For Quick Alerts
  ALLOW NOTIFICATIONS  
  For Daily Alerts

  ರೀಲ್ ನಿಂದ ರಿಯಲ್ ದಾಂಪತ್ಯಕ್ಕೆ ಸತಿ-ಮಹಾದೇವ

  By ಜೇಮ್ಸ್ ಮಾರ್ಟಿನ್
  |

  ದೇವರ ದೇವ ಮಹಾದೇವ ಯಾರು ಎಂದರೆ ಲೈಫ್ ಓಕೆ ಚಾನೆಲ್ ಪ್ರೇಮಿಗಳಿಗೆ ತಕ್ಷಣಕ್ಕೆ ಮೋಹಿತ್ ರೈನಾ ಹೆಸರು ನೆನಪಾಗುತ್ತದೆ. ಮಹಾಭಾರತ್, ಝಾನ್ಸಿ ರಾಣಿ ಸೇರಿದಂತೆ ಪೌರಾಣಿಕ, ಐತಿಹಾಸಿಕ ಸೀರಿಯಲ್ ಇಂದಿಗೂ ಹಿಂದಿ ಕಿರುತೆರೆಯನ್ನು ಆಳುತ್ತಿದೆ. ಲೈಫ್ ಓಕೆ ಚಾನೆಲ್ ನ ಜನಪ್ರಿಯ ಧಾರಾವಾಹಿ Devon ke Dev Mahadev ನ ಮಹಾದೇವ ಮೋಹಿತ್ ರೈನಾ ತನ್ನ ಗೆಳತಿ 'ಸತಿ' ಪಾತ್ರ ಖ್ಯಾತಿಯ ಮೌನಿ ರಾಯ್ ಜತೆ ಮದುವೆಯಾಗುತ್ತಿದ್ದಾರೆ.

  ಕಿರುತೆರೆ ತಾರೆ ಮೋಹಿತ್ ರೈನಾ ಜನಪ್ರಿಯತೆ ಎಷ್ಟರ ಮಟ್ಟಿಗೆ ಹಬ್ಬಿತ್ತು ಎಂದರೆ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಜತೆ ಕೂಡಾ ಈತನ ಹೆಸರು ತಗುಲಿಕೊಂಡಿತ್ತು. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಕಾಲಿರಿಸಿದ ಮೋಹಿತ್ ಗೆ ಮಾಡೆಲಿಂಗ್ ಸಮಯದಿಂದಲೂ ಪ್ರಿಯಾಂಕಾ ಗೊತ್ತು ಎಂಬುದು ಬೇರೆ ವಿಷಯ. ಮಹಾದೇವ ಸೀರಿಯಲ್ ಶುರುವಾದ ಮೇಲೆ ಮೋಹಿತ್ ಸ್ಟಾರ್ ಆಗಿ ಬೆಳೆದು ಬಿಟ್ಟ.

  ಇತ್ತ ಗೆಳೆಯ ಗೌರವ್ ಛೋಪ್ರಾಗೆ ಕೈ ಕೊಟ್ಟ ಮೌನಿ ರಾಯ್ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋ, ಪಾರ್ಟಿಗಳಲ್ಲಿ ಮೋಹಿತ್ ಜತೆ ಕಾಣಿಸಿಕೊಂಡಿದ್ದರು. ಮಹಾದೇವ ಸೀರಿಯಲ್ ನಲ್ಲಿ ಸತಿ ಪತಿಯಾಗಿರುವ ಈ ಜೋಡಿ ಈಗ ನಿಜ ಜೀವನದಲ್ಲೂ ದಾಂಪತ್ಯ ಗೀತೆ ಹಾಡಲು ಮುಂದಾಗಿರುವುದು ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಮದುವೆ ಸಿದ್ಧತೆ, ರೀಲ್ ಲೈಫ್ ಮಹಾದೇವ್- ಸತಿ ಸಂತಸದ ಚಿತ್ರಗಳನ್ನು ಮುಂದೆ ನೋಡಿ...

  ಮಹಾದೇವ್- ಸತಿ ಸಂತಸದ ಚಿತ್ರ

  ಮಹಾದೇವ್- ಸತಿ ಸಂತಸದ ಚಿತ್ರ

  ಲೈಫ್ ಓಕೆ ಚಾನೆಲ್ ನ Devon ke Dev Mahadev ಧಾರಾವಾಹಿಯ ಪ್ರಧಾನ ಪಾತ್ರಧಾರಿ ಮಹಾದೇವ ಮೋಹಿತ್ ರೈನಾ ತನ್ನ ಗೆಳತಿ 'ಸತಿ' ಪಾತ್ರ ಖ್ಯಾತಿಯ ಮೌನಿ ರಾಯ್

  ಮೋಹಿತ್- ಮೌನಿ

  ಮೋಹಿತ್- ಮೌನಿ

  ಮೋಹಿತಿ ಮೌನಿ ಗೆಳೆತನದ ಬಗ್ಗೆ ಎಲ್ಲರಿಗೂ ಗೊತ್ತೇ ಇತ್ತು. ಮಹಾದೇವ ಧಾರಾವಾಹಿ ಮೂಲಕ ಇಬ್ಬರು ಆಪ್ತರಾದರು

  ಜನಪ್ರಿಯ ಜೋಡಿ

  ಜನಪ್ರಿಯ ಜೋಡಿ

  ಕಿರುತೆರೆಯ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಮೋಹಿತ್ -ಮೌನಿ ಒಬ್ಬರಾಗಿದ್ದಾರೆ

  ಗೆಳೆತನ ನಂತರ ಡೇಟಿಂಗ್

  ಗೆಳೆತನ ನಂತರ ಡೇಟಿಂಗ್

  ಗೆಳೆತನ ನಂತರ ಡೇಟಿಂಗ್ ಹಂತಕ್ಕೆ ಮುಟ್ಟಿದಾಗ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿತು

  ಮೌನಿ ಹುಟ್ಟುಹಬ್ಬ

  ಮೌನಿ ಹುಟ್ಟುಹಬ್ಬ

  ಮೌನಿ ರಾಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರು ಬಹಿರಂಗವಾಗಿ ಗೆಳೆತನ ಪ್ರೇಮಕ್ಕೆ ತಿರುಗಿರುವುದನ್ನು ಒಪ್ಪಿಕೊಂಡರು

  ಸಂತಸದ ಕ್ಷಣಗಳು

  ಸಂತಸದ ಕ್ಷಣಗಳು

  ಆಪ್ತ ಗೆಳೆಯ ಗೆಳತಿಯರ ಜತೆ ಮೋಹಿತ್- ಮೌನಿ

  ಮೌನಿ ಕೂಡಾ ಸ್ಟಾರ್

  ಮೌನಿ ಕೂಡಾ ಸ್ಟಾರ್

  ಕಿರುತೆರೆಯ ಜನಪ್ರಿಯ ಧಾರಾವಾಹಿ ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥೀಯಲ್ಲಿ ನಟಿಸಿದ್ದ ಮೌನಿ ನಂತರ ಲೈಫ್ ಓಕೆ ಧಾರಾವಾಹಿ ವರದಾನವಾಗಿ ಪರಿಣಮಿಸಿತು

  ಹಳೆ ಗೆಳೆಯ

  ಹಳೆ ಗೆಳೆಯ

  ಮೌನಿ ರಾಯ್ ತನ್ನ ಹಳೆ ಗೌರವ್ ಛೋಪ್ರಾ ಜತೆ

  English summary
  The marriage season is on and here is another couple who is all set to get married. Life Ok's Mahadev Mohit Raina is going to marry girlfriend Mouni Roy in February 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X