For Quick Alerts
  ALLOW NOTIFICATIONS  
  For Daily Alerts

  ದೇವಕಿ ಕಣ್ಣಿಗೆ ಬೀಳುತ್ತ ಸುದ್ದಿ ಪತ್ರಿಕೆಯಲ್ಲಿದ್ದ ಜಾನಕಿ-ನಿರಂಜನ್ ಫೋಟೋ?

  |

  ವರ್ಷದ ಸಂಭ್ರಮದಲ್ಲಿ ತೇಲುತ್ತಿದೆ ಮಗಳು ಜಾನಕಿ ಧಾರಾವಾಹಿ ತಂಡ. ಈ ಸಂದರ್ಭದಲ್ಲಿ ಮಗಳು ಜಾನಕಿ ಕಥೆ ರೋಚಕ ತಿರುವುಗಳನ್ನು ಪಡೆದುಕೊಂಡು ಪ್ರೇಕ್ಷಕ ವರ್ಗವನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಜಾನಕಿಯ ಕತೆ ಈಗ, ಚಂಚಲ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ ಆಗುವರೆಗೆ ಬಂದು ತಲುಪಿದೆ. ಭಾರ್ಗಿ ಅವಮಾನಗಳ ನಡುವೆ ನೊಂದು ಬೆಂದು ಎಲ್ಲವನ್ನು ಸಹಿಸಿಕೊಂಡು ಜಾನಕಿ ತಂಗಿ ನಿಶ್ಚಿತಾರ್ಥ ಮುಗಿಸಿದ್ದಾರೆ.

  ಯಾರು ಈ ಉಜ್ವಲ ಶೇಖರ್? ಚಿರಂತನ್ ಮುಚ್ಚಿಟ್ಟಿದ್ದ ಸತ್ಯ ಬಹಿರಂಗ!

  ಆದ್ರೀಗ ಜಾನಕಿ ಮತ್ತು ನಿರಂಜನ್ ಗೆ ಹೊಸ ಸವಾಲು ಎದುರಾಗಿದೆ. ಚಂಚಲ ಮದುವೆಯ ಸಂಭ್ರಮ ಟಿವಿಯಲ್ಲಿ ಲೈವ್ ಬಂದಿದೆ. ನೇರ ಪ್ರಸಾರವನ್ನು ನಿರಂಜನ್ ಮನೆಯಲ್ಲಿ ನೋಡಿದ್ದಾರೆ. ಸಂಜನಾ ಮಗಳು ನಿರಂಜನ್ ಅನ್ನು ಚಂಚಲ ಮದುವೆಯಲ್ಲಿ ನೋಡಿದ್ದಾರೆ. ಹಾಗಾಗೆ ಮನೆಯವರನೆಲ್ಲ ಕರೆದು ನಿರಂಜನ್ ಟಿವಿಯಲ್ಲಿ ಬಂದ ವಿಚಾರವನ್ನು ಹೇಳಿದ್ದಾರೆ.

  ಮನೆಗೆ ಬರುತ್ತಿದ್ದಂತೆ ನಿರಂಜನ್ ಗೆ ತಾಯಿ ದೇವಕಿಯಿಂದ ಪ್ರಶ್ನೆಗಳು ಎದುರಾಗುತ್ತಿವೆ. ಅಲ್ಲದೆ ಜಾನಕಿ ಮತ್ತು ನಿರಂಜನ್ ಇಬ್ಬರು ಒಟ್ಟಿಗೆ ಮನೆಗೆ ಬರದೆ, ಮೊದಲು ನಿರಂಜನ್ ಮನೆಗೆ ಎಂಟ್ರಿಯಾಗಿದ್ದಾರೆ, ನಂತರ ಜಾನಕಿ ಬಂದಿದ್ದಾರೆ. ಇನ್ನು ಚಂಚಲ ನಿಶ್ಚಿತಾರ್ಥದ ಫೋಟೋಗಳು ಹರಿದಾಡುತ್ತಿವೆ. ಭಾರ್ಗಿ ಮಗಳು ಜಾನಕಿ, ನಿರಂಜನ್ ಮದುವೆಯಾದ ಹುಡುಗಿ ಇವಳೆ ಎನ್ನುವ ಸತ್ಯ ಮನೆಯವರಿಗೆ ಗೊತ್ತಾಗಿ ಹೋಗುತ್ತಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

  ಸಿ ಎಸ್ ಪಿ ಹಣ ಕದ್ದ ಸುಂದರ್ ಮೂರ್ತಿ

  ಸಿ ಎಸ್ ಪಿ ಹಣ ಕದ್ದ ಸುಂದರ್ ಮೂರ್ತಿ

  ಕಣ್ಣುಕಟ್ಟಿಕೊಂಡು ಕಾರು ಚಲಾಯಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಸುಂದರ್ ಮೂರ್ತಿ ಹಣ ಕಳೆದುಕೊಂಡಿದ್ದಾರೆ. ಕಾರನ್ನು ಡ್ಯಾಮೇಜ್ ಮಾಡಿ ಅವರಿಗೆ ಹಣಕಟ್ಟಲು ಸಾಧ್ಯವಾಗದೆ ಸಿ ಎಸ್ ಪಿ ಬಳಿ ಇರುವ ಹಣವನ್ನು ದೋಚಿದ್ದಾರೆ. ಸಿ ಎಸ್ ಪಿ ಕೇಳಿದ ತಕ್ಷಣ ಹಣವನ್ನು ತಾನೆ ಕದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಲ್ಲ ಕಣ್ಣುಕಟ್ಟಿಕೊಂಡು ಕಾರು ಚಲಾಯಿಸಬೇಡಿ ಎಂದು ಸುಂದರ್ ಮೂರ್ತಿಗೆ ಬುದ್ದಿವಾದ ಹೇಳಿದ್ದಾರೆ.

  ನಿರಂಜನ್ ಪತ್ನಿ ಜಾನಕಿ ಎನ್ನುವ ವಿಚಾರ ಮನೆಯವರಿಗೆ ಗೊತ್ತಾಗಿಬಿಡುತ್ತಾ?

  ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಸಿ ಎಸ್ ಪಿ

  ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಸಿ ಎಸ್ ಪಿ

  ಮಧುಕರ ಮತ್ತು ಭಾರ್ಗಿ ನಡುವಿನ ಅನ್ಯೂನ್ಯತೆ ನೋಡಿ ಸಿ ಎಸ್ ಪಿ ತುಂಬ ಬೇಸರ ಮಾಡಿಕೊಂಡಿದ್ದಾರೆ. ಅದೆ ನೋವಿನಲ್ಲಿ ಮನೆಯಿಂದ ಹೊರಡುವ ನಿರ್ಧಾರ ಕೂಡ ಮಾಡಿದ್ದಾರೆ. ಮುಂದಿನ ತಿಂಗಳು ಮನೆಯಲ್ಲಿ ಇರುವುದಿಲ್ಲ ಎಂದು ಶಾಮಲಾ ಬಳಿ ಮನೆಯ ಖರ್ಚಿನ ಹಣವನ್ನು ಒಟ್ಟಿಗೆ ನೀಡಿದ್ದಾರೆ. ಆದ್ರೆ ಎಲ್ಲಿಗಿ ಹೋಗುತ್ತೀರಿ ಅಂತ ಕೇಳಿದ್ರೆ ಸಿ ಎಸ್ ಪಿ ಎಲ್ಲಿ ಅಂತ ಗೊತ್ತಾಗುತ್ತಿಲ್ಲ., ಆದ್ರೆ ಮನೆ ಬಿಟ್ಟು ಹೋಗಲೆ ಬೇಕೆಂದು ಶಾಮಲ ಬಳಿ ಹೇಳಿದ್ದಾರೆ.

  ಮನೆಗೆ ಬಂದ ನಿರಂಜನ್

  ಮನೆಗೆ ಬಂದ ನಿರಂಜನ್

  ನಿರಂಜನ್ ಒಬ್ಬರೆ ಮನೆಗೆ ಬಂದಿದ್ದಾರೆ. ಜಾನಕಿ ಎಲ್ಲಿ ಅಂತ ನಿರಂಜನ್ ತಾಯಿ ದೇವಕಿ ಕೇಳುತ್ತಿದ್ದಾರೆ. ಆದ್ರೆ ಜಾನಕಿ ಬೇರೆಯವರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಅಂತ ಸುಳ್ಳು ಹೇಳಿದ್ದಾರೆ. ಅಲ್ಲದೆ ಭಾರ್ಗಿಯವರ ಮನೆ. ನಿಶ್ಚಿತಾರ್ಥಕ್ಕೆ ಹೋದ ವಿಚಾರವನ್ನು ಅಮ್ಮನ ಬಳಿ ಹೇಳಿಕೊಂಡಿದ್ದಾರೆ. ಆದ್ರೆ ದೇವಕಿಗೆ ಮಾತ್ರ ನಿರಂಜನ್ ಮತ್ತು ಜಾನಕಿಯ ವಿಚಾರ ಗೊತ್ತಾಗುತ್ತಿಲ್ಲ.

  ಪೇಪರ್ ನಲ್ಲಿ ಜಾನಕಿ-ನಿರಂಜನ್

  ಪೇಪರ್ ನಲ್ಲಿ ಜಾನಕಿ-ನಿರಂಜನ್

  ಪೇಪರ್ ನಲ್ಲಿ ಜಾನಕಿ ಮತ್ತು ನಿರಂಜನ್ ಫೋಟೋ ಪಬ್ಲಿಕ್ ಆಗಿದೆ. ಅದೆ ಪೇಪರ್ ನಲ್ಲಿ ದೇವಕಿ ತರಕಾರಿಗಳನ್ನು ಹಾಕಿಕೊಂಡು ಸ್ವಚ್ಚಗೊಳಿಸುತ್ತಿದ್ದಾರೆ. ಆದ್ರೆ ನಿರಂಜನ್ ಮತ್ತು ಜಾನಕಿಯನ್ನು ದೇವಕಿ ಗಮನಿಸುವುದೆ ಇಲ್ಲ. ದೇವಕಿ ನೋಡುವ ಮೊದಲೆ ನಿರಂಜನ್ ಪೇಪರ್ ಅನ್ನು ಬಚ್ಚಿಡುತ್ತಾರೆ.

  ಅಂತೂ ನಿರಂಜನ್ ಕೋಟಿನ ಸಮಸ್ಯೆ ಬಗೆ ಹರಿಯಿತು

  ಶಾಮಲ ಬಳಿ ಬೇಸರ ಹೇಳಿಕೊಂಡ ಚಂದ್ರಣ್ಣ

  ಶಾಮಲ ಬಳಿ ಬೇಸರ ಹೇಳಿಕೊಂಡ ಚಂದ್ರಣ್ಣ

  ಮಧುಕರನಿಗಾಗಿ ಸಿ ಎಸ್ ಪಿ ಪ್ರಾಕ್ಟೀಸ್ ಮುಂದುವರೆಸಿದ್ದಾರೆ. ಆದ್ರೆ ಮಗ ಮಾತ್ರ ಮನೆಗೆ ಬರುವುದಿಲ್ಲ, ಅಲ್ಲದೆ ಭಾರ್ಗಿಯವರ ಬಳಿ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಜಾನಕಿ ಕೂಡ ಡಿ ವೈ ಎಸ್ ಪಿ ಆಗಿದ್ದಾರೆ ಆದ್ರೆ ಜಾನಕಿ ಕೂಡ ಮನೆಗೆ ಬರುತ್ತಿಲ್ಲ. ಮಧುಕರ ಇಲ್ಲ ಎನ್ನುವ ದುಃಖವನ್ನು ಜಾನಕಿಯನ್ನು ನೋಡಿ ಮರೆಯುತ್ತಿದೆ. ಆದ್ರೀಗ ಯಾರು ಇಲ್ಲ. ಮನೆಯಲ್ಲಿ ಇರಲು ಸಾಧ್ಯವಾಗುತ್ತಲ್ಲ. ಹಾಗಾಗಿ ಹಿಮಾಲಯ ಅಥವಾ ಕಾಶ್ಮೀರದ ಕಡೆ ಹೋಗುವುದಾಗಿ ಹೇಳಿದ್ದಾರೆ.

  ಮನೆಗೆ ಬಂದ ಜಾನಕಿ

  ಮನೆಗೆ ಬಂದ ಜಾನಕಿ

  ತಂಗಿಯ ನಿಶ್ಚಿತಾರ್ಥ ಮುಗಿಸಿ ಜಾನಕಿ ಮನೆಗೆ ವಾಪಾಸ್ ಆಗಿದ್ದಾರೆ. ನಿರಂಜನ್ ಸಿಕ್ಕಿದ್ದರ ಎನ್ನುವ ಪ್ರಶ್ನೆಯನ್ನು ದೇವಕಿ ಅವರು ಕೇಳಿದ್ದಾರೆ. ಸ್ನೇಹಿತೆಯ ನಿಶ್ಚಿತಾರ್ಥ ಹೇಗೆ ಆಯಿತು ಎಂದು ಕೇಳುತ್ತಲೆ ಚಂಚಲಳನ್ನು ಹೊಗಳಿದ್ದಾರೆ ದೇವಕಿ. ಅಲ್ಲದೆ ಜಾನಕಿಗೆ ಮನೆಯಲ್ಲಿ ಕೊಟ್ಟ ಸೀರೆ ಮತ್ತು ಒಡವೆಗಳನ್ನು ನೋಡಿ ತನಿಕೆ ಮಡುತ್ತಿದ್ದಾರೆ ದೇವಕಿ. ಇದರಿಂದ ಜಾನಕಿಗೆ ಏನು ಹೇಳಬೇಕು ಎಂದು ತೋಚದೆ ಸುಮ್ಮನಾಗಿ ಬಿಡುತ್ತಾರೆ.

  English summary
  Devaki informs Niranjan about seeing him on television, he confesses to visiting Chandu's house for Chanchala's engagement. Niranjan notices a photo of him and Janaki in the newspaper and he hides the news paper.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X