಗಿ ಈ ಪೆನ್ನನ್ನು ಜೋಪಾನವಾಗಿ ಇಡುವಂತೆ ಹೇಳುತ್ತಿದ್ದಾರೆ. ಹರಿಕುಮಾರ್ ನೀಡಿದ ಗಿಫ್ಟ್ ನೋಡಿ ಒಮ್ಮೆ ಶಾಕ್ ಆಗಿದ್ದಾರೆ ಸಿ ಎಸ್ ಪಿ. ಅಲ್ಲದೆ ಹುಟ್ಟುಹಬ್ಬದ ಸಮಯದಲ್ಲಿ ಇರುವುದಲ್ಲ ಎಂದು ಹೇಳುತ್ತಿದ್ದಾರೆ. ಹರಿಕುಮಾರ್ ವಿಚಿತ್ರ ವರ್ತನೆ ಗಮನಿಸಿ ಎಲ್ಲಿಗೆ ಹೋಗುತ್ತೀರಿ ಎಂದು ಕೇಳಿದ್ದಕ್ಕೆ ಬೇರೆ ಊರಿಗೆ ಹೋಗುವುದಾಗಿ ಹೇಳಿದ್ದಾರೆ ಹರಿಕುಮಾರ್.

  ಭಾವುಕರಾಗಿ ಮಾತನಾಡಿದ ಹರಿಕುಮಾರ್

  ಭಾವುಕರಾಗಿ ಮಾತನಾಡಿದ ಹರಿಕುಮಾರ್

  ಸಿ ಎಸ್ ಪಿ ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ಹರಿಕುಮಾರ್. ಆಫೀಸ್ ಬಿಟ್ಟು ಹೋಗುವ ಮೊದಲು ಸಿ ಎಸ್ ಪಿ ಬಳಿ ಬಾವುಕವಾಗಿ ಮಾತನಾಡಿದ್ದಾರೆ. "ನನಗೆ ತುಂಬ ಕಲಿಸಿದ್ದೀರಿ. ನನ್ನನ್ನು ಸಹಿಸಿಕೊಂಡು ಹೋಗಿದ್ದೀರಿ, ಕಷ್ಟದಲ್ಲಿದ್ದಾಗ ತುಂಬಾ ಸಹಾಯ ಮಾಡಿದ್ದೀರಾ" ಎಂದು ಸಿ ಎಸ್ ಪಿ ಎದುರು ಕಣ್ಣೀರಾಕಿದ್ದಾರೆ ಹರಿಕುಮಾರ್. ಅಲ್ಲದೆ ಶಾಮಲ ಅವರ ಬಳಿಯು ಮಾತನಾಡಿ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಸುಂದರ್ ಮೂರ್ತಿಗೆ ಮ್ಯಾಜಿಷಿಯನ್ ಟೋಪಿ ನೀಡಿದ್ದಾರೆ.

  ಜಾನಕಿ ಸಹಾಯ ಕೇಳಿದ ಇಂಚರಾ

  ಜಾನಕಿ ಸಹಾಯ ಕೇಳಿದ ಇಂಚರಾ

  ಜಾನಕಿ ಬಳಿ ಬಂದು ಇಂಗ್ಲೀಷ್ ನಲ್ಲಿ ಪ್ರಬಂದ ಬರೆಯಬೇಕು ಸಹಾಯ ಮಾಡಿ ಎಂದು ಅಜ್ಜಿಯ ಬಳಿ ಕೇಳಿಕೊಳ್ಳುತ್ತಿದ್ದಾರೆ ಪುಟ್ಟ ಇಂಚರಾ. ಆದ್ರೆ ದೇವಕಿ ಜಾನಕಿ ಬಳಿ ಹೇಳಿಸಿಕೊಳ್ಳುವಂತೆ ಕಳುಹಿಸಿದ್ದಾರೆ. ಜಾನಕಿ ಅಪ್ಪನ ಬಗ್ಗೆ ಇರುವ ಪ್ರಬಂದ ಎಂದು ಕೇಳಿ ಭಾವುಕರಾಗಿದ್ದಾರೆ. ನಂತರ ಅಪ್ಪನ ಬಗ್ಗೆ ಪ್ರಬಂದ ಬರೆಯಲು ಸಹಾಯ ಮಾಡಿದ್ದಾರೆ ಜಾನಕಿ. ಅಪ್ಪನ ಬಗ್ಗೆ ಜಾನಕಿ ಹೇಳಿದನ್ನು ಕೇಳಿ ಇಂಚರಾ ಅಪ್ಪನನ್ನು ನೋಡಬೇಕು ಎನ್ನುವ ಆಸೆಯನ್ನು ಹೇಳಿಕೊಳ್ಳುತ್ತಿದ್ದಾರೆ.

  ಚಿರಂತನ್ ಮೋಸ ಮಾಡುತ್ತಿದ್ದಾರೆ ಎಂದು ಭಾರ್ಗಿಗೆ ಗೊತ್ತಾಗಿ ಬಿಡುತ್ತಾ?

  ಸಂಜನಾ ಅವರಿಗೆ ಎರಡನೆ ಮದುವೆ

  ಸಂಜನಾ ಅವರಿಗೆ ಎರಡನೆ ಮದುವೆ

  ಸಂಜನಾ ಅವರು ಪತಿಯನ್ನು ಕಳೆದುಕೊಂಡು ಏಳು ವರ್ಷಗಳಾಗಿವೆ. ಇಷ್ಟುವರ್ಷಗಳು ಏಕಾಂಗಿಯಾಗಿ ಜೀವನ ಮಾಡುತ್ತಿದ್ದ ಸಂಜನಾಗೆ ಮದುವೆ ಮಾಡುವಂತೆ ಜಾನಕಿ ನಿರಂಜನ್ ಬಳಿ ಹೇಳಿದ್ದಾರೆ. ಜಾನಕಿಯ ಮಾತು ನಿರಂಜನ್ ಒಮ್ಮೆ ಶಾಕ್ ಆಗಿದ್ದಾರೆ. ಈ ವಿಚಾರವನ್ನು ಸಂಜನಾ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಗೊಂದಲದಲ್ಲಿದ್ದಾರೆ ನಿರಂಜನ್. ಜಾನಕಿಯೆ ಸಂಜನಾ ಅವನ್ನು ಮದುವೆಗೆ ಒಪ್ಪಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸಂಜನಾ ಎರಡನೆ ಮದುವೆಗೆ ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

  English summary
  CSP is surprised to see Hari Kumar groomed well and enquires him. To his utter shock, he reveals that he is resigning from his job and is leaving the city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X