»   » ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2: ಫಲಿತಾಂಶ ಪ್ರಕಟ

ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2: ಫಲಿತಾಂಶ ಪ್ರಕಟ

Posted By:
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ರಿಯಾಲಿಟಿ ಶೋದ ಗ್ರ್ಯಾಂಡ್ ಫಿನಾಲೆ ಸೋಮವಾರ (ಜೂ 22) ಸಂಜೆ ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದಿದೆ.

ಅಕುಲ್ ಬಾಲಾಜಿ ನಿರೂಪಣೆಯಲ್ಲಿನ ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಪ್ರಿಯಾಮಣಿ ಮತ್ತು ಮಯೂರಿ ಜಡ್ಜ್ ಆಗಿದ್ದರು.

ವಿಜಯ್ ಸೂರ್ಯ, ಹರ್ಷಿಕಾ ಪೂಣಚ್ಚ, ಮಾಸ್ಟರ್ ಆನಂದ್, ಮೈತ್ರಿಯಾ ಗೌಡ ಸೇರಿದಂತೆ ಖ್ಯಾತ ಕಲಾವಿದರು ಈ ಶೋನಲ್ಲಿ ಭಾಗವಹಿಸಿದ್ದು ಗೊತ್ತೇ ಇದೆ.

Dancing Star season 2: Master Anand won the title

ಫೈನಲ್ ನಲ್ಲಿ ಹಿಂದಿಯ ಜನಪ್ರಿಯ 'India's Got Talent' ರಿಯಾಲಿಟಿ ಶೋನ ವಿಜೇತರು ಜಿಮ್ನಾಸ್ಟಿಕ್ ಪ್ರದರ್ಶನ ನೀಡಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು.

ಸೋಮವಾರ ತಡರಾತ್ರಿಯವರೆಗೆ ನಡೆದ ಈ ಗ್ರ್ಯಾಂಡ್ ಫಿನಾಲೆಯಲ್ಲಿ ಲಭ್ಯ ಮಾಹಿತಿಯ ಪ್ರಕಾರ ಮಾಸ್ಟರ್ ಆನಂದ್ ವಿಜೇತರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಮೆಗಾ ಫೈನಲ್ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಈ ವಾರಾಂತ್ಯದಲ್ಲಿ (June 27, 28) ಪ್ರಸಾರವಾಗಲಿದೆ.

English summary
Dancing Star season 2: As per the report, Master Anand has won the title.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada