For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಪೀಡಕನನ್ನು ಬಿಗ್‌ಬಾಸ್‌ನಿಂದ ಹೊರಗಟ್ಟಿ: ಕೇಂದ್ರ ಸಚಿವಗೆ ಮಹಿಳಾ ಆಯೋಗದ ಮುಖ್ಯಸ್ಥೆ ಪತ್ರ

  |

  ಹಿಂದಿ ಬಿಗ್‌ಬಾಸ್ ಸೀಸನ್ 16 ಕೆಲವು ದಿನಗಳ ಹಿಂದೆಯಷ್ಟೆ ಆರಂಭವಾಗಿದ್ದು ಹಲವು ಭಿನ್ನ-ಭಿನ್ನ ವ್ಯಕ್ತಿತ್ವದ, ಹಿನ್ನೆಲೆಯ ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸಲಾಗಿದೆ.

  ಸೋಷಿಯಲ್ ಮೀಡಿಯಾ ಸೆನ್ಸೇಶನ್‌ಗಳನ್ನು, ವಿವಾದಿತ ವ್ಯಕ್ತಿಗಳನ್ನು ಬಿಗ್‌ಬಾಸ್ ಮನೆ ಒಳಗೆ ಕಳಿಸುವುದು ಸಾಮಾನ್ಯ, ಹಿಂದಿ ಬಿಗ್‌ಬಾಸ್‌ನಲ್ಲಿಯಂತೂ ವಿವಾದಿತ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಮನೆಗೆ ತುಂಬಲಾಗುತ್ತದೆ.

  ಬಿಗ್‌ಬಾಸ್ ವೇದಿಕೆಯಲ್ಲಿ 'ಸಾಮಿ ಸಾಮಿ' ಎಂದು ಸಲ್ಲುನ ಕುಣಿಸಿದ ಶ್ರೀವಲ್ಲಿ: ರಶ್ಮಿಕಾ ಫೇವರಿಟ್ ಸ್ಪರ್ಧಿ ಯಾರು ಗೊತ್ತಾ? ಬಿಗ್‌ಬಾಸ್ ವೇದಿಕೆಯಲ್ಲಿ 'ಸಾಮಿ ಸಾಮಿ' ಎಂದು ಸಲ್ಲುನ ಕುಣಿಸಿದ ಶ್ರೀವಲ್ಲಿ: ರಶ್ಮಿಕಾ ಫೇವರಿಟ್ ಸ್ಪರ್ಧಿ ಯಾರು ಗೊತ್ತಾ?

  ಅಂತೆಯೇ ಈ ಬಾರಿಯೂ ಕೆಲವು ವಿವಾದಿತ ವ್ಯಕ್ತಿಗಳು ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದಾರೆ. ಅದರಲ್ಲಿ ನಿರ್ದೇಶಕ ಸಾಜಿದ್ ಖಾನ್ ಒಬ್ಬರು. ಈ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿದೆ. ಹಾಗಿದ್ದರೂ ಇವರನ್ನು ಬಿಗ್‌ಬಾಸ್ ಮನೆಯೊಳಗೆ ಕಳಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಇದೀಗ ದೆಹಲಿ ಮಹಿಳಾ ಆಯೋಗವು ಕೇಂದ್ರ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದೆ.

  ದೆಹಲಿ ಮಹಿಳಾ ಆಯೋಗದೆ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್‌ಗೆ ಈ ಬಗ್ಗೆ ಪತ್ರೆ ಬರೆದಿದ್ದು, ಹತ್ತು ಮಂದಿ ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ಸಲ್ಲಿಸಿದ್ದಾರೆ ಹಾಗಾಗಿ ಸಾಜಿದ್ ಖಾನ್ ಅನ್ನು ಬಿಗ್‌ಬಾಸ್ 16 ಶೋನಿಂದ ಹೊರ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

  ಪ್ರಕರಣಗಳನ್ನು ಹೆಸರಿಸಿರುವ ಸ್ವಾತಿ ಮಲಿವಾಲ್

  ಪ್ರಕರಣಗಳನ್ನು ಹೆಸರಿಸಿರುವ ಸ್ವಾತಿ ಮಲಿವಾಲ್

  ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸ್ವಾತಿ ಮಲಿವಾಲ್, ''ಸಾಜಿದ್ ಖಾನ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 'ಹೌಸ್‌ಫುಲ್ 4' ಸಿನಿಮಾದ ಆಡಿಷನ್ ವೇಳೆ 17 ವರ್ಷದ ನಟಿಗೆ ಪೂರ್ಣ ಬಟ್ಟೆ ಬಿಚ್ಚಿದರೆ ಮಾತ್ರವೇ ಅವಕಾಶ ಕೊಡುವುದಾಗಿ ಹೇಳಿದ್ದರು. ಈ ಬಗ್ಗೆ ಸ್ವತಃ ನಟಿ ದೂರು ದಾಖಲಿಸಿದ್ದಾರೆ. ಇನ್ನು 'ಹಮ್‌ಶಕಲ್' ಸಿನಿಮಾದ ವೇಳೆಯೂ ನಟಿಯೊಬ್ಬರಿಗೆ ಇಂಥಹುದೇ ಬೇಡಿಕೆ ಇಟ್ಟಿದ್ದರು. ಈ ಬಗ್ಗೆಯೂ ದೂರು ದಾಖಲಾಗಿದೆ'' ಎಂದಿದ್ದಾರೆ.

  ''ಸಾಜಿದ್ ವ್ಯಕ್ತಿತ್ವದ ಬಗೆಗಿನ ಅಭಿಪ್ರಾಯ ತಿದ್ದುವ ಯತ್ನ''

  ''ಸಾಜಿದ್ ವ್ಯಕ್ತಿತ್ವದ ಬಗೆಗಿನ ಅಭಿಪ್ರಾಯ ತಿದ್ದುವ ಯತ್ನ''

  ''ಸುಮಾರು ಹತ್ತು ಮಹಿಳೆಯರಿಗೆ, ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯವನ್ನು ಸಾಜಿದ್ ಖಾನ್ ನೀಡಿದ್ದಾರೆ. ಇಂಥಹಾ ಲೈಂಗಿಕ ಪೀಡಿಕನನ್ನು ಬಿಗ್‌ಬಾಸ್‌ ಮನೆಯೊಳಗೆ ಕಳಿಸಿ, ಆತನಿಗೆ ಪ್ರೈಂ ಟೈಮ್‌ನಲ್ಲಿ ಅವಕಾಶ ಕೊಡಲಾಗಿದೆ. ಆತನ ವ್ಯಕ್ತಿತ್ವದ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಕಾರ್ಯವನ್ನು ಬಿಗ್‌ಬಾಸ್‌ ಮೂಲಕ ಮಾಡಲಾಗುತ್ತಿದೆ. ಹಾಗಾಗಿ ನಾನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದು, ಕೂಡಲೇ ಸಾಜಿದ್ ಖಾನ್ ಅನ್ನು ಶೋನಿಂದ ಹೊರ ಹಾಕಬೇಕು ಎಂದು ಮನವಿ ಮಾಡಿದ್ದೇನೆ'' ಎಂದಿದ್ದಾರೆ ಸ್ವಾತಿ.

  ಅತ್ಯಾಚಾರ ಬೆದರಿಕೆ ಬಂದಿವೆ: ಸ್ವಾತಿ ಮಲಿವಾಲ್

  ಅತ್ಯಾಚಾರ ಬೆದರಿಕೆ ಬಂದಿವೆ: ಸ್ವಾತಿ ಮಲಿವಾಲ್

  ''ಸಾಜಿದ್ ಖಾನ್ ಅನ್ನು ಶೋನಿಂದ ಹೊರಗೆ ಹಾಕುವಂತೆ ಸಚಿವರಿಗೆ ಪತ್ರ ಬರೆದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳು ಬರುತ್ತಿವೆ. ಆದರೆ ಇವಕ್ಕೆಲ್ಲ ನಾನು ಹೆದರುವಳಲ್ಲ, ನನಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಅವರು ಎಫ್‌ಐಆರ್ ದಾಖಲಿಸಿಕೊಳ್ಳಲಿದ್ದಾರೆ. ನನಗೆ ಬೆದರಿಕೆ ಹಾಕಿರುವವರೆಲ್ಲರ ಬಂಧನ ಆಗುವ ವರೆಗೂ ವಿರಮಿಸುವುದದಿಲ್ಲ, ಹಾಗೂ ಸಾಜಿದ್ ಖಾನ್ ವಿರುದ್ಧವೂ ಕಾನೂನಾತ್ಮಕ ಹೋರಾಟ ಮುಂದುವರೆಸುವುದಾಗಿ ಸ್ವಾತಿ ಹೇಳಿದ್ದಾರೆ.

  ಸಾಜಿದ್ ಖಾನ್ ವಿರುದ್ಧ ಹಲವು ನಟಿಯರ ಆರೋಪ

  ಸಾಜಿದ್ ಖಾನ್ ವಿರುದ್ಧ ಹಲವು ನಟಿಯರ ಆರೋಪ

  ಸಾಜಿದ್ ಖಾನ್ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರು. 2018 ರಲ್ಲಿ ಬಾಲಿವುಡ್‌ನಲ್ಲಿ ಮೀಟೂ ಅಭಿಯಾನ ಆರಂಭವಾದಾಗ ಹಲವು ನಟಿಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಸಾಜಿದ್ ಖಾನ್ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದವರು ಸಹ ಸಾಜಿದ್ ವಿರುದ್ಧ ಆರೋಪ ಮಾಡಿದ್ದರು. ಸಾಜಿದ್ ಖಾನ್ ಬಿಗ್‌ಬಾಸ್‌ಗೆ ಹೋದಾಗಲೂ ಅದನ್ನು ವಿರೋಧಿಸಿ ಕೆಲವರು ನಟಿಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

  English summary
  DCW chairperson Swati Maliwal writes to central minister Anurag Thakur to instruct chanel to remove Sajid Khan from Bigg Boss 16.
  Wednesday, October 12, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X