ಕೋಟ್ಯಾಧಿಪತಿ ಮೊದಲ ಸ್ಪರ್ಧಿ ದಾವಣಗೆರೆ ಅಕ್ಷತಾ

ಮಾರ್ಚ್ 11ರಿಂದ ಸುವರ್ಣ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ sunfeast ಅರ್ಪಿಸುವ "ಕನ್ನಡದ ಕೋಟ್ಯಾಧಿಪತಿ ಸೀಸನ್ 2" ಆರಂಭವಾಗುತ್ತಿದೆ. ಎರಡನೇ ಆವೃತ್ತಿಯ ಮೊದಲ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ದಾವಣಗೆರೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಕ್ಷತಾ ಮೊದಲ ಸ್ಪರ್ಧಿಯಾಗಿ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ.
ಅಕ್ಷತಾ ಏನೇನು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟಕ್ಕೆ ಉತ್ತರಿಸುತ್ತಾರೆ, ಯಾರ ಹೆಲ್ಪ್ ಲೈನ್ ತಗೊಳ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಮಾರ್ಚ್ 11ರ ರಾತ್ರಿ 8 ಗಂಟೆಗೆ ತನಕ ಕಾಯಬೇಕು. ಎಪ್ಪತ್ತೆರಡು ಕಂತುಗಳಲ್ಲಿ ಈ ಬಾರಿಯ ಸೀಸನ್ 2 ಮೂಡಿಬರಲಿದೆ.
ಮನೆಮಗಳು ಓದಬೇಕು ಅಂತಾಳೆ, ಮನೆಮಗ ಮನೆ ಜವಾಬ್ದಾರಿ ಹೊರಬೇಕು ಅಂತಾನೆ, ಅಪ್ಪ ಇಳಿ ವಯಸಲ್ಲಿ ಮಕ್ಕಳಿಗೆ ಭಾರ ಆಗಬಾರದು ಅಂತಾರೆ...ಬದುಕು ಬದಲಾಯಿಸುವ ಈ ಆಟದಲ್ಲಿ ಗೆಲ್ಲುವವರು ಯಾರು? ಈ ಸಲವಾದರೂ ಯಾರಾದರೂ ಕೋಟಿ ಗೆಲ್ತಾರಾ? (ಏಜೆನ್ಸೀಸ್)
More from Filmibeat
English summary
The second season of the Kannadada Kotyadipati goes on air on March 11. The first contestant who will face the questions from Puneeth Rajkumar is Akshatha, an engineering student from Davangere.
kannadada kotyadhipati ಕನ್ನಡ ಕೋಟ್ಯಾಧಿಪತಿ ದಾವಣಗೆರೆ ಸುವರ್ಣ ವಾಹಿನಿ ಟಿವಿ ರಿಯಾಲಿಟಿ ಶೋ davangere suvarna channel tv reality show


Click it and Unblock the Notifications











