»   » ಬಿಗ್ ಬಾಸ್ 10 ಚಾಲನೆ: ಬೆಂಗಳೂರು ಬೆಡಗಿ ಜತೆ ಸಲ್ಮಾನ್

ಬಿಗ್ ಬಾಸ್ 10 ಚಾಲನೆ: ಬೆಂಗಳೂರು ಬೆಡಗಿ ಜತೆ ಸಲ್ಮಾನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬೆಂಗಳೂರಿನಿಂದ ಮುಂಬೈ ಈಗ ಹಾಲಿವುಡ್ ಕದ ತಟ್ಟಿರುವ ಬೆಡಗಿ ದೀಪಿಕಾ ಪಡುಕೋಣೆ ಅವರಿಗೆ ಬಿಗ್ ಬಾಸ್ 10 ರಿಯಾಲಿಟಿ ಶೋನ ಮೊದಲ ಗೆಸ್ಟ್ ಹಾಗೂ ಉದ್ಘಾಟನಾ ಎಪಿಸೋಡ್ ನ ನಿರ್ವಹಣೆ ಜವಾಬ್ದಾರಿ ಸಿಕ್ಕಿದೆ. ನಿರೂಪಕ ಸಲ್ಮಾನ್ ಖಾನ್ ಜತೆಗೆ ದೀಪಿಕಾ ಅವರು ಅಕ್ಟೋಬರ್ 16ರಂದು 9 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ಯಂತ ದುಬಾರಿ ನಟಿ ದೀಪಿಕಾ ಇಲ್ಲಿ ಅತಿಥಿಯಾಗಷ್ಟೇ ಅಲ್ಲದೆ ತಮ್ಮ ಹಾಲಿವುಡ್ ಚಿತ್ರ XXX ಪ್ರಚಾರವನ್ನು ನಡೆಸಲಿದ್ದಾರೆ.ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ರಾಜ್ ನಾಯಕ್ ಟ್ವೀಟ್ ಮಾಡಿದ್ದಾರೆ. [ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರು :13 ರಲ್ಲಿ 8 ಜನಕ್ಕೆ ಅವಕಾಶ!]

Confirmed! Deepika Padukone To Launch Bigg Boss 10 With Salman Khan!

ಬಿಗ್ ಬಾಸ್ ನಲ್ಲಿ ಸೆಲೆಬ್ರಿಟಿ ಹಾಗೂ ನಾನ್ ಸೆಲೆಬ್ರಿಟಿಗಳು ಈ ಬಾರಿ ಸ್ಪರ್ಧಿಗಳಾಗಿದ್ದಾರೆ. ಯಾರು ಯಾರು ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲದ ಜತೆಗೆ ಸಲ್ಮಾನ್ ಖಾನ್ ಅವರ ನಿರೂಪಣೆ ಈ ಶೋನ ಪ್ರಮುಖ ಆಕರ್ಷಣೆ.[ಬಿಗ್ ಬಾಸ್ ನಲ್ಲಿ ಜನ ಸಾಮಾನ್ಯರು :13 ರಲ್ಲಿ 8 ಜನಕ್ಕೆ ಅವಕಾಶ!]

ಬಿಗ್ ಬಾಸ್ ವೇದಿಕೆ ಬಳಸಿಕೊಂಡು ಹತ್ತು ಹಲವು ಚಿತ್ರಗಳು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಈಗ ಇತಿಹಾಸ. ಸದ್ಯದ ಮಾಹಿತಿಯಂತೆ ದೀಪಿಕಾ ಪಡುಕೋಣೆ ನಂತರ ಕರಣ್ ಜೋಹರ್ ಅವರು 'ಏ ದಿಲ್ ಹೇ ಮುಷ್ಕಿಲ್' ಚಿತ್ರದ ಪ್ರಚಾರಕ್ಕೆ ಬರಲಿದ್ದಾರೆ.

ಜತೆಗೆ ಅನುಷ್ಕಾ ಶರ್ಮ ಬಂದರೂ ಬರಬಹುದು. ಆದರೆ, ಐಶ್ವರ್ಯಾ ರೈ ಬಚ್ಚನ್ ಹಾಗೂ ರಣಬೀರ್ ಕಪೂರ್ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಜತೆ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇನ್ನೂ ಗಾಳಿಸುದ್ದಿಯಾಗೇ ಉಳಿದಿದೆ.

English summary
Bigg Boss 10: The CEO of colors, Raj Nayak confirmed about Deepika Padukone being the first guest of the show. She will be launching the show along with the host of the show Salman Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada