»   » 'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ!

'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ!

Posted By:
Subscribe to Filmibeat Kannada
ನಾಗಿಣಿ ಧಾರಾವಾಹಿಯ ಪ್ರಮುಖ ಪಾತ್ರದ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ | Filmibeat Kannada

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಆಗಿದೆ. ಬೆಂಗಳೂರಿನ ವಿಜಯ ನಗರದಲ್ಲಿ ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ.

ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರು

'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ದೀಕ್ಷಿತ್ ಆ ಸೀರಿಯಲ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಅಲ್ಲಿದೆ ಇತ್ತೀಚಿಗಷ್ಟೆ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ಕೂಡ ಗೆದ್ದಿದ್ದರು. ಆದರೆ ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ ಈ ನಟನ ಮೇಲೆ ಈಗ ಹಲ್ಲೆ ನಡೆದಿದೆ. ಜೊತೆಗೆ ಈಗಾಗಲೇ ಈ ಪ್ರಕರಣಕ್ಕೆ ಸಂಬಂದಿಸಿದಂತೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂದೆ ಓದಿ...

ನಿನ್ನೆ ರಾತ್ರಿ ನೆಡೆದ ಘಟನೆ

ನಟ ದೀಕ್ಷಿತ್ ಶೆಟ್ಟಿ ನಿನ್ನೆ ತಡರಾತ್ರಿ ವಿಜಯನಗರದ ಮಾರುತಿ ಮಂದಿರದ ಬಳಿ ತಮ್ಮ ಕಾರ್ ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಸೆಲ್ಫಿ ನಿರಾಕರಿಸಿದಕ್ಕೆ ಹಲ್ಲೆ

ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮೊದಲು ದೀಕ್ಷಿತ್ ಬಳಿ ಸೆಲ್ಫಿ ಕೇಳಿದ್ದಾರೆ. ಅದನ್ನು ನಿರಾಕರಿಸಿದಕ್ಕೆ ಏಕಾಏಕಿ ಮೂವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್​ ಪುಡಿ ಪುಡಿ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿ ಕೃತ್ಯ

ಸೆಲ್ಫಿಗಾಗಿ ದೀಕ್ಷಿತ್ ಅವರನ್ನು ಹಿಂಬಾಲಿಸಿ ಬಂದಿದ್ದ ಮೂವರು ದುಷ್ಕರ್ಮಿಗಳು ಕುಡಿದ ಅಮಲಿನಲ್ಲಿ ಇದ್ದರು. ಇದೇ ಕಾರಣಕ್ಕೆ ದೀಕ್ಷಿತ್ ಕೂಡ ಸೆಲ್ಫಿ ನೀಡುವುದಕ್ಕೆ ನಿರಾಕರಿಸಿದ್ದರು.

ವಿಜಯನಗರ ಪೊಲೀಸ್​ ಠಾಣೆಯಲ್ಲಿ ದೂರು

ಘಟನೆಗೆ ಸಂಬಂದಿಸಿದಂತೆ ಈಗಾಗಲೇ ನಟ ದೀಕ್ಷಿತ್ ವಿಜಯನಗರ ಪೊಲೀಸ್​ ಠಾಣೆಯಲ್ಲಿ ದೂರು

ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆ ಮೂವರು ಕಿಡಿಗೇಡಿಗಳ ಹುಡುಕಾಟದಲ್ಲಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆದ್ದ 'ನಾಗಿಣಿ' ಜೋಡಿಗೆ ಸಿಕ್ಕ ಬಹುಮಾನ ಏನು.?

ದೀಕ್ಷಿತ್ ಶೆಟ್ಟಿ ಬಗ್ಗೆ

ನಟ ದೀಕ್ಷಿತ್ ಶೆಟ್ಟಿ 'ನಾಗಿಣಿ' ಧಾರಾವಾಹಿಯ ಲೀಡ್ ರೋಲ್ ಆಗಿರುವ ಅರ್ಜುನ್ ಪಾತ್ರವನ್ನು ಮಾಡುತ್ತಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಸಹ ನಟಿ ದೀಪಿಕಾ ದಾಸ್ ರೊಂದಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ವಿಜೇತರಾಗಿದ್ದಾರೆ.

English summary
Zee Kannada channel's Nagini serial actor Deekshith Shetty was attacked by three unknown persons in Vijaya nagara, Bengaluru last night (December 7th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada