»   » ಕನಸಿನಲ್ಲಿ ಕಾಡಿದ 'ನಾಗಕನ್ನಿಕೆ' ಈಕೆಯೇ... ದರುಶನ ಮಾಡಿ...

ಕನಸಿನಲ್ಲಿ ಕಾಡಿದ 'ನಾಗಕನ್ನಿಕೆ' ಈಕೆಯೇ... ದರುಶನ ಮಾಡಿ...

Posted By:
Subscribe to Filmibeat Kannada

ವಿಭಿನ್ನ ಕಾರ್ಯಕ್ರಮಗಳ ಮೂಲಕ ದಿನದಿಂದ ದಿನಕ್ಕೆ ಕಲರ್ಸ್ ಸೂಪರ್ ವಾಹಿನಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿ ಆಗುತ್ತಿದೆ. 'ಮಜಾ ಭಾರತ', 'ಶಾಂತಂ ಪಾಪಂ', 'ಸೂಪರ್ ಟಾಕ್ ಟೈಮ್' ಅಂತಹ ಕಾರ್ಯಕ್ರಮಗಳ ಮೂಲಕ ಅಸಂಖ್ಯಾತ ವೀಕ್ಷಕರನ್ನು ಸಂಪಾದಿಸಿರುವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿ ಶುರು ಆಗುತ್ತಿದೆ. ಅದೇ 'ನಾಗಕನ್ನಿಕೆ'.

ಇಲ್ಲಿಯವರೆಗೂ 'ನಾಗಕನ್ನಿಕೆ' ಧಾರಾವಾಹಿಯ ಹಲವು ಪ್ರೋಮೋಗಳು 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರ ಆಗಿದೆ. ಆದ್ರೆ, 'ನಾಗಕನ್ನಿಕೆ' ಆಗಿ ಬುಸುಗುಡುವ ನಾರಿ ಯಾರು ಎಂಬುದು ಮಾತ್ರ ಯಾರಿಗೂ ಗೊತ್ತಾಗಿರಲಿಲ್ಲ.

'ಸಂಜು ಮತ್ತು ನಾನು' ವಾರಾಂತ್ಯದ ಕತೆಯಲ್ಲಿ 'ಕಾರ್ತಿಕ್': ಯಾರಿದು.?

'Dhairyam' Heroine Adithi Prabhudev playing lead in 'Naagakannike' Serial

ಇಲ್ಲಿಯವರೆಗೂ ಸಸ್ಪೆನ್ಸ್ ಆಗಿದ್ದ 'ನಾಗಕನ್ನಿಕೆ'ಯ ದರ್ಶನ ಇಂದು ಎಲ್ಲರಿಗೂ ಆಗಿದೆ. 'ನಾಗಕನ್ನಿಕೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಾರಿ ಅಧಿತಿ ಪ್ರಭುದೇವ್ ಎಂಬಾಕೆ.

ಯಾರೀ ಅಧಿತಿ ಪ್ರಭುದೇವ್ ಎಂದು ನೀವು ಯೋಚಿಸುತ್ತಿದ್ದರೆ, ಒಮ್ಮೆ 'ಧೈರ್ಯಂ' ಚಿತ್ರದ ಟ್ರೈಲರ್ ಹಾಗೂ ಸಾಂಗ್ ಗಳತ್ತ ಮೊದಲು ಕಣ್ಣಾಡಿಸಿ.

ಅಜೇಯ್ ರಾವ್ ಅಭಿನಯದ ಶಿವ ತೇಜಸ್ ನಿರ್ದೇಶನದ 'ಧೈರ್ಯಂ' ಚಿತ್ರದಲ್ಲಿ ನಾಯಕಿ ಅಗಿ ಅಧಿತಿ ಪ್ರಭುದೇವ್ ಕಾಣಿಸಿಕೊಂಡಿದ್ದಾರೆ. 'ಧೈರ್ಯಂ' ಸಿನಿಮಾ ಬಿಡುಗಡೆ ಆಗುವ ಮುನ್ನವೇ 'ನಾಗಕನ್ನಿಕೆ' ಧಾರಾವಾಹಿಯ ಪ್ರಮುಖ ಪಾತ್ರಕ್ಕೆ ಅಧಿತಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಜೂನ್ 26 ರಿಂದ ರಾತ್ರಿ 7.30ಕ್ಕೆ 'ನಾಗಕನ್ನಿಕೆ' ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
'Dhairyam' Heroine Adithi Prabhudev playing lead in 'Naagakannike' Serial which will be telecasted in Colors Super Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada