»   » 'ಮಜಾ ಟಾಕೀಸ್'ನಲ್ಲಿ ಅಣ್ಣಾವ್ರ ಅಭಿಮಾನ ಸಂಭ್ರಮಿಸಿದ ಸೃಜನ್ ಲೋಕೇಶ್

'ಮಜಾ ಟಾಕೀಸ್'ನಲ್ಲಿ ಅಣ್ಣಾವ್ರ ಅಭಿಮಾನ ಸಂಭ್ರಮಿಸಿದ ಸೃಜನ್ ಲೋಕೇಶ್

Posted By:
Subscribe to Filmibeat Kannada

ಕನ್ನಡಿಗರ ಆಸ್ತಿ, ಕರುನಾಡ ಶಕ್ತಿ, ಕನ್ನಡ ಚಲನಚಿತ್ರ ರಂಗಕ್ಕೆ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ತಂದುಕೊಟ್ಟ ಡಾ.ರಾಜ್ ಕುಮಾರ್ ಅವರ 89ನೇ ಹುಟ್ಟು ಹಬ್ಬ ಇದೆ ಏಪ್ರಿಲ್ 24 ರಂದು.

ಇಹಲೋಕ ತ್ಯಜಿಸಿ 11 ವರ್ಷಗಳು ಕಳೆದರು ಅಭಿಮಾನಿ ದೇವರುಗಳ ಮನದಲ್ಲಿ, ಕಣ್ಣಲ್ಲಿ ಇಂದಿಗೂ ಜೀವಂತವಾಗಿರುವ ಏಕೈಕ ವ್ಯಕ್ತಿ ಎಂದರೇ ಡಾ.ರಾಜ್ ಕುಮಾರ್. ಅವರ 89ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಕಲರ್ಸ್ ಕನ್ನಡ ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಚರಿಸಲಾಗಿದೆ. ಅಂತಹ ವಿಶೇಷತೆ ಏನಿದೆ ಅಂತಿರಾ?

ರಾಜ್ ಕುಮಾರ್ ವೇಶದಲ್ಲಿ 'ಮಜಾ ಟಾಕೀಸ್' ಕಲಾವಿದರು

'ಮಜಾ ಟಾಕೀಸ್' ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾರ್ಯಕ್ರಮದ ಪ್ರತಿಯೊಬ್ಬ ಪುರುಷ ಕಲಾವಿದರು ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ಪ್ರಖ್ಯಾತ ಪಾತ್ರಗಳ ವೇಶ ಭೂಷಣ ಧರಿಸಿ ಚಿತ್ರೀಕರಣ ಮಾಡಿದ್ದಾರೆ. ವಿಶೇಷ ಅಂದ್ರೆ ಸಂಪೂರ್ಣ 'ಮಜಾ ಟಾಕೀಸ್' ತಂಡ ಡಾ.ರಾಜ್ ಕುಮಾರ್ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿ ನಂತರ ಈ ಸಂಚಿಕೆಯ ಶೂಟಿಂಗ್ ಮಾಡಿದ್ದಾರೆ.

ಡಾ.ರಾಜ್ ಹುಟ್ಟು ಹಬ್ಬ ಸಂಭ್ರಮ ಪ್ರಯುಕ್ತ ಸೃಜನ್ ಲೋಕೇಶ್ ವಿಶೇಷ ಗೆಟಪ್

ಡಾ.ರಾಜ್ ಹುಟ್ಟು ಹಬ್ಬ ಸಂಭ್ರಮದ ಸಂಚಿಕೆಗಾಗಿ 'ಮಜಾ ಟಾಕೀಸ್' ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ರವರು 'ಆಕಸ್ಮಿಕ' ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಅಂದು ಡಾ.ರಾಜ್ ಕಾಣಿಸಿಕೊಂಡಿದ್ದ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ರೇಕ್ಷಕರ ಮಧ್ಯದಿಂದಲೇ ವೇದಿಕೆಗೆ ಬಂದು ಕಾರ್ಯಕ್ರಮ ಆರಂಭಿಸಿ ಅಣ್ಣಾವ್ರ 'ಜನರಿಂದ ನಾನು ಮೇಲೆ ಬಂದೆ' ಎಂಬ ಹಾಡನ್ನು ಸೊಗಸಾಗಿ ನೆನಪಿಸಿದ್ದಾರೆ.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು

ಡಾ.ರಾಜ್ ಹುಟ್ಟು ಹಬ್ಬದ ಸಂಭ್ರಮ ಆಚರಿಸಿರುವ ಈ ಸಂಚಿಕೆಗೆ ವಿಶೇಷ ಅತಿಥಿಗಳಾಗಿ ಇದೇ ಮೊಟ್ಟ ಮೊದಲ ಬಾರಿಗೆ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಕನ್ನಡ ಸಾಹಿತಿ ಬರಗೂರು ರಾಮಚಂದ್ರಪ್ಪ ರವರು, ನಿರ್ದೇಶಕ ಟಿ.ಎಸ್.ನಾಗಭರಣ ಮತ್ತು ಹಿರಿಯ ಕಲಾವಿದರಾದ ಎಂ.ಎಸ್.ಉಮೇಶ್ ಅವರು ಆಗಮಿಸಿದ್ದಾರೆ.

ಭಕ್ತ ಪ್ರಹ್ಲಾದ ಪಾತ್ರದಲ್ಲಿ ಕುರಿ ಪ್ರತಾಪ್

'ಮಜಾ ಟಾಕೀಸ್' ನೋಡುಗರಿಗೆ ಹೆಚ್ಚು ಮಜಾ ನೀಡುವ ಕುರಿ ಪ್ರತಾಪ್ ಈ ವಿಶೇಷ ಸಂಚಿಕೆಗೆ ಭಕ್ತ ಪ್ರಹ್ಲಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ರಮೇಶ್ ರವರು ಅಣ್ಣಾವ್ರ 'ಮಯೂರ'ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಕರ್ಷಕ ವೇಶ ಭೂಷಣದಲ್ಲಿ 'ಮಜಾ ಟಾಕೀಸ್' ತಾರೆಯರು

ಪುರುಷ ಕಲಾವಿದರಂತೆ 'ಮಜಾ ಟಾಕೀಸ್' ತಾರೆಯರು ಸಹ ಡಾ.ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಿದ ಜನಪ್ರಿಯ ನಾಯಕಿಯರಂತೆ ವೇಷ ಭೂಷಣ ಧರಿಸಿದ್ದಾರೆ. ಇನ್ನೂ ಬರೀ ಹೋಳು ಡೈಲಾಗುಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಅಪರ್ಣಾ(ವರು) ದುರ್ಗಿ ಅವತಾರದಲ್ಲಿ ನಟಿಸಿದ್ದಾರೆ.

ಮಿಸ್ ಮಾಡದೇ ನೋಡಿ

ಡಾ.ರಾಜ್ ಕುಮಾರ್ ರವರ 89 ನೇ ಹುಟ್ಟು ಹಬ್ಬದ ಸಂಭ್ರದ 'ಮಜಾ ಟಾಕೀಸ್' ವಿಶೇಷ ಸಂಚಿಕೆಯು ಇಂದು ಮತ್ತು ನಾಳೆ (ಏಪ್ರಿಲ್ 22 ಮತ್ತು 23) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಮಿಸ್ ಮಾಡದೇ ನೋಡಿ.

English summary
Kannada Actor Dr.Rajkumar 89th Birthday Celebration in Majaa Talkies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada