»   » ಎರಡನೇ ಸಲ ಮದುವೆಯಾದ ಲವ್ಲಿ ಸ್ಟಾರ್ ಪ್ರೇಮ್

ಎರಡನೇ ಸಲ ಮದುವೆಯಾದ ಲವ್ಲಿ ಸ್ಟಾರ್ ಪ್ರೇಮ್

Posted By:
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಎರಡನೇ ಸಲ ಮದುವೆ ಆಗಿದ್ದಾರೆ.....ಹೌದು, ಇದು ಆಶ್ಚರ್ಯವಾದರೂ ಅಕ್ಷರಃ ನಿಜ. ಇತ್ತೀಚೆಗಷ್ಟೇ ಪ್ರೇಮ್ ದಂಪತಿ 17ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನ ಆಚರಿಸಿಕೊಂಡಿದ್ದರು. ಅಷ್ಟರಲ್ಲಾಗಲೇ ಎರಡನೇ ಸಲ ಮದುವೆನಾ ಎಂಬ ಕುತೂಹಲ ಕಾಡುವುದು ಸಹಜ.

ಅಷ್ಟಕ್ಕೂ, ಈ ಮದುವೆ ಆಗಿದ್ದು ಎಲ್ಲಿ ಗೊತ್ತಾ? ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ವೇದಿಕೆಯಲ್ಲಿ. ಈ ವಾರದ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮದಲ್ಲಿ 'ಫ್ಯಾಮಿಲಿ ರೌಂಡ್' ಕಾನ್ಸೆಪ್ಟ್ ಆಗಿದ್ದು, ಸ್ಪರ್ಧಿಗಳು, ತೀರ್ಪುಗಾರು ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ

ಹಾಗಿದ್ರೆ, 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್'ನ ಫ್ಯಾಮಿಲಿ ಸುತ್ತಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಲವ್ಲಿಸ್ಟಾರ್ ಎರಡನೇ ಸಲ ಮದುವೆ

ಲವ್ಲೀ ಸ್ಟಾರ್ ಪ್ರೇಮ್ ಸಕುಟುಂಬ ಸಮೇತರಾಗಿ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಪ್ರೇಮ್ ದಂಪತಿಗಳಿಗೆ ಸುವರ್ಣ ವೇದಿಕೆಯಲ್ಲಿ ಸಂಪ್ರದಾಯವಾಗಿ ಮದುವೆಯನ್ನೇ ಮಾಡಲಾಯಿತು. ಅವರ ಮಕ್ಕಳ ಸಮಕ್ಷಮದಲ್ಲಿ ಪ್ರೇಮ್, ತಮ್ಮ ಪತ್ನಿಗೆ ತಾಳಿ ಕಟ್ಟಿಸಿ ಸಪ್ತಪದಿ ಕೂಡ ತುಳಿದರು.

ಲವ್ಲಿಸ್ಟಾರ್ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಯೂಸಫ್ ಖಾನ್ ಫ್ಯಾಮಿಲಿ ಬಿಂದಾಸ್

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಮತ್ತೋರ್ವ ತೀರ್ಪುಗಾರರಾದ ಸಲ್ಮಾನ್ ಯೂಸಫ್ ಖಾನ್, ತನ್ನ ಅಪ್ಪ-ಅಮ್ಮನೊಂದಿಗೆ ಹೆಜ್ಜೆ ಹಾಕಿ ತಂದೆಯ ತ್ಯಾಗದ ಬಗ್ಗೆ ಕಣ್ಣೀರಿಟ್ಟರು.

ರಾಧಿಕಾ ಕುಮಾರಸ್ವಾಮಿ ಫುಲ್ ಖುಷ್

ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ, ತಾಯಿ, ಸಹೋದರ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ವೇದಿಕೆಗೆ ಆಗಮಿಸಿದ್ದರು. ಇವರ ಜೊತೆ ನಿರೂಪಕಿ ಶ್ವೇತಾ ಚೆಂಗಪ್ಪ ತಮ್ಮ ತಾಯಿಯೊಂದಿಗೆ ಕಣ್ಣೀರಾಗಿ ಕೊಡಗಿನ ನೃತ್ಯ ಮಾಡಿ ಅಮ್ಮನನ್ನು ಖುಷಿ ಪಡಿಸಿದರು.

ಮನಸ್ಸು ಮುಟ್ಟುವ ಭಾವನೆಗಳ ಅನಾವರಣ

ಈ ವಾರ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮ ಸಂಪೂರ್ಣವಾಗಿ ಭಾವನಾತ್ಮಕವಾಗಿ ಇರಲಿದೆ. ಪ್ರತಿಯೊಬ್ಬ ವೀಕ್ಷಕರ ಮನಸ್ಸು ಮುಟ್ಟುವಂತಹ ಎಪಿಸೋಡ್ ಆಗಲಿದೆ. ಕೈತುತ್ತು ಕೊಡುವ ಅಮ್ಮ, ಜೀವನಕ್ಕೆ ಬೆಂಗಾವಲಾಗಿ ನಿಲ್ಲುವ ಅಪ್ಪ, ಅಜ್ಜ, ಅಜ್ಜಿ, ಗಂಡ, ಸ್ನೇಹಿತ-ಹೀಗೆ ಬದುಕು, ಸಂಬಂಧಗಳ ಸರಮಾಲೆಯೇ ಈ ವಾರ ವೇದಿಕೆಯಲ್ಲಿ ಅನಾವರಣವಾಗಲಿದೆ.

ಶನಿವಾರ ಮತ್ತು ಭಾನುವಾರ ಪ್ರಸಾರ

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8 ಕ್ಕೆ ನಿಮ್ಮ ಸುವರ್ಣ ವಾಹಿನಿಯಲ್ಲಿ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಪ್ರಸಾರವಾಗಲಿದೆ. ಎಲ್ಲ ಪುಟಾಣಿಗಳು ಮತ್ತು ಅವರ ಕುಟುಂಬದವರು ವೇದಿಕೆಯಲ್ಲಿ ಕುಣಿಯಲಿದ್ದಾರೆ. ಅಮ್ಮನಿಗೆ, ಅಪ್ಪನಿಗೆ, ಸಹೋದರ, ಸಹೋದರಿಯರಿಗೆ - ಹೆಜ್ಜೆಗಳ ನಮನ ಸಲ್ಲಿಸಲಿದ್ದಾರೆ. ಮಿಸ್ ಮಾಡ್ದೆ ನೋಡಿ.....

English summary
Dance Dance Juniors Family round episode of this saturday and sunday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada