ವಿವಾದಕ್ಕೆ ಸಿಲುಕದೆ 'ಜಾಣ್ಮೆ' ಪ್ರದರ್ಶಿಸಿದ ನಿರ್ದೇಶಕ ಸುನಿ.!

By Harshitha

ಸೆಲೆಬ್ರಿಟಿಗಳು ಅಂದ್ಮೇಲೆ ಸಭೆ, ಸಮಾರಂಭಗಳಿಗೆ ಭೇಟಿ ನೀಡ್ಬೇಕು... ಸಂದರ್ಶನಗಳನ್ನ ಕೊಡ್ಬೇಕು... ಟಾಕ್ ಶೋಗಳಲ್ಲಿ ಭಾಗಿ ಆಗ್ಬೇಕು... ಎಷ್ಟೇ ಜಾಗರೂಕತೆ ವಹಿಸಿದರೂ, ಒಂದಲ್ಲ ಒಂದು ಕಡೆ ಸೆಲೆಬ್ರಿಟಿಗಳು ವಿವಾದಗಳ ಸುಳಿಯಲ್ಲಿ ಸಿಲುಕುತ್ತಾರೆ. ಬಾಯ್ಮಾತಲ್ಲಿ ಏನೋ ಹೇಳಿದ್ದು ದೊಡ್ಡ ಅವಾಂತರ ಸೃಷ್ಟಿ ಮಾಡುತ್ತೆ. ಅದಕ್ಕೆ ನಟಿ ರಶ್ಮಿಕಾ ಮಂದಣ್ಣ ಹಾಗೂ 'ಬಿಗ್ ಬಾಸ್' ಸಂಜನಾಗಿಂತ ಉತ್ತಮ ಉದಾಹರಣೆ ಬೇಕಾ ಹೇಳಿ...

ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕಾಮೆಂಟ್ ಮಾಡಿದ ರಶ್ಮಿಕಾ ಮಂದಣ್ಣ ಹಾಗೂ ಸಂಜನಾ 'ಕಾಂಟ್ರೋರ್ವಸಿ ಕ್ವೀನ್'ಗಳಾಗಿಬಿಟ್ಟರು.

ಈ ಎರಡು ವಿವಾದಗಳಿಂದ ಅನೇಕ ಸೆಲೆಬ್ರಿಟಿಗಳು ಹುಷಾರ್ ಆಗ್ಬಿಟ್ಟಿದ್ದಾರೆ. ವಿವಾದ ಸೃಷ್ಟಿ ಮಾಡುವ ಯಾವುದೇ ಪ್ರಶ್ನೆ ತೂರಿ ಬಂದರೂ, ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ನಿರ್ದೇಶಕ 'ಸಿಂಪಲ್' ಸುನಿ ಮೊನ್ನೆ ಮಾಡಿದ್ದೂ ಅದನ್ನೇ.!

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸಿಂಪಲ್' ಸುನಿ

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸಿಂಪಲ್' ಸುನಿ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಮೇಘನಾ ಗಾಂವ್ಕರ್ ಹಾಗೂ ಅನೀಶ್ ಜೊತೆ 'ಸಿಂಪಲ್' ಸುನಿ ಅತಿಥಿಗಳಾಗಿ ಭಾಗವಹಿಸಿದ್ದರು.

ತಪ್ಪಿಸಿಕೊಳ್ಳುವ ಹಾಗಿರ್ಲಿಲ್ಲ.!

ತಪ್ಪಿಸಿಕೊಳ್ಳುವ ಹಾಗಿರ್ಲಿಲ್ಲ.!

ಕಾರ್ಯಕ್ರಮದ ಪದ್ದತಿಯಂತೆ ಕೊನೆಗೆ ಭಾಗದಲ್ಲಿ 'ದಿಢೀರ್ ಬೆಂಕಿ' ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು. ಎಲ್ಲ ಪ್ರಶ್ನೆಗಳಿಗೂ ನಿರ್ದೇಶಕ ಸುನಿ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಳ್ಳುವ ಹಾಗಿರ್ಲಿಲ್ಲ.!

'ಅತಿಯಾದ ಆಟಿಟ್ಯೂಡ್' ಯಾರಿಗಿದೆ.?

'ಅತಿಯಾದ ಆಟಿಟ್ಯೂಡ್' ಯಾರಿಗಿದೆ.?

''ಈ ಸ್ವಭಾವಕ್ಕೆ ತಕ್ಕಂತೆ ಯಾವ ನಟರು ನಿಮ್ಮ ಮೈಂಡ್ ಗೆ ಬರ್ತಾರೆ.?'' ಎಂದು 'ಅತಿಯಾದ ಆಟಿಟ್ಯೂಡ್' ಎಂಬ ಸ್ವಭಾವವನ್ನು 'ಸಿಂಪಲ್' ಸುನಿ ಮುಂದಿಟ್ಟರು ನಿರೂಪಕ ಅಕುಲ್ ಬಾಲಾಜಿ.

'ಪಾಸ್' ಮಾಡಿದ ಸುನಿ

'ಪಾಸ್' ಮಾಡಿದ ಸುನಿ

'ಅತಿಯಾದ ಆಟಿಟ್ಯೂಡ್' ಎಂದ ಕೂಡಲೆ ಸ್ವಲ್ಪ ಕೂಡ ಯೋಚಿಸದೆ 'ಪಾಸ್' ಎಂದುಬಿಟ್ಟು 'ಜಾಣ್ಮೆ' ಪ್ರದರ್ಶಿಸಿದರು ನಿರ್ದೇಶಕ ಸುನಿ.

ಜಾಣ್ಮೆ ಪ್ರದರ್ಶಿಸಿದ ಸುನಿ

ಜಾಣ್ಮೆ ಪ್ರದರ್ಶಿಸಿದ ಸುನಿ

ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಲೇಬೇಕು ಎಂಬ ಹಠಕ್ಕೆ ಬೀಳದೆ, ವಿವಾದಾತ್ಮಕ ಪ್ರಶ್ನೆ ಬಂದಾಗ 'ಪಾಸ್' ಎಂದು ಹೇಳಿದ ಸುನಿ ವಿವಾದದ ಸುಳಿಗೆ ಸಿಲುಕಲಿಲ್ಲ. ಹಾಗೇ, ಉತ್ತರ ಕೊಡಲೇಬೇಕು ಎಂಬ ಇಕ್ಕಟ್ಟಿಗೂ ಸಿಲುಕಲಿಲ್ಲ.

More from Filmibeat

English summary
Director Suni refused to call any Sandalwood Star 'High In Attitude' in Colors Super Channel's Popular show 'Super Talk Time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X