Don't Miss!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ!
Recommended Video

ದೂದ್ ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ನಡುವೆ ಪ್ರೀತಿ-ಪ್ರೇಮ ಇದೆ ಎನ್ನುವ ಸಂಗತಿ ಗುಟ್ಟಾಗಿ ಉಳಿದಿಲ್ಲ.
ದಿಗಂತ್ ಹಾಗೂ ಐಂದ್ರಿತಾ ನಡುವೆ ಏನೋ ನಡೀತಿದೆ ಎಂಬ ಗುಸು ಗುಸು ಶುರುವಾಗಿ ವರ್ಷಗಳೇ ಉರುಳಿವೆ. ಮಾಧ್ಯಮಗಳ ಮುಂದೆ ತಮ್ಮ ಪ್ರೀತಿಯನ್ನ ಒಪ್ಪಿಕೊಳ್ಳದೇ ಇದ್ದರೂ, ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಶೋನಲ್ಲಿ ಐಂದ್ರಿತಾ ಹಾಗೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ದಿಗಂತ್ ತಮ್ಮ ಪ್ರೇಮದ ಗುಟ್ಟನ್ನ ರಟ್ಟು ಮಾಡಿದ್ದಾರೆ.
ಇಷ್ಟು ದಿನ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ದಿಗಂತ್ ಹಾಗೂ ಐಂದ್ರಿತಾ ರೇ, ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ. ಇದು ಅಂತೆ-ಕಂತೆ ಇರಬೇಕು ಬಿಡಿ ಅಂತ ಮೂಗು ಮುರಿಯಬೇಡಿ. ಯಾಕಂದ್ರೆ, ಇದು ಗಾಸಿಪ್ ಅಲ್ಲ. ಸ್ವತಃ ದೂಡ್ ಪೇಡ ದಿಗಂತ್ ಆಡಿರುವ ಮಾತು. ಮುಂದೆ ಓದಿರಿ...

ಹಾರ್ಟ್ ಬ್ರೇಕಿಂಗ್ ನ್ಯೂಸ್
ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ದಿಗಂತ್ ಇದೇ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಪಡ್ಡೆ ಹುಡುಗರ ಕನಸಿನ ರಾಣಿ ಐಂದ್ರಿತಾ ರೇ ಕೊರಳಿಗೆ ಸದ್ಯದಲ್ಲೇ ದಿಗಂತ್ ಮಾಂಗಲ್ಯಧಾರಣೆ ಮಾಡಲಿದ್ದಾರೆ.
ದಿಗಂತ್-ಐಂದ್ರಿತಾ
ಬಗ್ಗೆ
ಕಾಡ್ಗಿಚ್ಚಿನಂತೆ
ಹಬ್ಬಿದ
ಸುದ್ದಿ
ನಿಜವೋ?
ಸುಳ್ಳೋ?

ಶಿವಣ್ಣ ಮುಂದೆ ಬಾಯ್ಬಿಟ್ಟ ದಿಗಂತ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 'ಯಾರೀ ಮೀಟರ್' ಚೆಕ್ ಮಾಡುವ ಸುತ್ತು ಮುಗಿದ ಮೇಲೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ದಿಗಂತ್ ಉತ್ತರ ಕೊಡದೆ ಬೇರೆ ದಾರಿ ಇರಲಿಲ್ಲ.
ದಿಗಂತ್
ಜೊತೆ
ಮದುವೆ
ಸುದ್ದಿ
ಬಗ್ಗೆ
ಐಂದ್ರಿತಾ
ಕೊಟ್ಟ
ಪರೋಕ್ಷ
ಪ್ರತಿಕ್ರಿಯೆ!

ಶಿವಣ್ಣ ಕೇಳಿದ ಪ್ರಶ್ನೆ ಏನು.?
''ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ, ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.?'' ಎಂದು ಶಿವಣ್ಣ ಕೇಳಿದರು. ಅದಕ್ಕೆ ''ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ'' ಎಂದು ಉತ್ತರಿಸಿದರು ದಿಗಂತ್.
ದಿಗಂತ್
ಜೊತೆಗಿನ
ಸಂಬಂಧದ
ಬಗ್ಗೆ
ಐಂದ್ರಿತಾ
ನಿಜ
ಹೇಳಿದ್ರೋ.?
ಸುಳ್ಳು
ಹೇಳಿದ್ರೋ.?

ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು.?
''ಇದೇ ವರ್ಷ ಮದುವೆ ಆಗಲು ಪ್ಲಾನ್ ಮಾಡಿದ್ದೇನೆ'' ಎಂದು ದಿಗಂತ್ ಹೇಳಿದ ಕೂಡಲೆ, ''ಆಂಡಿ (ಐಂದ್ರಿತಾ ರೇ) ಬಿ ರೆಡಿ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ'' ಎಂದು ಶಿವಣ್ಣ ಹೇಳಿದರು.

ಸ್ಟಾರ್ ಜೋಡಿ ಮದುವೆಗೆ ಈ ವರ್ಷ ಸಾಕ್ಷಿ
ಯಶ್-ರಾಧಿಕಾ, ಯೋಗಿ, ಸೇರಿದಂತೆ ಹಲವು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಈಗ ಅದೇ ಹಾದಿಯಲ್ಲಿ ಸಾಗಲು ದಿಗಂತ್ ಹಾಗೂ ಐಂದ್ರಿತಾ ರೇ ಸಜ್ಜಾಗಿದ್ದಾರೆ.