»   » 'ಕಾಮನ್ ಮ್ಯಾನ್' ದಿವಾಕರ್ ಗೆ ಸೂಪರ್ ಅಧಿಕಾರ ಕೊಟ್ಟ 'ಮಾಸ್' ಮೇಘ

'ಕಾಮನ್ ಮ್ಯಾನ್' ದಿವಾಕರ್ ಗೆ ಸೂಪರ್ ಅಧಿಕಾರ ಕೊಟ್ಟ 'ಮಾಸ್' ಮೇಘ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎರಡನೇ ವಾರವೂ 'ಜನಸಾಮಾನ್ಯ' ಸ್ಪರ್ಧಿ ಔಟ್ ಆಗಿದ್ದಾರೆ. ಕೊಡಗಿನ ಕುವರಿ, ಶನಿವಾರಸಂತೆ ಸುಂದರಿ ಮೇಘ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾರೆ.

'ದೊಡ್ಮನೆ'ಯಿಂದ ಹೊರಬರುವ ಮುನ್ನ ಎಂದಿನಂತೆ, ಎಲಿಮಿನೇಟ್ ಆದ ಮೇಘಗೆ 'ಬಿಗ್ ಬಾಸ್' ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಮೇಘ, ದಿವಾಕರ್ ಗೆ ನೀಡಿದರು. ಮುಂದೆ ಓದಿರಿ....

ದಿವಾಕರ್ ಗೆ ಸಿಕ್ತು ಸೂಪರ್ ಅಧಿಕಾರ

'ಬಿಗ್ ಬಾಸ್' ಮನೆ ಮೊದಲೇ ಇಬ್ಭಾಗ ಆಗಿದೆ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಒಂದು ಗುಂಪಾಗಿದ್ದರೆ, ಜನಸಾಮಾನ್ಯ ಸ್ಪರ್ಧಿಗಳೆಲ್ಲ ಮತ್ತೊಂದು ಗುಂಪಾಗಿದ್ದಾರೆ. ಪದೇ ಪದೇ ಸೆಲೆಬ್ರಿಟಿ ಸ್ಪರ್ಧಿಗಳು ದಿವಾಕರ್ ರವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಟೈಮ್ ನಲ್ಲಿ ದಿವಾಕರ್ ಗೆ 'ಸೂಪರ್ ಅಧಿಕಾರ' ಲಭಿಸಿದೆ.

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು

'ಬಿಗ್ ಬಾಸ್' ಮನೆಯ ಗುಂಪುಗಾರಿಕೆಯನ್ನು ಗಮನಿಸಿರುವ ಮೇಘ, ದಿವಾಕರ್ ರವರಿಗೆ 'ಸೂಪರ್ ಅಧಿಕಾರ' ನೀಡಿದ್ದಾರೆ. ಈ 'ಸೂಪರ್ ಅಧಿಕಾರ'ವನ್ನು ದಿವಾಕರ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

ನೇರವಾಗಿ ನಾಮಿನೇಟ್ ಆಗಿರುವ ದಿವಾಕರ್

ಹಾಗ್ನೋಡಿದ್ರೆ, ದಿವಾಕರ್ ಈಗಾಗಲೇ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದಾರೆ. 'ಕಳಪೆ ಬೋರ್ಡ್' ಧರಿಸುವ ವಿಚಾರದಲ್ಲಿ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನಡುವೆ ಭಿನ್ನಾಭಿಪ್ರಾಯ ಮೂಡಿ ಕಡೆಗೆ ದಿವಾಕರ್ 'ಕಳಪೆ ಬೋರ್ಡ್' ಧರಿಸದ ಕಾರಣ ಶ್ರುತಿ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆಗಿದ್ದಾರೆ.

'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

ಏನು ಟ್ವಿಸ್ಟ್ ಬರಬಹುದು.?

ಈಗ ದಿವಾಕರ್ ಗೆ 'ಸೂಪರ್ ಅಧಿಕಾರ' ಸಿಕ್ಕಿರುವುದರಿಂದ 'ಬಿಗ್ ಬಾಸ್' ಮತ್ಯಾವ ಟ್ವಿಸ್ಟ್ ಕೊಡ್ತಾರೋ, ಕಾದು ನೋಡಬೇಕು.

English summary
Bigg Boss Kannada 5 Contestant Divakar gets Super Power from Megha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada